More

    ವಾಡಿಕೆ ತಲುಪದ ಮುಂಗಾರು

    ಭರತ್ ಶೆಟ್ಟಿಗಾರ್, ಮಂಗಳೂರು
    ಹವಾಮಾನ ಇಲಾಖೆ ಆರಂಭದಲ್ಲೇ ಹೇಳಿರುವಂತೆ ಈ ವರ್ಷ ಕರಾವಳಿಯಲ್ಲಿ ಸುರಿದದ್ದು ಸಾಮಾನ್ಯ ಮುಂಗಾರು. ದ.ಕ ಜಿಲ್ಲೆಯಲ್ಲಿ ಈ ಬಾರಿ ಜೂನ್‌ನಿಂದ ಆಗಸ್ಟ್‌ವರೆಗೆ ವಾಡಿಕೆಗಿಂತ ಭಾರಿ ಪ್ರಮಾಣದಲ್ಲಿ ಮಳೆ ಪ್ರಮಾಣ ಇಳಿಕೆಯಾಗಿದೆ. ಆದರೆ ಉಡುಪಿಯಲ್ಲಿ ‘ಪರವಾಗಿಲ’್ಲ ಎನ್ನುವ ಸ್ಥಿತಿ.

    ದ.ಕ ಜಿಲ್ಲೆಯಲ್ಲಿ ಈ ಬಾರಿ ಜೂನ್‌ನಿಂದ ಆಗಸ್ಟ್‌ವರೆಗೆ 2,452 ಮಿ.ಮೀ. ಮಳೆಯಾಗಿದೆ. ವಾಡಿಕೆ ಮಳೆ 3065ಮಿ.ಮೀ., ಅಂದರೆ ವಾಡಿಕೆಗಿಂತ ಶೇ.20ರಷ್ಟು ಮಳೆ ಕೊರತೆಯಾಗಿದೆ. ಉಡುಪಿಯಲ್ಲಿ 3,552ಮಿ.ಮೀ. ಮಳೆಯಾಗಿದ್ದು ವಾಡಿಕೆ ಮಳೆ 3,638 ಮಿ.ಮೀ. ಶೇ.2ರಷ್ಟು ಮಳೆ ಕಡಿಮೆಯಾಗಿದೆ. ಪ್ರತಿ ತಿಂಗಳ ಮಳೆ ಪ್ರಮಾಣವನ್ನು ಗಮನಿಸಿದರೆ ಉಭಯ ಜಿಲ್ಲೆಗಳಲ್ಲಿ ಆಗಸ್ಟ್ ತಿಂಗಳಲ್ಲಿ ಮಾತ್ರ ವಾಡಿಕೆಗಿಂತ ಸ್ವಲ್ಪ ಮಳೆ ಹೆಚ್ಚಾಗಿದೆ. ಮುಂಗಾರು ಅಂತ್ಯಕ್ಕೆ ಕೆಲವೇ ದಿನಗಳು ಬಾಕಿ ಇರುವುದರಿಂದ ಇನ್ನು ವಾಡಿಕೆ ಮೀರಿ ಮ ಸುರಿಯುವ ಸಾಧ್ಯತೆ ಕಡಿಮೆ. ಜನವರಿಯಿಂದ ಆಗಸ್ಟ್‌ವರೆಗಿನ ಒಟ್ಟು ಮಳೆ ಲೆಕ್ಕಾಚಾರದಲ್ಲಿಯೂ, ವಾಡಿಕೆಗಿಂತ ಕಡಿಮೆಯೇ ಮಳೆ ಸುರಿದಿದೆ. ದ.ಕ.ಶೇ 19 ಮತ್ತು ಉಡುಪಿಯಲ್ಲಿ ಶೇ.3ರಷ್ಟು ಮಳೆ ಕೊರತೆಯಾಗಿದೆ.

    ಕಳೆದ ವರ್ಷದ ಮಳೆ ಕಡಿಮೆ: ದ.ಕ ಜಿಲ್ಲೆಯಲ್ಲಿ ಕಳೆದ ವರ್ಷವೂ ಮೂರು ತಿಂಗಳ ಮಳೆ ಲೆಕ್ಕಾಚಾರದಲ್ಲಿ ದ.ಕ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.14ರಷ್ಟು ಕಡಿಮೆ ಮಳೆಯಾಗಿತ್ತು. ಜ.1ರಿಂದ ಆ.31ರವರೆಗೆ ಸರಿದ ಮಳೆ 2,953 ಮಿ.ಮೀ. ಇದೇ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.1ರಷ್ಟು ಮಳೆ ಹೆಚ್ಚಾಗಿತ್ತು. ಉಡುಪಿಯಲ್ಲಿ ಸುರಿದ ಮಳೆ 3,959 ಮಿ.ಮೀ. ಕಳೆದ ವರ್ಷ ಮಳೆ ಕಡಿಮೆಯಾಗಿ ಏಪ್ರಿಲ್-ಮೇ ತಿಂಗಳಲ್ಲಿ ಕುಡಿಯುವ ನೀರಿಗೆ ಕೊರತೆ ಉಂಟಾಗಬಹುದು ಎಂದು ಅಂದಾಜಿಸಲಾಗಿದ್ದರೂ, ಬೇಸಿಗೆಯಲ್ಲಿ ಸುರಿದ ಮಳೆ ನೀರಿನ ಕೊರತೆ ನೀಗಿಸಿತ್ತು. ಈ ಬಾರಿ ಮತ್ತೆ ಅದೇ ಭೀತಿ ಕಾಣಿಸಿದೆ.

    ಕರಾವಳಿಯಲ್ಲಿ ಮೂರು ತಿಂಗಳ ಮಳೆಗಾಲ ಮುಗಿದಿದೆ. ಹವಾಮಾನದ ಪ್ರಸ್ತುತ ಮಾಹಿತಿಯಂತೆ ಇನ್ನು ಅಬ್ಬರದ ಮಳೆ ಕಡಿಮೆ. ಆದ್ದರಿಂದ ದ.ಕ.ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸಾಧ್ಯತೆಯಿಲ್ಲ. ಉಡುಪಿಯಲ್ಲಿ ಸ್ವಲ್ಪ ಹೆಚ್ಚು ಅಥವಾ ಕಡಿಮೆಯಾಗಬಹುದು.
    ಸುನೀಲ್ ಗಾವಸ್ಕರ್, ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ

    3 ತಿಂಗಳ ಮಳೆ ಪ್ರಮಾಣ
    ದಕ್ಷಿಣ ಕನ್ನಡ
    ತಿಂಗಳು       ಮಳೆ ಪ್ರಮಾಣ     (ವಾಡಿಕೆ)     ಕೊರತೆ/ಹೆಚ್ಚಳ
    ಜೂನ್         630 ಮಿ.ಮೀ     (928)       ಶೇ.32 ಕೊರತೆ
    ಜುಲೈ         833 ಮಿ.ಮೀ     (1232)      ಶೇ.21 ಕೊರತೆ
    ಆಗಸ್ಟ್        985ಮಿ.ಮೀ      (892)       ಶೇ.10 ಹೆಚ್ಚಳ
    ಉಡುಪಿ
    ಜೂನ್         1016 ಮಿ.ಮೀ   (1106)      ಶೇ.8 ಕೊರತೆ
    ಜುಲೈ         1184 ಮಿ.ಮೀ   (1448)      ಶೇ. 18 ಕೊರತೆ
    ಆಗಸ್ಟ್        1350 ಮಿ.ಮೀ.  (1064)      ಶೇ. 27ಹೆಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts