More

    ಆರೋಗ್ಯ ಪರೀಕ್ಷೆ ಸಲಕರಣೆ ಸುರಕ್ಷಿತವಾಗಿರಿಸಲು ಕೇಂದ್ರ ಜಲಶಕ್ತಿ ಇಲಾಖೆ ಜಂಟಿ ಕಾರ್ಯದರ್ಶಿ ಸುಭೋದ್ ಯಾದವ್ ಸೂಚನೆ

    ಮಾನ್ವಿ: ಮಕ್ಕಳಿಗೆ ಸಮರ್ಪಕವಾಗಿ ಪೌಷ್ಟಿಕ ಆಹಾರ ನೀಡುವುದರೊಂದಿಗೆ ಮಕ್ಕಳ ಆರೋಗ್ಯ ತಪಾಸಣೆಗೆ ಸರ್ಕಾರ ನೀಡಿರುವ ಸಲಕರಣೆಗಳನ್ನು ಕಾಪಾಡಿಕೊಳ್ಳಬೇಕು ಎಂದು ಕೇಂದ್ರ ಜಲಶಕ್ತಿ ಇಲಾಖೆ ಜಂಟಿ ಕಾರ್ಯದರ್ಶಿ ಸುಭೋದ್ ಯಾದವ್ ಸೂಚಿಸಿದರು.

    ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು. ತಾಲೂಕಿನ ಕೆಲವಡೆ ಅಂಗನಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿವೆ. ಕಟ್ಟಡ ನಿರ್ಮಾಣಕ್ಕೆ ಸ್ಥಳ ನೀಡಿದರೆ ಅನುಕೂಲವಾಗುತ್ತದೆ ಎಂದರು. ಮಕ್ಕಳ ತೂಕದ ಯಂತ್ರ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಬೇಸರ ವ್ಯಕ್ತಪಡಿಸಿದರು. ಮಕ್ಕಳಿಗೆ ಮೊಟ್ಟೆ ಹಾಗೂ ಇತರ ಆಹಾರ ನೀಡುವ ಕುರಿತು ಮಾಹಿತಿ ಪಡೆದುಕೊಂಡರು.

    ಗ್ರಾಮದ ಆದರ್ಶ ವಿದ್ಯಾಲಯಕ್ಕೆ ಭೇಟಿ ನೀಡಿ ಅಟಲ್ ಟಿಂಕರಿಂಗ್ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್ ವೀಕ್ಷಣೆ ಮಾಡಿದರು. ಶಿಕ್ಷಕರ ಕೊರತೆ, ಫಲಿತಾಂಶದ ಮಾಹಿತಿ ಪಡೆದುಕೊಂಡರು. ಇಂಗ್ಲಿಷ್ ಪ್ರಯೋಗಾಲಯ ಆರಂಭಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡುವಂತೆ ಸುಭೋದ್ ಯಾದವ್‌ಗೆ ಶಿಕ್ಷಕರು ಮನವಿ ಸಲ್ಲಿಸಿದರು.

    ತಾಲೂಕಿನ ಹಿರೇಕೊಟ್ನೆಕಲ್ ರೈತ ಸಂಪರ್ಕ ಕೇಂದ್ರದಲ್ಲಿ ರೈತರೊಂದಿಗೆ ಚರ್ಚೆ ನಡೆಸಿದರು ಗೊಬ್ಬರ ಬೆಲೆ ಹೆಚ್ಚಳ, ಫಸಲ್ ಬಿಮಾ ಯೋಜನೆಯಡಿ ರೈತರಿಗೆ ಸಮರ್ಪಕವಾಗಿ ಹಣ ಸಂದಾಯವಾಗದಿರುವ ಬಗ್ಗೆ, ಮಣ್ಣಿನ ಪರೀಕ್ಷೆ ಕೇಂದ್ರ ಸ್ಥಾಪನೆ ಕುರಿತು ರೈತರು ಬೇಡಿಕೆ ಸಲ್ಲಿಸಿದರು. ಕುರ್ಡಿ ಗ್ರಾಮದಲ್ಲಿ ಸಮಗ್ರ ಕೃಷಿ ಪದ್ಧತಿ ಕುರಿತು ಮಾಹಿತಿ ಪಡೆದುಕೊಂಡರು.

    ಜಿಪಂ ಸಿಇಒ ನೂರ್ ಜಹರಾ ಖಾನಂ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವೀರನಗೌಡ, ತಹಸೀಲ್ದಾರ್ ಚಂದ್ರಕಾಂತ, ತಾಪಂ ಇಒ ಸ್ಟೆಲ್ಲಾ ವರ್ಗಿಸ್, ಸಿಡಿಪಿಒ ಸುಭದ್ರಾದೇವಿ, ಬಿಇಒ ವೆಂಕಟೇಶ ಗುಡಿಹಾಳ, ಕೃಷಿ ಅಧಿಕಾರಿ ಹುಸೇನ್ ಸಾಬ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts