More

    ದುಸ್ಥಿತಿಯಲ್ಲಿ ಮಾನಿಹೊಳೆ ಬಸ್ ನಿಲ್ದಾಣ

    ಸಿದ್ದಾಪುರ, ಮಾನಿಹೊಳೆ, ಬಸ್ ನಿಲ್ದಾಣ, ಹಾರ್ಸಿಕಟ್ಟಾ ಗ್ರಾಪಂ, Siddapur, Manihole, Bus Stand, Harsikatta Gramm,

    ಸಿದ್ದಾಪುರ: ತಾಲೂಕಿನ ಮಾನಿಹೊಳೆ ಸಮೀಪ ಇರುವ ಬಸ್ ನಿಲ್ದಾಣ ಇದ್ದು ಇಲ್ಲದಂತಾಗಿದೆ. ಬಿಸಿಲು-ಮಳೆಯಲ್ಲೂ ಪ್ರಯಾಣಿಕರು ರಸ್ತೆಯ ಮೇಲೆ ನಿಲ್ಲುವ ಸ್ಥಿತಿ ಉಂಟಾಗಿದೆ.

    ಕಳೆದ ಮೂರು ವರ್ಷದಿಂದ ಬಸ್ ನಿಲ್ದಾಣದಲ್ಲಿ ಯಾರೂ ಕುಳಿತುಕೊಳ್ಳುತ್ತಿಲ್ಲ. ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ರಸ್ತೆಯ ಮೇಲೆ ನಿಂತೆ ಬಸ್​ಗಾಗಿ ಕಾಯುವಂತಾಗಿದೆ. ನಿಲ್ದಾಣದ ಕಟ್ಟಡದ ಗೋಡೆ ಬಿರುಕು ಬಿಟ್ಟಿದೆ. ಮೇಲ್ಛಾವಣಿಗೆ ಅಳವಡಿಸಿದ ಕಟ್ಟಿಗೆ ಗೆದ್ದಲು ಹಿಡಿದಿದೆ. ಹೆಂಚುಗಳು ಬಿದ್ದಿರುವುದರಿಂದ ಬಸ್ ನಿಲ್ದಾಣದ ಒಳಗೆ ಮಳೆಗಾಲದಲ್ಲಿ ನೀರು ನಿಂತು ಗುಂಡಿಯಂತೆ ಕಂಡುಬರುತ್ತಿದೆ.

    ರಸ್ತೆಗಿಂತ ಮೂರು ಅಡಿಯಷ್ಟು ತಗ್ಗಿನಲ್ಲಿರುವ ಬಸ್ ನಿಲ್ದಾಣ ಅಸಮರ್ಪಕವಾಗಿದೆ. ಮಳೆಗಾಲದಲ್ಲಿ ರಸ್ತೆ ಮೇಲೆ ಹರಿಯುವ ನೀರು ಬಸ್ ನಿಲ್ದಾಣದ ಸುತ್ತ ತುಂಬಿಕೊಂಡಿರುತ್ತದೆ. ಮಳೆಗಾಲ ಇರಲಿ ಅಥವಾ ಬೇಸಿಗೆ ಕಾಲ ಇರಲಿ ಮಾದ್ಲಮನೆ, ಹುಲ್ಕುತ್ರಿ, ಚಿಟ್ಟಟ್ಟೆಮನೆ ಮತ್ತಿತರ ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಸೇರಿ ಪ್ರಯಾಣಿಕರೆಲ್ಲ ರಸ್ತೆಯ ಮೇಲೆ ನಿಂತು ಬಸ್​ಗಾಗಿ ಕಾಯುತ್ತಿದ್ದರೂ ಸಂಬಂಧಪಟ್ಟ ಹಾರ್ಸಿಕಟ್ಟಾ ಗ್ರಾಪಂ ಆಡಳಿತ ತನಗೇನು ಸಂಬಂಧ ಇಲ್ಲ ಎನ್ನುವಂತೆ ಮೌನವಹಿಸಿದೆ. ಬಸ್ ನಿಲ್ದಾಣ ದುರಸ್ತಿ ಮಾಡಿಕೊಡುವಂತೆ ಈಗಾಗಲೇ ಹಲವು ಬಾರಿ ಗ್ರಾಮ ಪಂಚಾಯಿತಿಗೆ ಆಗ್ರಹಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಈ ಭಾಗದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಬಸ್ ನಿಲ್ದಾಣದ ದುರಸ್ತಿ ಆಗಬೇಕಿದೆ. ಆದರೆ, ಗ್ರಾಮ ಪಂಚಾಯಿತಿಯಲ್ಲಿ ಈಗ ಯಾವುದೇ ಅನುದಾನ ಇಲ್ಲ. ಮುಂಬರುವ 15ನೇ ಹಣಕಾಸಿನಲ್ಲಿ ಬಸ್ ನಿಲ್ದಾಣದ ದುರಸ್ತಿಗಾಗಿ ಹಣ ಮೀಸಲಿಡಲಾಗುವುದು.

    | ರಾಜೇಶ ನಾಯ್ಕ ಪಿಡಿಒ, ಹಾರ್ಸಿಕಟ್ಟಾ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts