More

    ಜಾತಿಪಟ್ಟಿಗೆ ಲಾಳಗೊಂಡ ಸೇರ್ಪಡೆಗೊಳಿಸಿ

    ಮಾನ್ವಿ : ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದು ಲಿಂಗಾಯತ ಲಾಳಗೊಂಡ ಸಮುದಾಯವನ್ನು ಸರ್ಕಾರದ ಜಾತಿಪಟ್ಟಿಯಲ್ಲಿ ಸೇರಿಸುವಂತೆ ಶಾಸಕ ರಾಜಾ ವೆಂಕಟಪ್ಪ ನಾಯಕಗೆ ಲಿಂಗಾಯತ ಲಾಳಗೊಂಡ ಸಮುದಾಯದ ಮಾನ್ವಿ ಮತ್ತು ಸಿರವಾರ ತಾಲೂಕು ಘಟಕದಿಂದ ಮನವಿ ಸಲ್ಲಿಸಲಾಯಿತು.

    ಸಮಾಜವು 800 ವರ್ಷಗಳಿಂದಲೂ ಲಿಂಗಾಯತ ಲಾಳಗೊಂಡ ಎಂದು ಗುರುತಿಸಿಕೊಂಡಿದ್ದು, ನಾವು ಕೂಡ ಅಂದಿನಿಂದ ಇಂದಿನವರೆಗೂ ಲಿಂಗಾಯತ ಲಾಳಗೊಂಡ ಜಾತಿಯಲ್ಲಿ ಮುಂದುವರಿಯುತ್ತಿದ್ದೇವೆ. ಸ್ವಾತಂತ್ರೃ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಜಾತಿಗಳನ್ನು ಗುರುತಿಸಿ ಜಾತಿಪಟ್ಟಿಯಲ್ಲಿ ಅನುಮೊದಿಸಿವೆ. ಆದರೆ ನಮ್ಮ ಲಿಂಗಾಯತ ಲಾಳಗೊಂಡ ಜಾತಿಯನ್ನು ಸೇರಿಸಿಲ್ಲ. ಆದ್ದರಿಂದ ನಮ್ಮ ಸಮಾಜಕ್ಕೆ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಸಮಾಜದ ಪ್ರಮುಖರು ದೂರಿದರು.

    ನಮ್ಮ ರಾಜ್ಯದಲ್ಲಿ 15ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಇದ್ದು ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ 40 ಸಾವಿರಕ್ಕಿಂತ ಅಧಿಕ ಜನರಿದ್ದಾರೆ. ರಾಜ್ಯದ ವಿವಿಧ ಜಿಲ್ಲೆ, ದೇಶದ ವಿವಿಧ ರಾಜ್ಯಗಳಲ್ಲಿ ನಮ್ಮ ಸಮಾಜದ ಜೀವನ ಸಾಗಿಸುತ್ತಿದ್ದಾರೆ. ನಮ್ಮ ಜನಾಂಗದ ಮೂಲ ವೃತ್ತಿ ಕೃಷಿ ಮತ್ತು ಕೂಲಿ ಕೆಲಸವಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾತಿಪಟ್ಟಿಯಲ್ಲಿ ಹೆಸರು ಸೇರಿಸದೆ ಮಲತಾಯಿ ಧೋರಣೆ ತೊರುತ್ತಿವೆ ಎಂದು ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts