More

    ಹಲವು ಸ್ವದೇಶಿ ಆ್ಯಪ್​ಗಳ ಬಗ್ಗೆ ಪ್ರಧಾನಿ ಮಾತು: ಚಿಂಗಾರಿ ಆ್ಯಪ್​​ಗೆ ಮೋದಿ ಮೆಚ್ಚುಗೆ!

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 68ನೇ ಆವೃತ್ತಿಯ ಮನದ ಮಾತು (ಮನ್​ ಕೀ ಬಾತ್​) ಬಾನುಲಿ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ, ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದರು. ಮುಂದಿನ ದಿನಗಳಲ್ಲಿ ಸಾಲು ಸಾಲು ಹಬ್ಬಗಳು ಬರುವುದರಿಂದ ಜನರು ಶಿಸ್ತನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

    ಜನರಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಇದು ಹಬ್ಬಗಳ ಸಮಯ. ಈಗಾಗಲೇ ಮುನ್ನೆಚ್ಛರಿಕಾ ಕ್ರಮಗಳೊಂದಿಗೆ ಗಣೇಶ ಹಬ್ಬ ಆಚರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಾಲು ಸಾಲು ಹಬ್ಬಗಳು ಬರುತ್ತವೆ. ಆದರೆ, ಇದೇ ಸಮಯದಲ್ಲಿ ಕೋವಿಡ್​ ಮರೆಯಬಾರದು. ಇಂತಹ ಸಂಕಷ್ಟದ ಸಮಯದಲ್ಲಿ ಜನರಲ್ಲಿ ಶಿಸ್ತಿನ ಜ್ಞಾನವು ಇರಬೇಕು ಎಂದು ಮೋದಿ ಹೇಳಿದರು.

    ಸಂತೋಷ ಮತ್ತು ಉತ್ಸಾಹದೊಂದಿಗೆ ಓಣಂ ಹಬ್ಬವನ್ನು ಆಚರಿಸಲಾಗುತ್ತಿದೆ. ಚಿಂಗಂ ವಸಂತದಲ್ಲಿ ಈ ಹಬ್ಬವು ಬರುತ್ತದೆ. ಈ ಸಮಯದಲ್ಲಿ ಹೊಸದೊಂದನ್ನು ಕೊಂಡುಕೊಂಡು, ಮನೆಯನ್ನು ಸಿಂಗರಿಸಿ, ಪೂಕಲಂ ತಯಾರಿಸಿ, ಓಣಂ-ಸಾದಿಯಾವನ್ನು ಆನಂದಿಸುತ್ತಾರೆ. ವಿವಿಧ ಸ್ಪರ್ಧೆ ಮತ್ತು ಆಟಗಳನ್ನು ಸಹ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

    ದೇಶದಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ. ಕರೊನಾ ಮಧ್ಯೆಯೇ ರೈತರು ತುಂಬಾ ಶ್ರಮ ಪಡುತ್ತಿದ್ದಾರೆ. ಅವರಿಗೆ ಧನ್ಯವಾಗಳನ್ನು ಅರ್ಪಿಸುತ್ತೇನೆಂದು ಪ್ರಧಾನಿ ಮೋದಿ, ದೇಶಿಯ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ನಮ್ಮ ದೇಶದಲ್ಲಿ ಸ್ಥಳೀಯ ಆಟಿಕೆಗಳ ಶ್ರೀಮಂತ ಸಂಪ್ರದಾಯವಿದೆ. ಉತ್ತಮ ಆಟಿಕೆಗಳನ್ನು ತಯಾರಿಸುವಲ್ಲಿ ಪರಿಣತಿಯನ್ನು ಹೊಂದಿರುವ ಅನೇಕ ಪ್ರತಿಭಾವಂತ ಮತ್ತು ನುರಿತ ಕುಶಲಕರ್ಮಿಗಳಿದ್ದಾರೆ. ಭಾರತದ ಕೆಲವು ಭಾಗಗಳಿಂದು ಆಟಿಕೆ ಸಮೂಹಗಳಾಗಿ ಬೆಳೆಯುತ್ತಿವೆ. ಅಂದರೆ ಆಟಿಕೆಗಳ ಕೇಂದ್ರಗಳಾಗಿ ರೂಪುಗೊಳ್ಳುತ್ತಿವೆ. ಉದಾಹರಣೆಗೆ ರಾಮನಗರದಲ್ಲಿನ ಚನ್ನಪಟ್ಟಣ (ಕರ್ನಾಟಕ), ಕೃಷ್ಣದಲ್ಲಿನ ಕೊಂಡಪಲ್ಲಿ (ಆಂಧ್ರಪ್ರದೇಶ), ತಮಿಳುನಾಡಿನ ತಂಜಾವೂರು, ಅಸ್ಸಾಂನ ಧುಬ್ರಿ, ಉತ್ತರ ಪ್ರದೇಶದ ವಾರಣಾಸಿ ಆಟಿಕೆಗಳ ಕೇಂದ್ರಗಳಾಗಿವೆ. ಇಷ್ಟೇ ಅಲ್ಲ, ಇನ್ನು ಅನೇಕ ಹೆಸರುಗಳನ್ನು ಭಾರತಲ್ಲಿ ಎಣಿಸಬಹುದಾಗಿದೆ ಎಂದರು.

    ಇಂದಿನ ಕಂಪ್ಯೂಟರ್​ ಮತ್ತು ಸ್ಮಾರ್ಟ್​ಫೋನ್​ ಯುಗದಲ್ಲಿ ಕಂಪ್ಯೂಟರ್​ ಗೇಮ್​ಗಳು ಬಹು ದೊಡ್ಡ ಟ್ರೆಂಡ್​ ಆಗಿವೆ. ಇಂತಹ ಗೇಮ್​ಗನ್ನು ಮಕ್ಕಳು ಆಡುತ್ತಾರೆ ಮತ್ತು ಅದರಂತೆಯೇ ಬೆಳೆಯುತ್ತಾರೆ. ಆದರೆ, ಈ ಗೇಮ್​ಗಳಲ್ಲಿ ಇರುವ ವಿಷಯಾಂಶಗಳು ಸಹ ಬಹುತೇಕ ಹೊರಗಿನ ಬಂದವುಗಳಾಗಿವೆ. ವರ್ಚುವಲ್​ ಆಟಗಳಾಗಿರಲಿ ಅಥವಾ ಆಟಿಕೆಗಳ ವಲಯವಾಗಿರಲಿ ಆತ್ಮನಿರ್ಭರ ಭಾರತದ ಅಭಿಯಾನ ಬಹಳ ಮುಖ್ಯ ಪಾತ್ರವಹಿಸುತ್ತದೆ ಎಂದು ತಿಳಿಸಿದರು.

    ಪ್ರೀತಿಯ ದೇಶವಾಸಿಗಳೆ ಸಂಶೋಧನೆ ಮತ್ತು ಪರಿಹಾರ ನೀಡುವ ಭಾರತೀಯರ ಸಾಮರ್ಥ್ಯವನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಅದರಲ್ಲೂ ಸಮರ್ಪಣೆ ಮತ್ತು ಸೂಕ್ಷ್ಮತೆ ಇದ್ದಾಗ ನಮ್ಮ ಶಕ್ತಿಯು ಅಪಾರವಾಗುತ್ತದೆ. ಈ ತಿಂಗಳ ಆರಂಭದಲ್ಲಿ ಅಪ್ಲಿಕೇಶನ್ ಸಂಶೋಧನೆ ಸವಾಲನ್ನು ದೇಶದ ಯುವಕರ ಮುಂದೆ ಇಡಲಾಗಿತ್ತು. ಆತ್ಮನಿರ್ಭರ ಭಾರತ ಆ್ಯಪ್​ ಇನ್ನೋವೇಶನ್​ ಚಾಲೆಂಟ್​ ಅಡಿಯಲ್ಲಿ KutukiKids ಹೆಸರಿನ ಕಲಿಕಾ ಆ್ಯಪ್​ ಒಂದು ಸಿದ್ಧವಾಗಿದೆ. ಇದರ ಮೂಲಕ ಗಣಿತ, ವಿಜ್ಞಾನದ ಅನೇಕ ವಿಷಯಗಳನ್ನು ಹಾಡು ಮತ್ತು ಕತೆಗಳ ಮೂಲಕ ಮಕ್ಕಳು ಸುಲಭವಾಗಿ ಕಲಿಯಬಹುದಾಗಿದೆ ಎಂದು ತಿಳಿಸಿದರು.

    ಮತ್ತೊಂದು ಆ್ಯಪ್​ ಇದೆ. ಅದರ ಹೆಸರು ಸ್ಟೆಪ್​ ಸೆಟ್​ ಗೋ ಎಂದು. ಇದೊಂದು ಫಿಟ್​ನೆಸ್​ ಆ್ಯಪ್​​. ನೀವು ಎಷ್ಟು ದೂರ ಕ್ರಮಿಸಿದ್ದೀರಿ ಮತ್ತು ಎಷ್ಟು ಕ್ಯಾಲರಿ ಬರ್ನ್​ ಮಾಡಿದ್ದೀರಿ ಎಂಬ ಮಾಹಿತಿಯನ್ನು ನೀಡುತ್ತದೆ ಮತ್ತು ನೀವು ಫಿಟ್​ ಆಗಿರಲು ಉತ್ಸಾಹ ತುಂಬುತ್ತದೆ. ಅದೇ ರೀತಿ ಭಾರತೀಯರಲ್ಲಿ ಚಿಂಗಾರಿ ಆ್ಯಪ್ (ChingariApp)​ ಪ್ರಖ್ಯಾತವಾಗಿದೆ. AskSarkar ಆ್ಯಪ್​ ಮೂಲಕ ನೀವು ಸರ್ಕಾರದ ಯೋಜನೆಗಳ ಬಗ್ಗೆ ಖಚಿತ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದರು.

    ರಕ್ಷಣಾ ಕಾರ್ಯಾಚರಣೆ ಮತ್ತು ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ಶ್ವಾನಗಳು ಮುಖ್ಯ ಪಾತ್ರವನ್ನು ವಹಿಸುತ್ತವೆ. ಭಾರತದಲ್ಲಿ ಎನ್​ಡಿಆರ್​ಎಫ್​ ತಂಡವು ಡಜನ್​ಗಟ್ಟಲೆ ಶ್ವಾನಗಳಿಗೆ ತರಬೇತಿ ನೀಡುತ್ತಿದೆ. ಈ ಶ್ವಾನಗಳು ಕಟ್ಟಡ ಕುಸಿತ ಅಥವಾ ಭೂಕಂಪ ಸಂಭವಿಸಿದಾಗ ಅವಶೇಷಗಳಡಿ ಸಿಲುಕಿದ ಜೀವಂತ ವ್ಯಕ್ತಿಗಳನ್ನು ಪತ್ತೆ ಮಾಡಲಿವೆ. ಇಂಡಿಯಾ ತಳಿಯ ಶ್ವಾನಗಳು ಉತ್ತಮ ಮತ್ತು ಸಮರ್ಥವೆಂದು ಹೇಳಿದ್ದೇನೆ. ಅವುಗಳ ಪಾಲನೆಯ ವೆಚ್ಚವೂ ಸಹ ತುಂಬಾ ಕಡಿಮೆ ಮತ್ತು ಅವುಗಳು ಭಾರತದ ಪರಿಸ್ಥಿತಿಯನ್ನು ಬೇಗ ಹೊಂದಿಕೊಂಡಿರುತ್ತವೆ. ಇದೀಗ ನಮ್ಮ ರಕ್ಷಣಾ ಪಡೆಗಳು ತಮ್ಮ ಶ್ವಾನ ತಂಡಗಳಿಗೆ ಭಾರತೀಯ ತಳಿಗಳನ್ನು ಸೇರಿಸಿಕೊಂಡು ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts