More

    ಜ್ಞಾನದ ಹಸಿವು ಇಲ್ಲದವನ ಬದುಕು ಬರಡು

    ಮಾನ್ವಿ : ಪ್ರತಿಯೊಬ್ಬರಿಗೂ ಜ್ಞಾನಬೇಕು, ಜ್ಞ್ಞಾನದ ಹಸಿವು ಇಲ್ಲದವನ ಬದುಕು ಬರಡಗಿರುತ್ತದೆ. ಜ್ಞ್ಞಾನ ದಾಹ ಇದ್ದವರ ಬಾಳು ಸುಂದರವಾಗಿರುತ್ತದೆ ಎಂದು ತಪಸಿಹಳ್ಳಿ ದೊಡ್ಡಬಳ್ಳಾಪುರದ ಪುಷ್ಪಾಂಡಜಮುನಿ ಆಶ್ರಮದ ದಿವ್ಯಜ್ಞಾನಾನಂದಗಿರಿ ಸ್ವಾಮಿಗಳು ಹೇಳಿದರು.

    ಇದನ್ನೂ ಓದಿರಿ: ನ.29ರಿಂದ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದಿಪೋತ್ಸವ

    ಪಟ್ಟಣದ ಚೌಡೇಶ್ವರಿ ದೇವಸ್ಥಾನದಲ್ಲಿ ಶನಿವಾರ ತೊಗಟವೀರ ಕ್ಷತ್ರಿಯ ಸಮಾಜದಿಂದ ಶ್ರಾವಣ ಮಾಸದ ಪ್ರಯುಕ್ತ ನಡೆದ ಪ್ರವಚನ ಹಾಗೂ ದಿಪೋತ್ಸವ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಶ್ರಾವಣ ಮಾಸದಲ್ಲಿ ದೇವಿಯನ್ನು ಆರಾಧಿಸುವುದರಿಂದ ವಿಶೇಷವಾದ ಫಲಗಳು ದೊರೆಯುತ್ತವೆ ಮನಶುದ್ಧ, ಕಾಯಶುದ್ಧಿಯಾಗಿ ಎಲ್ಲ ದುಃಖಗಳಿಂದ ದೂರವಾಗಿ ನಮಗೆ ಆನಂದ ಪ್ರಪ್ತಾವಾಗುತ್ತದೆ. ಸಮರ್ಪಣೆ, ಧ್ಯಾನ, ಧನ್ಯತ ಮನೋಭಾವನೆ ಉಳ್ಳವರಾಗಿ. ವಿದ್ಯೆಯಿಂದ ವಿನಯವನ್ನು ಯೋಗ್ಯತೆಯಿಂದ ಧನವನ್ನು ಪಡೆದು, ಪಡೆದ ಧನವನ್ನು ಸತ್ಕಾರ್ಯಗಳಿಗೆ ವಿನಿಯೋಗಿಸಿದಾಗ ಮಾತ್ರ ಪುಣ್ಯಫಲ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.

    ತೊಗಟವೀರ ಕ್ಷತ್ರಿಯ ಸಮಾಜದ ತಾಲೂಕು ಅಧ್ಯಕ್ಷ ಬಿ.ರಾಮದಾಸ, ಗೌರವಧ್ಯಾಕ್ಷ ರಾಮಯ್ಯ ಕುಂಬಳೂರು, ಮುಖಂಡರಾದ ಜಿ.ನಾಗರಾಜ, ಗಜೇಂದ್ರ ಕುಮಾರ, ಶ್ರೀನಿವಾಸ, ಯುವಕ ಸಂಘದ ತಾಲೂಕು ಅಧ್ಯಕ್ಷ ಹನುಮೇಶ ಕುಂಬಳೂರು, ಮಹಿಳಾ ಮಂಡಳಿಯ ಅಧ್ಯಕ್ಷೆ ಅನ್ನಪೂರ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts