More

    ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ- ಶಾಸಕ ರಾಜಾ ವೆಂಕಟಪ್ಪನಾಯಕ ಭರವಸೆ

    ಮಾನ್ವಿ: ಚನ್ನದಾಸರ ಸಮಾಜ ಶೈಕ್ಷಣಿಕ, ಆರ್ಥಿಕ, ರಾಜಕೀಯ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಸಂಘಟನಾತ್ಮಕ ಶಕ್ತಿಯಾಗಿ ರೂಪುಗೊಂಡಾಗ ಮಾತ್ರ ಎಲ್ಲಾ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು.

    ಪಟ್ಟಣದ ಎಪಿಎಂಸಿ ಕಲ್ಯಾಣಮಂಟಪದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಪರಿಶಿಷ್ಠ ಜಾತಿ ಚನ್ನದಾಸರ, ಹೊಲೆಯ ದಾಸರ, ಮಾಲ ದಾಸರ, ಜನ ಸೇವಾ ಸಮಿತಿ ಮಾನ್ವಿ ವತಿಯಿಂದ ಏರ್ಪಡಿಸಿದ್ದ ಚನ್ನದಾಸರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಚನ್ನದಾಸರ ಸಮಾಜ ಇಂದಿಗೂ ತಮ್ಮ ಮೂಲ ವೃತ್ತಿಯನ್ನೇ ನಂಬಿಕೊಂಡು ತೀರಾ ಹಿಂದುಳಿದ ಸಮಾಜವಾಗಿದೆ. ಸಮಾಜದ ಹಿತದೃಷ್ಟಿಯಿಂದ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.

    ಪ್ರಮುಖರಾದ ಸಾವಿತ್ರಿ ರತ್ನಾಕರ್, ಮಾಧವಿ, ಗೋವಿಂದಪ್ಪ, ಹನುಮಂತ ಕಾಡ್ಲೂರು, ಗುರುನಂದನ, ಗಿರಿಯಪ್ಪ, ದೇವೇಂದ್ರಪ್ಪ, ರಂಗಯ್ಯ, ವಿಜಯದಾಸ, ಗೋವಿಂದ ಚಿಂತಮಾನದೊಡ್ಡಿ, ಡಿ.ಹನುಮಂತ ಕಪಗಲ್, ತಿಮ್ಮಪ್ಪ, ಗೋವಿಂದ ಮಾನ್ವಿ, ಯಂಕೋಬ ಮಾನ್ವಿ, ಹನುಮಂತ ಸಂಗಾಪುರು, ಚಂದ್ರಶೇಖರ ಗವಿಗಟ್, ಹರಿದಾಸ ಹರವಿ, ವಾಸುದೇವ, ಚನ್ನದಾಸರ ಸಮಾಜದ ಮುಖಂಡರು, ಮಹಿಳೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts