More

    ಬಸವಣ್ಣನವರ ವಚನ ಮಾರ್ಗ ಅನುಸರಿಸಲಿ; ಯುವಕರಿಗೆ ಪ್ರವಚನಗಾರ್ತಿ ಬಸವರಾಜೇಶ್ವರಿ ಅತ್ತಿವೇರಿ ಸಲಹೆ

    ಮಾನ್ವಿ: ಯುವಕರು ದುಶ್ಚಟಗಳಿಂದ ಜೀವನ ಹಾಳು ಮಾಡಿಕೊಳ್ಳದೆ, ಬಸವಣ್ಣ ಮತ್ತು ಅವರ ಸಮಕಾಲೀನ ಶರಣರ ವಚನ ಸಾಹಿತ್ಯ ಅಭ್ಯಾಸ ಮಾಡುವ ಮೂಲಕ ನಿಜ ಜೀವನ ಕಡೆ ಸಾಗಬೇಕು ಎಂದು ಪ್ರವಚನಗಾರ್ತಿ ಬಸವರಾಜೇಶ್ವರಿ ಅತ್ತಿವೇರಿ ತಿಳಿಸಿದರು.

    ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬಸವಕೇಂದ್ರ ಹಮ್ಮಿಕೊಂಡಿದ್ದ ವಚನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವಣ್ಣವರು ಸರಳವಾಗಿ ತಿಳಿಯುವಂತೆ ವಚನಗಳನ್ನು ರಚಿಸಿದ್ದಾರೆ. ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಿದಾಗ ಕಲ್ಯಾಣ ನಾಡು ಆಗಲು ಸಾಧ್ಯ. ಕಾಯಕ, ದಾಸೋಹ ಮತ್ತು ಸಮಾನತೆ ತತ್ವಗಳನ್ನು ಸಾರಿದ ಬಸವಣ್ಣವರು ನುಡಿದಂತೆ ನಡೆದರು. 12 ನೇ ಶತಮಾನದಲ್ಲಿ ಜಾತಿ ಪದ್ಧತಿ ಹೋಗಲಾಡಿಸಲು ಎಲ್ಲ ಸಮುದಾಯದವರಿಗೂ ಲಿಂಗಧಾರಣೆ ಮಾಡಿ ಸಮಾನತೆ ಸಾರಿದರು. ಆದರೆ ನಾವು ಇನ್ನೂ ಜಾತಿಗಳಿಗೆ ಜೋತು ಬಿದ್ದಿರುವುದು ಸರಿಯಲ್ಲ ಎಂದು ಹೇಳಿದರು.

    ಸ್ತ್ರೀಯರಿಗೆ ಸ್ವಾತಂತ್ರೃ ಕೊಡಿಸಿದ ಬಸವಣ್ಣವರು, ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಅಕ್ಷರ ಅಭ್ಯಾಸ ಮಾಡಿಸಿದರು. ಇದರಿಂದಾಗಿ 33 ಶರಣೆಯರು ವಚನಗಳನ್ನು ರಚಿಸಿದ್ದಾರೆ ಎಂದು ಬಸವರಾಜೇಶ್ವರಿ ಅತ್ತಿವೇರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts