More

    ಪರಿಸರ ಸ್ನೇಹಿ ಸೌಲಭ್ಯಗಳಿಗೆ ಆದ್ಯತೆ ಶ್ಲಾಘನೀಯ

    ಯಲಬುರ್ಗಾ: ಸಮೀಪದ ಮಂಗಳೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ರಾಜ್ಯಮಟ್ಟದ ಕಾಯಕಲ್ಪ ಮೌಲ್ಯಮಾಪಕಿ ಡಾ.ನಾಗವೇಣಿ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿ ಮತ್ತು ಸಿಬ್ಬಂದಿಯ ಸಂದರ್ಶನ ಮಾಡಿದರು.

    ಆರೋಗ್ಯ ಕೇಂದ್ರದಲ್ಲಿ ಜಿ ಮತ್ತು ಎಚ್ ಕಾಂಪೋನೆಂಟ್‌ನ ಪರಿಸರಸ್ನೇಹಿ ಸೌಲಭ್ಯಗಳಿಗೆ ನೀಡಿರುವ ಆದ್ಯತೆ ಮೆಚ್ಚುವಂಥದ್ದು. ಕಾಯಕಲ್ಪ ಮಾರ್ಗಸೂಚಿಯಂತೆ ಎಲ್ಲ ವಿಭಾಗಗಳಲ್ಲಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದು, ಸ್ವಚ್ಛತೆ, ನೈರ್ಮಲ್ಯತೆ, ಧನ್ವಂತರಿ ಗಿಡಮೂಲಿಕೆ ವನ ಹಾಗೂ ಮುಂಭಾಗದ ಪರಿಸರ ಸ್ನೇಹಿ ತೋಟದ ನಿರ್ವಹಣೆ ಕುರಿತು ಸಂತಸ ವ್ಯಕ್ತಪಡಿಸಿ, ಅಧಿಕಾರಿ, ಸಿಬ್ಬಂದಿ ನಡುವಿನ ಸಂಯೋಜನೆ ಸಹಕಾರ ಕುರಿತು ಪ್ರಶಂಸಿಸಿದರು.

    ವೈದ್ಯರಾದ ಹಿರೇಮಠ ಚನ್ನವೀರಶಾಸ್ತ್ರಿ, ಚಂದ್ರಕಾಂತ, ಅಭಿಷೇಕ್, ಚನ್ನಬಸವರಾಜ, ಅಮರೇಶ, ರಮೇಶ, ಮಂಜುಳಾ, ಕಮಲಾ ಉಮಾದೇವಿ, ಅಂಬಿಕಾ, ಮಾರುತಿ, ಲಕ್ಷ್ಮಣ, ಮಹಮ್ಮದ್ ಯಾಶಿನಶೇಕ್, ಪುಷ್ಪಾಂಜಲಿ, ಗಿರೀಶ ಇತರರಿದ್ದರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts