More

    ಟೀಕಿಸಿದವರಿಗೆ ಮಂಗಳೂರಿನ ಗಗನಸಖಿಯ ಖಡಕ್ ಪ್ರತ್ಯುತ್ತರ

    ಮಂಗಳೂರು: ಇತ್ತೀಚೆಗಷ್ಟೇ ವಂದೇ ಭಾರತ್ ಮಿಷನ್‌ನಲ್ಲಿ ಪಾಲ್ಗೊಂಡು ಸುದ್ದಿಯಾಗಿದ್ದ ಮಂಗಳೂರು ಕೊಣಾಜೆ ಮೂಲದ ಗಗನಸಖಿ ಅಶ್ವಿನಿ ಪೂಜಾರಿ ಸಮಾಜಿಕ ಜಾಲತಾಣದಲ್ಲಿ ತಮ್ಮ ಕಾಲೆಳೆದವರಿಗೆ ವಿಡಿಯೋದಲ್ಲಿ ಖಡಕ್ ಪ್ರತ್ಯುತ್ತರ ನೀಡಿದ್ದಾರೆ.

    ಅಶ್ವಿನಿ ಸಿಂಗಾಪುರದಿಂದ ಭಾರತೀಯರನ್ನು ಬೆಂಗಳೂರಿಗೆ ಕರೆತಂದ ವಂದೇ ಭಾರತ್ ಮಿಷನ್‌ನ ಮೊದಲ ಏರ್ ಇಂಡಿಯಾ ವಿಮಾನ ಹಾರಾಟದಲ್ಲಿ ಪಾಲ್ಗೊಂಡಿದ್ದು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಕಾರಣವಾಗಿತ್ತು. ಆದರೆ ಕೆಲವರು ಅದು ಅವರ ಕೆಲಸ, ಸಂಬಳಕ್ಕಾಗಿ ಮಾಡಿದ್ದಾರೆ ಎಂದು ಸಾಮಾಜಿಕ ತಾಣಗಳಲ್ಲಿ ಟೀಕಿಸಿದ್ದರು.

    ಇದನ್ನೂ ಓದಿ   25 ಲಕ್ಷ ರೂ. ಮೌಲ್ಯದ ಒಡವೆ ಹಿಂದಿರುಗಿಸಿದ ಪೊಲೀಸ್

    ಈಗ ವಿಡಿಯೋ ಸಂದೇಶ ಮೂಲಕ ಅಶ್ವಿನಿ ಸ್ವತಃ ಪ್ರತಿಕ್ರಿಯೆ ನೀಡಿದ್ದಾರೆ. ಏರ್ ಇಂಡಿಯಾ ವಂದೇ ಭಾರತ್ ಮಿಷನ್‌ನಲ್ಲಿ ನಮ್ಮ ಸ್ವ ಇಚ್ಛೆಯಿಂದ ಭಾಗವಹಿಸಿದ್ದು, ಅಲ್ಲಿ ನಮ್ಮ ಜೀವಕ್ಕೆ ಏನೇ ಆದರೂ ನಾವೇ ಜವಾಬ್ದಾರರಾಗುತ್ತೇವೆ, ನಮಗೆ ಅದಕ್ಕಾಗಿ ಏರ್ ಇಂಡಿಯಾ ಹೆಚ್ಚು ಸಂಬಳವೇನೂ ಕೊಡುವುದಿಲ್ಲ ಎಂದಿದ್ದಾರೆ.

    ನಾನು ಮನೆಯಲ್ಲೇ ಕೂತರೂ ನನ್ನ ವೇತನ ಸಿಗುತ್ತದೆ, ಕರೊನಾ ವಾರಿಯರ್ ಎನ್ನುವ ಪ್ರಶಸ್ತಿಯೇನೂ ನನಗೆ ಸಿಗುವುದಿಲ್ಲ. ಟೀಕೆ ಮಾಡುವವರು ಇದನ್ನು ಅರಿತುಕೊಳ್ಳಿ ಎಂದೂ ತಿರುಗೇಟು ನೀಡಿದ್ದಾರೆ.

    ಅವಕಾಶ ಬಂದಾಗ ಭಯ ಆಗಲಿಲ್ಲ, ಬದಲಿಗೆ ಖುಷಿ ಆಯ್ತು. ಭಾರತದಲ್ಲಿಯೇ ಹೆರಿಗೆ ಆಗಬೇಕು ಎಂದು ಬಂದ ಗರ್ಭಿಣಿಯರು, ತಮ್ಮ ಮಕ್ಕಳನ್ನು ನೋಡಲು ಬರುವ ವಯಸ್ಕರು ವಿಮಾನದಲ್ಲಿದ್ದರು. ಅವರನ್ನು ಕರೆತರುವುದೇ ನನಗೆ ಅವಾರ್ಡ್. ವಿಮಾನ ಹೊರಡುವ ಮೊದಲು ಮತ್ತು ಬಂದ ಬಳಿಕ ಮೂರ್ನಾಲ್ಕು ಬಾರಿ ಟೆಸ್ಟ್ ಇತ್ತು. ಬೆಳಗ್ಗೆ 8 ಗಂಟೆಯಿಂದ ರಾತ್ರಿ 11 ಗಂಟೆಯವರೆಗೂ ಪಿಪಿಇ ಕಿಟ್ ಹಾಕಿಕೊಂಡೇ ಇದ್ದೆವು. ಊಟ, ನೀರು ಇಲ್ಲದೇ ಸುದೀರ್ಘ ಅವಧಿಯ ಪ್ರಯಾಣದಲ್ಲಿ ವಾಶ್‌ರೂಂಗೆ ಹೋಗುವುದಕ್ಕೂ ಅವಕಾಶ ಇಲ್ಲದಂತೆ ನಾವು ಇರುತ್ತೇವೆ. ಆದರೆ ಅಲ್ಲಿನ ನಮ್ಮವರಿಗಾಗಿ ಕೆಲಸ ಮಾಡುತ್ತೇವೆ ಎಂದು ತಮ್ಮ ಯೋಚನೆಗಳನ್ನು ಅವರು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

    ಈಶಾನ್ಯ ರಾಜ್ಯ ಮಣಿಪುರದಲ್ಲಿ ಭಾರಿ ಭೂಕಂಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts