More

    ಸಂಘಟನೆಯಿಂದ ಸೌಲಭ್ಯ ಪಡೆಯಲು ಸಾಧ್ಯ, ಜಿಪಂ ಮಾಜಿ ಸದಸ್ಯ ಮಹಾಂತೇಶ ಪಾಟೀಲ್

    ಮಾನ್ವಿ: ಜೀವನದಲ್ಲಿ ಸಾಧನೆಗೆ ಶಿಕ್ಷಣ ಪ್ರಮುಖ ಅಸ್ತ್ರವಾಗಿದ್ದು, ಉನ್ನತ ಹುದ್ದೆ, ರಾಜಕೀಯವಾಗಿ ಬೆಳೆಯಲು ಶಿಕ್ಷಣದ ಪಾತ್ರ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಜಿಪಂ ಮಾಜಿ ಸದಸ್ಯ ಮಹಾಂತೇಶ ಪಾಟೀಲ್ ಅತ್ತನೂರು ತಿಳಿಸಿದರು.

    ಜಾತಿ ಪಟ್ಟಿ ಸೇರ್ಪಡೆಗಾಗಿ ಹೋರಾಟ

    ಪಟ್ಟಣದಲ್ಲಿ ಜಿಲ್ಲಾ ಲಾಳಗೊಂಡ ಸಮಾಜದ ಅಧ್ಯಕ್ಷಗೆ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಲವು ವರ್ಷಗಳಿಂದ ಲಾಳಗೊಂಡ ಸಮಾಜ ಜಾತಿ ಪಟ್ಟಿ ಸೇರ್ಪಡೆಗಾಗಿ ಅನೇಕ ಹೋರಾಟಗಳನ್ನು ಮಾಡಿದೆ. ಆದರೆ, ವೀರಭದ್ರಪ್ಪ ಅಲ್ದಾಳ ಜಿಲ್ಲಾ ಅಧ್ಯಕ್ಷರಾದ ನಂತರ ಹೋರಾಟಕ್ಕೆ ಬಲ ಬಂದಿದೆ ಎಂದರು.

    ಇದನ್ನೂ ಓದಿ: ಇದೇ ನೋಡಿ ವಿಶ್ವದ ದುಬಾರಿ ನಂಬರ್‌ ಪ್ಲೇಟ್; 122 ಕೋಟಿ ರೂ. ನೀಡಿ ಕಾರಿನ ನಂಬರ್ ಪ್ಲೇಟ್ ಖರೀದಿಸಿದ ವ್ಯಕ್ತಿ!

    ಪ್ರತ್ಯೆಕ ಅಭಿವೃದ್ಧಿ ನಿಗಮ

    ಲಾಳಗೊಂಡ ಸಮಾಜದ ಯುವಕರು ಸಂಘಟನೆಗೆ ಹೆಚ್ಚಿನ ಒತ್ತು ಕೊಡಬೇಕು. ಸಂಘಟನೆಯಾದಂತೆ ಮುಂದಿನ ದಿನಗಳಲ್ಲಿ ಲಾಳಗೊಂಡ ಸಮಾಜದ ಪ್ರತ್ಯೆಕ ಅಭಿವೃದ್ಧಿ ನಿಗಮ, ಸಮುದಾಯ ಭವನ ಸೇರಿ ಇತರ ಸೌಲಭ್ಯಗಳು ಪಡೆಯಲು ಸಹಾಯವಾಗುತ್ತದೆ ಎಂದು ಹೇಳಿದರು.

    ತಾಲೂಕು ಕಾರ್ಯದರ್ಶಿ ಗುಂಡಪ್ಪಗೌಡ ಕಲ್ಲೂರು, ವಕೀಲರಾದ ಮಹಾಂತೇಶ ಗವಿಗಟ್ಟು, ಸಿದ್ದಲಿಂಗಪ್ಪ ಕೊಟ್ನೆಕಲ್, ಪ್ರಮುಖರಾದ ಶಿವಪ್ಪಗೌಡ ಹಳ್ಳಿಹೊಸೂರು, ವೀರಭದ್ರಗೌಡ ಭೋಗಾವತಿ, ನೀಲಪ್ಪಗೌಡ ಜಾನೇಕಲ್, ಚಂದ್ರೇಗೌಡ ಸಿಂಧನೂರು, ಶಂಭುಲಿಂಗನಗೌಡ, ಚನ್ನಬಸವ ಬೆಟ್ಟದೂರು, ಅಮರೇಶಗೌಡ ಗವಿಗಟ್ಟು, ಶರಣಪ್ಪ ಮೇಟಿ, ರಾಮನಗೌಡ ಬಾಗಲವಾಡ, ಸಂತೋಷ ಮಾಡಗಿರಿ, ಹಂಪನಗೌಡ ಗುಂಡುಕಂಬಾಲಿ, ಶರಣಪ್ಪ ಮೂಲೆಮನಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts