More

    ಮಂತ್ರಾಲಯ ಕ್ಷೇತ್ರದ ರಾಯರ ಭಕ್ತರಿಗೆ ಗುಡ್​ ನ್ಯೂಸ್​!

    ರಾಯಚೂರು: ಆರು ತಿಂಗಳ ನಂತರ ಮಂತ್ರಾಲಯದ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಬಾಗಿಲು ತೆರೆದಿದ್ದು, ಶುಕ್ರವಾರದಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ

    ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಮಾರ್ಚ್ 21ರಿಂದ ಭಕ್ತರಿಗೆ ಪ್ರವೇಶ ನಿಷೇಧಿಸಿ ಶ್ರೀಮಠದ ಬಾಗಿಲನ್ನು ಹಾಕಲಾಗಿತ್ತು. ಸುಮಾರು 200 ದಿನಗಳ ನಂತರ ರಾಯರ ಮಠದಲ್ಲಿ ಭಕ್ತರಿಗೆ ವೃಂದಾವನ ದರ್ಶನಕ್ಕೆ ಅವಕಾಶ ಕಲ್ಪಿಸಲು ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮಠದ ಮಹಾದ್ವಾರಕ್ಕೆ ಪೂಜೆ ಸಲ್ಲಿಸಿ ಬಾಗಿಲು ತೆಗೆದರು. ಮಠವನ್ನು ತಳಿರು-ತೋರಣದಿಂದ ಸಿಂಗರಿಸಲಾಗಿತ್ತು.

    ಮಂತ್ರಾಲಯ ಕ್ಷೇತ್ರದ ರಾಯರ ಭಕ್ತರಿಗೆ ಗುಡ್​ ನ್ಯೂಸ್​!ಈ ವೇಳೆ ಮಾತನಾಡಿದ ಶ್ರೀಗಳು, ಕರೊನಾತಂಕ ಹಿನ್ನೆಲೆಯಲ್ಲಿ ಲಾಕ್​ಡೌನ್ ಜಾರಿಯಾದ ಕಾರಣಕ್ಕೆ ಮಠದ ಬಾಗಿಲನ್ನು ಮುಚ್ಚಲಾಗಿತ್ತು. ಇದೀಗ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಭಕ್ತರಿಗೆ ರಾಯರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಭಕ್ತರು ತಮ್ಮ ಆರೋಗ್ಯರಕ್ಷಣೆ ಜತೆಗೆ ಎಲ್ಲರ ಯೋಗಕ್ಷೇಮದ ಬಗ್ಗೆಯೂ ಕಾಳಜಿ ಇರಿಸಿಕೊಂಡು ದರ್ಶನಕ್ಕೆ ಆಗಮಿಸಬೇಕು ಎಂದರು. ದೇಶದಲ್ಲಿ ಕರೊನಾ ನಿವಾರಣೆ ಆಗಬೇಕೆಂದು ರಾಯರನ್ನು ಪ್ರಾರ್ಥಿಸಬೇಕು ಎಂದು ಸಲಹೆ ನೀಡಿದರು.

    ವಿಐಪಿ ದರ್ಶನವಿಲ್ಲ. ಸಾಮಾನ್ಯ ದರ್ಶನಕ್ಕಷ್ಟೇ ಅನುಮತಿ ನೀಡಲಾಗಿದೆ. ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ರಾಯರ ದರ್ಶನಕ್ಕೆ ಬರುವ ಭಕ್ತರು ಮಾಸ್ಕ್ ಧರಿಸುವ ಜತೆಗೆ ದೈಹಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯುವಂತಿಲ್ಲ. ರಾಯರ ಮಠದ ಬಾಗಿಲು ತೆರೆಯುವ ಸುದ್ದಿ ತಿಳಿದ ಭಕ್ತರು ಶುಕ್ರವಾರ ಬೆಳಗ್ಗೆಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿದ್ದರು.

    VIDEO| ರಾಯರ ಮಠದಲ್ಲಿ ಊಟಕ್ಕೆ ಕುಳಿತ್ತಿದ್ದ ಬಾಲಕ ಅಚ್ಚರಿಯ ಬೇಡಿಕೆ ಇಟ್ಟ! ತುಸು ನಕ್ಕ ಮಂತ್ರಾಲಯ ಶ್ರೀಗಳು ಮಾಡಿದ್ದೇನು?

    ನನ್ನ ಮಗನ ಫೋಟೋ-ಹೆಸರು ಬಳಸಿದ್ರೆ ಬೆಂಕಿ ಹಚ್ಚಿಸ್ತೀನಿ: ಸೊಸೆ ವಿರುದ್ಧ ಸಿಡಿದೆದ್ದ ಡಿ.ಕೆ. ರವಿ ತಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts