More

    ಏಪ್ರಿಲ್ 1 ರಿಂದ ಮಂಗಳೂರು ಮನಪಾ ಈಜುಕೊಳದಲ್ಲಿ ತರಬೇತಿ ಶಿಬಿರ

    ಮಂಗಳೂರು: ನಗರದ ನಾರಾಯಣಗುರು (ಲೇಡಿಹಿಲ್) ವೃತ್ತ ಸಮೀಪದ ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ಬೇಸಿಗೆ ಈಜು ತರಬೇತಿ ಶಿಬಿರ ಏಪ್ರಿಲ್ 1 ರಿಂದ ಮೂರು ಹಂತಗಳಲ್ಲಿ ನಡೆಯಲಿದೆ.
    3 ಶಿಬಿರ
    ಪ್ರಥಮ ಶಿಬಿರ ಏಪ್ರಿಲ್ 1 ರಿಂದ 26 ತನಕ, ಎರಡನೇ ಶಿಬಿರ ಏಪ್ರಿಲ್ 29 ರಿಂದ ಮೇ 23 ತನಕ ಹಾಗೂ ಮೂರನೇ ಶಿಬಿರ ಮೇ 24 ರಿಂದ ಜೂನ್ 15 ತನಕ ನಡೆಯಲಿದೆ. ಪ್ರತೀ ಶಿಬಿರದ ತರಬೇತಿ ದಿನಗಳ ಅವಧಿ 21 ದಿನ.
    ವಿವಿಧ ಬ್ಯಾಚ್‌ಗಳು
    ತರಬೇತಿ ಸಮಯ ಬೆಳಗ್ಗೆ 7.15- 8, 8.15- 9, ಮತ್ತು 9.15- 10. ಸಂಜೆ ಬ್ಯಾಚ್ 3.45- 4.30, 4.45- 5.30 ಮತ್ತು 5.45- 6.30. ಮಹಿಳೆಯರು ಮತ್ತು ಮಕ್ಕಳಿಗಾಗಿ ಸಂಜೆ 3.45- 4.30 ಅವಧಿಯ ಪ್ರತ್ಯೇಕ ಬ್ಯಾಚ್ ಇರುತ್ತದೆ. ಆಸಕ್ತರು ತಮಗೆ ಅನುಕೂಲವಾಗುವ ಬ್ಯಾಚ್‌ಅನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.
    ಪ್ರವೇಶ ಶುಲ್ಕ ಪರಿಷ್ಕರಣೆ
    ತರಬೇತಿ ಶಿಬಿರ ಹೊರತುಪಡಿಸಿ ಈಜುಕೊಳದಲ್ಲಿ ನಡೆಯುವ ತರಬೇತಿಯ ಪ್ರವೇಶ ಶುಲ್ಕವನ್ನು ಪಾಲಿಕೆಯ ಈಜುಕೊಳ ಸಮಿತಿಯು ಪರಿಷ್ಕರಿಸಿದೆ. ಪರಿಷ್ಕೃತ ಪ್ರವೇಶ ಶುಲ್ಕವು ಏಪ್ರಿಲ್ 1 ರಿಂದ ಅನ್ವಯವಾಗಲಿದೆ. ಶಿಬಿರದಲ್ಲಿ ಭಾಗವಹಿಸಲು ಅಪೇಕ್ಷಿಸುವವರು ಈಜುಕೊಳದ ಕಚೇರಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದು ಈಜುಕೊಳದ ಮ್ಯಾನೇಜರ್ ರಮೇಶ್ ಬಿಜೈ ಅವರು ತಿಳಿಸಿದ್ದಾರೆ.

    ಏಪ್ರಿಲ್ 1 ರಿಂದ ಮಂಗಳೂರು ಮನಪಾ ಈಜುಕೊಳದಲ್ಲಿ ತರಬೇತಿ ಶಿಬಿರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts