More

    ಪ್ರಕೃತಿ ಮೇಲೆ ಮಾನವ ನಿರಂತರ ದಬ್ಬಾಳಿಕೆ

    ಶಿಕಾರಿಪುರ: ವನ್ಯಜೀವಿಗಳು ಪ್ರಕೃತಿಯ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಮಾನವನ ಪ್ರಕೃತಿಯ ಮೇಲಿನ ದಬ್ಬಾಳಿಕೆಯಿಂದ ಸಮೃದ್ಧ ಕಾಡು ಮತ್ತು ವನ್ಯಜೀವಿ ಸಂತತಿ ಕುಸಿಯುತ್ತಿದ್ದು ಸಮತೋಲನಕ್ಕೆ ಪೆಟ್ಟು ಬೀಳುತ್ತಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ರೇವಣಸಿದ್ದಯ್ಯ ಹಿರೇಮಠ ಬೇಸರ ವ್ಯಕ್ತಪಡಿಸಿದರು.

    ನಗರದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಹಾಗೂ ಕುಮದ್ವತಿ ಪ್ರಥಮ ದರ್ಜೆ ಕಾಲೇಜು, ಅರಣ್ಯ ಇಲಾಖೆ, ರೋಟರಿ ಕದಂಬ, ಸ್ಥಳೀಯ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕುಮದ್ವತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ವನ್ಯಜೀವಿ ಸಪ್ತಾಹದಲ್ಲಿ ಮಾತನಾಡಿ, ಪ್ರಕೃತಿಯ ಮೇಲಿನ ದೌರ್ಜನ್ಯದಿಂದ ಬರಗಾಲದ ಭೀಕರತೆ ಉಂಟಾಗಿದೆ ಎಂದರು.
    ಕಾಡಿನ ನಾಶದಿಂದ ಮಳೆ ದೂರವಾಗಿದೆ. ಅಪರೂಪದ ವನ್ಯಜೀವಿಗಳು ನೋಡಲು ಸಿಗುತ್ತಿಲ್ಲ. ವನ್ಯಜೀವಿಗಳಿಗೆ ಸ್ವತಂತ್ರವಾಗಿ ಬದುಕಲು ಭಗವಂತ ಅವಕಾಶ ನೀಡಿದ್ದಾನೆ. ವನ್ಯಜೀವಿಗಳು ನಮ್ಮ ಆಸ್ತಿ. ಅವುಗಳನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ವನ್ಯ ಜೀವಿಗಳ ಸಂರಕ್ಷಣೆ ಎಂದರೆ ಮೃಗಾಲಯದಲ್ಲಿ ಸಂರಕ್ಷಿಸುವುದು ಅಲ್ಲ. ಅದು ಇರುವ ಮೂಲ ಜಾಗದಲ್ಲಿ ತನ್ನ ಆಹಾರವನ್ನು ತಾವೇ ಹುಡುಕಿಕೊಂಡು ನೈಜವಾಗಿ ಬದುಕಲು ಬಿಡುವುದು ಎಂದರು.
    ಕುಮದ್ವತಿ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಎಸ್.ಶಿವಕುಮಾರ್, ಅರಣ್ಯಾಧಿಕಾರಿ ಕೃಷ್ಣಮೂರ್ತಿ, ಪ್ರಾಚಾರ್ಯ ಜಿ.ಆರ್.ಹೆಗಡೆ, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಸಮನ್ವಯಾಧಿಕಾರಿ ಕೆ.ಕುಬೇರಪ್ಪ, ಎಂ.ಬಿ.ಶಿವಕುಮಾರ್, ಎಂ.ಆರ್.ರಘು, ಬಿ.ಎಸ್.ಶಿವಮೂರ್ತಿ, ಅಮಿತ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts