More

    ಮಂಗಳೂರು ದಸರಾ ಹಿನ್ನೆಲೆಯಲ್ಲಿ ನೈಟ್ ಮ್ಯಾರಥಾನ್

    ಮಂಗಳೂರು: ಮಂಗಳೂರು ದಸರಾ ಪ್ರತಿವರ್ಷ ವಿಭಿನ್ನ ಕಾರ್ಯಕ್ರಮಗಳ ಮೂಲಕ ಮಾದರಿ ದಸರಾವಾಗಿ ಮೂಡಿ ಬರುತ್ತಿದ್ದು, ಭಾನುವಾರ ನಡೆದ ನೈಟ್ ಮ್ಯಾರಥಾನ್ ಈ ಬಾರಿಯ ವಿಶೇಷ ಆಕರ್ಷಣೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಹೇಶ್ ಅವರು ನಿಶಾನೆ ತೋರಿಸುವ ಮೂಲಕ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಿದರು.

    ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ವತಿಯಿಂದ ಜಿಯೂಸ್ ಫಿಟ್ನೆಸ್ ಮಂಗಳೂರು ಸಹಯೋಗದಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು. ರಾತ್ರಿ 7ಗಂಟೆಗೆ ಸುಮಾರು 800ಕ್ಕೂ ಅಧಿಕ ಸ್ಪರ್ಧಿಗಳು ಕ್ಷೇತ್ರದ ವಠಾರದಲ್ಲಿ ಸೇರಿ ಹೆಸರು ನೋಂದಾಯಿಸಿಕೊಂಡರು. 9 ಗಂಟೆಗೆ ಮ್ಯಾರಥಾನ್ ಸ್ಪರ್ಧೆ ಆರಂಭಗೊಂಡಿತು.

    ಕುದ್ರೋಳಿ ಕ್ಷೇತ್ರದಿಂದ ಹೊರಟ ಮ್ಯಾರಥಾನ್ ಮಣ್ಣಗುಡ್ಡೆ, ನಾರಾಯಣಗುರು ಸರ್ಕಲ್, ಎಂ.ಜಿ. ರಸ್ತೆ, ಪಿವಿಎಸ್, ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟೆ, ಕ್ಲಾಕ್‌ಟವರ್, ಕಾರ್‌ಸ್ಟ್ರೀಟ್, ಅಳಕೆಯಾಗಿ ಮರಳಿ ಕುದ್ರೋಳಿ ಕ್ಷೇತ್ರಕ್ಕೆ ಆಗಮಿಸಿತು. ಚಿಕ್ಕಮಕ್ಕಳಿಂದ ಹಿಡಿದು 60ವರ್ಷದ ಹಿರಿಯ ನಾಗರಿಕರು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು.

    ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್., ಕಾರ್ಯದರ್ಶಿ ಮಾಧವ ಸುವರ್ಣ, ಕುದ್ರೋಳಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಝೀಯಸ್‌ ಫಿಟ್ನೆಸ್ ಪ್ರಮುಖರಾದ ರಾಜೇಶ್ ಪಾಟಾಳಿ, ಪ್ರಮೀಳಾ ರೈ, ಮುಂಬಯಿ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಚೇರ್ಮನ್ ಸೂರ್ಯಕಾಂತ್ ಜೆ. ಸುವರ್ಣ, ಸಾಹಿಲ್, ರಾಜೇಶ್ ನಾಯರ್ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.

    800ಕ್ಕೂ ಅಧಿಕ ಮ್ಯಾರಥಾನ್‌ಗಳು ಭಾಗಿ

    ಮಂಗಳೂರು ದಸರಾ ನೈಟ್ ಮ್ಯಾರಥಾನ್‌ನಲ್ಲಿ 800ಕ್ಕೂ ಅಧಿಕ ಮಂದಿ ಭಾಗವಹಿಸಿದ್ದು, ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು. ಯುವಕರ ವಿಭಾಗದಲ್ಲಿ ಶ್ರೀಧರ್ ಎಸ್.ಎನ್ (ಪ್ರಥಮ), ಸಚಿನ್ (ದ್ವಿತೀಯ), ರಾಹುಲ್ (ತೃತೀಯ), ಲಕ್ಷ್ಮಣ್ (ಚತುರ್ಥ), ಶಿವಾನಂದ್ (ಪಂಚಮ) ಬಹುಮಾನ ಪಡೆದರು. ಯುವತಿಯರ ವಿಭಾಗದಲ್ಲಿ ಸ್ವರ್ಣ (ಪ್ರಥಮ), ಮರಿಯಾ (ದ್ವಿತೀಯ), ಜೋನ್ನೆ (ತೃತೀಯ), ಶಾರದಾ ಶೆಟ್ಟಿ (ಚತುರ್ಥ), ಕೃಪಾ (ಪಂಚಮ) ಬಹುಮಾನ ಪಡೆದರು. ಪುರುಷರ ವಿಭಾಗದಲ್ಲಿ ಶ್ರೀಧರ್ ಎಸ್.ಎನ್. 23.59ನಿಮಿಷದಲ್ಲಿ ಗುರಿಮುಟ್ಟಿ ಪ್ರಥಮ ಸ್ಥಾನ ಪಡೆದರೆ, ಮಹಿಳೆಯರ ವಿಭಾಗದ ಸ್ವರ್ಣ 26.04 ನಿಮಿಷದಲ್ಲಿ ಗುರಿ ತಲುಪಿ ಪ್ರಥಮ ಸ್ಥಾನಿಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts