More

    ಮಂಗಳೂರು- ವಿಜಯಪುರ ಎಕ್ಸ್‌ಪ್ರೆಸ್‌ ರೈಲು ವೇಳಾಪಟ್ಟಿ ಪರಿಷ್ಕರಣೆ

    ಮಂಗಳೂರು: ಪ್ರಯಾಣಿಕರ ಬೇಡಿಕೆಯಂತೆ ಮಂಗಳೂರು ಮತ್ತು ಉತ್ತರ ಕರ್ನಾಟಕ ನಡುವೆ ಸಂಚರಿಸುತ್ತಿದ್ದ ಮಂಗಳೂರು ಜಂಕ್ಷನ್- ವಿಜಯಪುರ ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿ ಪರಿಷ್ಕರಿಸಿ ನೈರುತ್ಯ ರೈಲ್ವೆಯು ಅಧಿಸೂಚನೆ ಹೊರಡಿಸಿದೆ. ಪರಿಷ್ಕೃತ ವೇಳಾಪಟ್ಟಿಯು ಏಪ್ರಿಲ್ 1 ರಿಂದ ಜಾರಿಯಾಗಲಿದೆ.
  • 3 ಗಂಟೆ ಮೊದಲು
    ನೂತನ ವೇಳಾಪಟ್ಟಿ ಪ್ರಕಾರ ರೈಲು ವಿಜಯಪುರ ನಿಲ್ದಾಣದಿಂದ ಸಂಜೆ 3.30 ಕ್ಕೆ ಹೊರಟು ಮರುದಿನ ಬೆಳಗ್ಗೆ 9.30 ಕ್ಕೆ ಮಂಗಳೂರು ಜಂಕ್ಷನ್ ನಿಲ್ದಾಣ ತಲುಪಲಿದೆ. ಬಳಿಕ ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 2.50 ಕ್ಕೆ ಹೊರಟು ಮರುದಿನ ಬೆಳಗ್ಗೆ 9.35 ಕ್ಕೆ ವಿಜಯಪುರ ತಲುಪಲಿದೆ.
    ( ಹಳೇ ವೇಳಾಪಟ್ಟಿಯಲ್ಲಿ ರೈಲು ವಿಜಯಪುರ ನಿಲ್ದಾಣದಿಂದ ಸಂಜೆ 6.35 ಕ್ಕೆ ಹೊರಟು ಮರುದಿನ ಮಧ್ಯಾಹ್ನ 12.40 ಕ್ಕೆ ಮಂಗಳೂರು ಜಂಕ್ಷನ್ ತಲುಪುತ್ತಿದೆ. ಬಳಿಕ ಮಧ್ಯಾಹ್ನ 2.50 ಕ್ಕೆ ಮಂಗಳೂರು ಜಂಕ್ಷನ್ ನಿಂದ ಪ್ರಯಾಣ ಆರಂಭಿಸಿ ಮರುದಿನ ಬೆಳಗ್ಗೆ 9.35 ಕ್ಕೆ ವಿಜಯಪುರ ತಲುಪುತ್ತಿದೆ).
  • ಪ್ರಯೋಜನ
    ಶಿಕ್ಷಣ, ವೈದ್ಯಕೀಯ ಸೇವೆ, ಔದ್ಯೋಗಿಕ ಆವಶ್ಯಕತೆಗಳಿಗಾಗಿ ಉತ್ತರ ಕರ್ನಾಟಕದ ದೊಡ್ಡ ಸಂಖ್ಯೆಯ ಜನರು ದಕ್ಷಿಣ ಕನ್ನಡವನ್ನು ಅವಲಂಬಿಸಿದ್ದಾರೆ. ವಿಜಯಪುರ, ಗದಗ, ಹುಬ್ಬಳ್ಳಿ ಕಡೆಯ ತುಂಬಾವಿದ್ಯಾರ್ಥಿಗಳು ದಕ್ಷಿಣ ಕನ್ನಡದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
    ರೈಲಿನ ಹಳೇ ವೇಳಾಪಟ್ಟಿಯಲ್ಲಿ ವಿಜಯಪುರ ರೈಲು ಮಂಗಳೂರು ತಲುಪುವಾಗ ಮಧ್ಯಾಹ್ನ 12.40 ಆಗುತ್ತಿದೆ. ಇದರಿಂದ ಉತ್ತರ ಕರ್ನಾಟಕದಿಂದ ವಿವಿಧ ಅಗತ್ಯಗಳಿಗೆ ಮಂಗಳೂರಿಗೆ ಆಗಮಿಸುವ ಜನರಿಗೆ ಅದೇ ದಿನ ತಮ್ಮ ಕೆಲಸ ಮುಗಿಸಿಕೊಂಡು ಊರಿಗೆ ಮರಳಲು ಕಷ್ಟವಾಗುತ್ತಿತ್ತು.
    ಹೊಸ ವೇಳಾಪಟ್ಟಿಯಲ್ಲಿ ಬೆಳಗ್ಗೆ 9.35 ಕ್ಕೆ ರೈಲು ಮಂಗಳೂರು ತಲುಪಲಿರುವುದರಿಂದ ವಿಜಯಪುರ ಕಡೆಯ ಜನರು ಹಗಲು ತಮ್ಮ ತುರ್ತು ಕೆಲಸಗಳನ್ನು ಮುಗಿಸಿಕೊಂಡು ಮಧ್ಯಾಹ್ನ ಮಂಗಳೂರು ಜಂಕ್ಷನ್‌ನಿಂದ ಹೊರಡುವ ರೈಲಿನಲ್ಲಿ ಅದೇ ದಿನ ಊರಿಗೆ ಮರಳಲು ಅವಕಾಶವಿದೆ. ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೂ ಹೊಸ ವೇಳಾಪಟ್ಟಿ ಅನುಕೂಲಕರವಾಗಿದೆ.
  • ಜೂನ್ 1 ರಿಂದ ಮಂಗಳೂರು ಸೆಂಟ್ರಲ್‌ಗೆ ವಿಸ್ತರಣೆ ?
    ಪ್ರಸ್ತಾವಿತ ರೈಲು ವೇಳಾಪಟ್ಟಿ ಪರಿಷ್ಕರಿಸಬೇಕು ಮತ್ತು ಈ ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಿಸಬೇಕು ಎನ್ನುವುದು ಉತ್ತರ ಕರ್ನಾಟಕದ ಜನರ ಬಹು ಕಾಲದ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಸಂಘದ ವತಿಯಿಂದ ಸಂಸದರ ಮೂಲಕ ಸಲ್ಲಿಸಿದ ಮನವಿಗೆ ಮನ್ನಣೆ ದೊರೆತ್ತಿದೆ. ಜೂನ್ ಮೊದಲ ವಾರದಿಂದ ಈ ರೈಲು ಮಂಗಳೂರು ಸೆಂಟ್ರಲ್‌ಗೆ ವಿಸ್ರಿಸುವ ಕುರಿತು ಕೂಡ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಭರವಸೆ ದೊರೆತ್ತಿದೆ ಎಂದು ಸಮಿತಿಯ ತಾಂತ್ರಿಕ ಸಲಹೆಗಾರ ಅನಿಲ್ ಹೆಗ್ಡೆ ತಿಳಿಸಿದ್ದಾರೆ.
  • ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts