More

    VIDEO| ಪಿಯುಸಿ ಓದಿ ತಿಂಗಳಿಗೆ 60 ಸಾವಿರ ಸಂಪಾದನೆ: ಯುವಕನ ಕೆಲ್ಸ ನೋಡುದ್ರೆ ಅಚ್ಚರಿಯಾಗ್ಬೋದು!

    ಮಂಗಳೂರು: ಈಗಿನ ಕಾಲದಲ್ಲಿ ಎಷ್ಟೇ ಪದವಿ ಪಡೆದುಕೊಂಡರು ಹೆಚ್ಚಿನ ಮಂದಿಗೆ ಕೆಲಸ ಸಿಗುವುದೇ ಡೌಟು. ಒಂದು ವೇಳೆ ಸಿಕ್ಕರೂ ಅಲ್ಪ ಸಂಬಳಕ್ಕೆ ದಿನವಿಡಿ ಜೀತದಾಳುವಿನಂತೆ ದುಡಿಯಬೇಕು. ಆದರೆ, ಮಂಗಳೂರಿನಲ್ಲೊಬ್ಬ ಯುವಕ ತೆಂಗಿನಮರ ಏರಿ ತಿಂಗಳಿಗೆ 60 ಸಾವಿರ ಸಂಪಾದನೆ ಮಾಡುತ್ತಿದ್ದಾರೆಂದರೆ ನೀವು ನಂಬಲೇಬೇಕು.

    ಹೌದು, ಮಂಗಳೂರಿನ ಹೊರವಲಯದ ಸುರತ್ಕಲ್​ ನಿವಾಸಿ ಅನುಷ್​ ಜೀವನವನ್ನು ಕೆವಿಕೆ (ಕೃಷಿ ವಿಜ್ಞಾನ ಕೇಂದ್ರ) ಬದಲಾಯಿಸಿದೆ. ಪಿಯುಸಿ ಓದಿರುವ ಅನುಷ್​ ತೆಂಗು ಹಾಗೂ ಅಡಿಕೆ ಮರವನ್ನೇರಿ ತಿಂಗಳಿಗೆ 60 ಸಾವಿರ ರೂ. ಸಂಪಾದಿಸುತ್ತಿದ್ದಾರೆ.

    ಇದನ್ನೂ ಓದಿ: ಲಾಕ್‌ಡೌನ್‌ನಿಂದ ಪ್ರಾಣಿಗಳಿಗೂ ಬೊಜ್ಜು: ಆತಂಕದಲ್ಲಿ ಮೃಗಾಲಯ ಸಿಬ್ಬಂದಿ

    ಈ ಹಿಂದೆ ಕೂಲಿ ಕೆಲಸ ಮಾಡುತ್ತಿದ್ದ ಅನುಷ್​ಗೆ ವೈಜ್ಞಾನಿಕವಾಗಿ ತೆಂಗಿನ ಮರವೇರಲು ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರ ತರಬೇತಿ ನೀಡಿತ್ತು. ಕರ್ನಾಟಕ ತೆಂಗು ಅಭಿವೃದ್ಧಿ ಮಂಡಳಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮಕ್ಕೆ ಪತ್ರಿಕಾ ಜಾಹಿರಾತು ಗಮನಿಸಿ ಅನುಷ್​ ಸೇರ್ಪಡೆಗೊಂಡು ವೃತ್ತಿ ನೈಪುಣ್ಯತೆ ಗಳಿಸಿದ್ದರು.

    ಇದೀಗ ದುಡಿಮೆಯಲ್ಲಿ ತೊಡಗಿಕೊಂಡಿರುವ ಅನುಷ್​ ಒಂದು ಮರವೇರಲು 30 ರಿಂದ 45 ರೂಪಾಯಿ ಚಾರ್ಜ್​ ಮಾಡುತ್ತಿರುವ ಅನುಷ್​, ತಿಂಗಳಿಗೆ 60 ಸಾವಿರಕ್ಕೂ ಹೆಚ್ಚು ಹಣ ಸಂಪಾದನೆ ಮಾಡುತ್ತಿದ್ದಾರೆ. ದಿನವೊಂದಕ್ಕೆ 80 ರಿಂದ 90 ಮರವನ್ನೇರುವ ಅನುಷ್​ 3 ಸಾವಿರಕ್ಕೂ ಅಧಿಕ ಆದಾಯ ಗಳಿಸುತ್ತಿದ್ದಾರೆ. ಈ ಮೂಲಕ ಅನುಷ್​ ಇತರರಿಗೆ ಮಾದರಿಯಾಗಿ ನಿಂತಿದ್ದಾರೆ. (ದಿಗ್ವಿಜಯ ನ್ಯೂಸ್​)

    ಹಲವು ಸ್ವದೇಶಿ ಆ್ಯಪ್​ಗಳ ಬಗ್ಗೆ ಪ್ರಧಾನಿ ಮಾತು: ಚಿಂಗಾರಿ ಆ್ಯಪ್​​ಗೆ ಮೋದಿ ಮೆಚ್ಚುಗೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts