More

    ಮಲ್ಲಿಗೆ ಸಸ್ಯಾಭಿವೃದ್ಧಿಗೆ ಹೊಸ ಪ್ರಯೋಗ

    ಉಡುಪಿ: ಕಡಿಮೆ ಖರ್ಚಿನಲ್ಲಿ ಹಣ್ಣು, ತರಕಾರಿ ದೀರ್ಘ ಕಾಲ ಕೆಡದಂತೆ ಇಡಲು ‘ಶೂನ್ಯ ಶಕ್ತಿ ತಂಪು ಕೊಠಡಿ ವಿಧಾನ’ ಚಾಲ್ತಿಯಲ್ಲಿದೆ. ಈ ರೀತಿಯಲ್ಲೇ ಜಿಲ್ಲಾ ತೋಟಗಾರಿಕೆ ಇಲಾಖೆ ಮಲ್ಲಿಗೆ ಸಸ್ಯಾಭಿವೃದ್ಧಿಗಾಗಿ ‘ಶೂನ್ಯ ಶಕ್ತಿ ಆರ್ದ್ರತೆ ಕೋಣೆ’ ಎಂಬ ಹೊಸ ವಿಧಾನ ಬಳಸಿ ಯಶಸ್ಸು ಕಂಡಿದೆ.
    ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದಲ್ಲಿ ಪ್ರತಿವರ್ಷ ಮಲ್ಲಿಗೆ ಸಸ್ಯೋತ್ಪಾದನೆ ಸಂದರ್ಭ ಗಿಡಗಳಲ್ಲಿ ಬೇರು ಬೆಳವಣಿಗೆ ಆಗದೆ ರೈತರಿಗೆ ಉತ್ತಮ ಗಿಡಗಳನ್ನು ಪೂರೈಸಲು ಸಾಧ್ಯವಾಗುತ್ತಿರಲಿಲ್ಲ. ಸಸ್ಯಾಭಿವೃದ್ಧಿಯಲ್ಲಿ ಮೊದಲು ಬೇರು ಬಂದು, ನಂತರ ಚಿಗುರು ಬಂದರೆ ಗುಣಮಟ್ಟದ ಗಿಡಗಳ ಬೆಳವಣಿಗೆ ಸಾಧ್ಯ. ಈ ಹಿಂದೆ ಸಸ್ಯದಲ್ಲಿ ಮೊದಲು ಎಲೆ ಬಂದು ಅನಂತರ ಬೇರು ಬರುತ್ತಿರುವುದರಿಂದ ಬೇರುಗಳಿಂದ ಎಲೆಗಳಿಗೆ ಸರಿಯಾದ ಆಹಾರ ಪೂರೈಕೆ ಆಗದೆ ಗಿಡ ಸತ್ತು ಹೋಗುತ್ತಿತ್ತು. ಈಗಿನ ಪ್ರಯೋಗದಲ್ಲಿ ಬೇರು ಮೊದಲು ಬರುವ ಪರಿಣಾಮ ಎಲೆಗಳಿಗೆ ಆಹಾರ ಪೂರೈಕೆಯಾಗಿ ಗಿಡ ಉತ್ತಮವಾಗಿ ಬೆಳೆಯುತ್ತಿದೆ.

    2000 ಗಿಡಗಳು ಸಿದ್ಧ
    ಪ್ರಯೋಗದ ಮೂಲಕ 5,000 ಗಿಡ ಬೆಳೆಸುವ ಗುರಿ ಇಲಾಖೆ ಮುಂದಿದ್ದು, ಮೊದಲ ಹಂತದಲ್ಲಿ ಒಂದೇ ತಿಂಗಳಲ್ಲಿ ಎರಡು ಸಾವಿರ ಗಿಡಗಳು ಸಿದ್ಧವಾಗಿವೆ. ಮುಂದೆ ಒಂದು ತಿಂಗಳಲ್ಲಿ ಎರಡನೇ ಹಂತದ ಸಸ್ಯಾಭಿವೃದ್ಧಿಗೆ ಉದ್ದೇಶಿಸಲಾಗಿದೆ. ಈ ಮಳೆಗಾಲದ ಪ್ರಾರಂಭದಲ್ಲಿ ಪಾಲಿಮನೆಯ ಪ್ರಯೋಗದಲ್ಲಿ 30 ದಿನಗಳಲ್ಲಿ ಗುಣಮಟ್ಟದ ಗಿಡಗಳನ್ನು ಪಡೆಯಲು ಯಶಸ್ವಿಯಾಗಿದ್ದೇವೆ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ನಿದೀಶ ಕೆ.ಜೆ. ತಿಳಿಸಿದ್ದಾರೆ.

    ಸಾಮಾನ್ಯ ವ್ಯವಸ್ಥೆಯಲ್ಲಿ ಗಿಡಗಳಲ್ಲಿ ಚಿಗುರು ಬರಲು ಒಂದೂವರೆ ತಿಂಗಳು ಬೇಕು. ಹೊಸ ಪ್ರಯೋಗದಿಂದ 30 ದಿನಗಳಲ್ಲಿ ಚಿಗುರು ಬಂದಿರುವುದರಿಂದ 10-15 ದಿನ ಉಳಿಯುತ್ತದೆ. ಈ ಹಿಂದಿನ ಸಸ್ಯಾಭಿವೃದ್ಧಿಯಲ್ಲಿ ಶೇ.50ರಷ್ಟು ಗಿಡಗಳು ಸಾಯುತ್ತಿದ್ದವು. ಈ ಪ್ರಯೋಗದಲ್ಲಿ ಶೇ.90ರಷ್ಟು ಗಿಡಗಳು ಸಿಗುತ್ತಿವೆ. ಇಲಾಖೆಯಿಂದ ಪ್ರತಿ ಮಲ್ಲಿಗೆ ಗಿಡಕ್ಕೆ 12 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ನರೇಗಾದಲ್ಲಿ ಐದು ಸೆಂಟ್ಸ್ ಜಾಗದಲ್ಲಿ 32 ಗುಂಡಿ ತೆಗೆದು ಮಲ್ಲಿಗೆ ಕೃಷಿ ಮಾಡಬಹುದು.
    ನಿದೀಶ ಕೆ.ಜೆ., ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts