More

    ಮಂಗಳಾ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ

    ಮಂಗಳೂರು: ಮಂಗಳಾ ಆಸ್ಪತ್ರೆಯ ವೈದ್ಯರ ತಂಡ, ಎಡಮೂಗಿನ ಮೂಲಕ ಬಲಗಣ್ಣಿನ ಅಶ್ರುನಾಳಕ್ಕೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದು, ಮಗು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದೆ. ಕಿವಿ, ಮೂಗು, ಗಂಟಲು ತಜ್ಞ ಡಾ.ಗೌತಮ್ ಕುಳಮರ್ವ, ನೇತ್ರ ತಜ್ಞ ಡಾ.ಕಿಶೋರ್ ಕೃಷ್ಣ ಮತ್ತು ಅರಿವಳಿಕೆ ತಜ್ಞ ಹಾಗೂ ಇಂಟೆನ್ಸಿವಿಸ್ಟ್ ತಜ್ಞ ಡಾ.ಗಣಪತಿ ಅವರ ತಂಡ ಡಿಸಿಆರ್ ಶಸ್ತ್ರಚಿಕಿತ್ಸೆಯನ್ನು ಅತೀ ಅಪರೂಪದ ವಿಧಾನದಲ್ಲಿ ನೆರವೇರಿಸಿದೆ.

    ಆರೋಗ್ಯವಂತರಲ್ಲಿ ಕಣ್ಣೀರು ಕಣ್ಣಿನಿಂದ ಹೊರಟು ಮೂಗಿನ ಒಳಭಾಗದಲ್ಲಿ ತೆರೆದುಕೊಳ್ಳುವ ಅಶ್ರುನಾಳದ ಮೂಲಕ ಹರಿದು ಮೂಗನ್ನು ಸೇರುತ್ತದೆ. ಆದರೆ ಕೆಲವರಿಗೆ ಈ ನಾಳ ಮುಚ್ಚಿಕೊಂಡಿರುತ್ತದೆ. ಇವರಿಗೆ ಡಿಸಿಆರ್ ಎಂಬ ಶಸ್ತ್ರಚಿಕಿತ್ಸೆ ಮೂಲಕ ಅಶ್ರುನಾಳದಲ್ಲಿ ಕಣ್ಣೀರಿನ ಒಳ ಹರಿವನ್ನು ಸರಾಗವಾಗುವಂತೆ ಮಾಡಲಾಗುತ್ತದೆ.

    ಈ ಶಸ್ತ್ರಚಿಕಿತ್ಸೆಯಲ್ಲಿ ಕಣ್ಣಿನಿಂದ ಮೂಗಿನ ಮೂಲಕ ಉಪಕರಣವನ್ನು ಹಾಯಿಸಿ ಮಾಡುವ ವಿಧಾನವಿದೆ ಅಥವಾ ಮೂಗಿನಿಂದ ಕಣ್ಣಿನ ಅಶ್ರುಕೋಶ ಪ್ರವೇಶಿಸುವ ವಿಧಾನವೂ ಇದೆ. ಆದರೆ ಮಂಗಳಾ ಆಸ್ಪತ್ರೆಯಲ್ಲಿ ದಾಖಲಾದ 6 ವರ್ಷದ ಮಗುವಿಗೆ ಈ ಎರಡೂ ವಿಧಾನಗಳಿಂದಲೂ ಶಸಚಿಕಿತ್ಸೆ ನಡೆಸುವಂತಿರಲಿಲ್ಲ. ಏಕೆಂದರೆ ಹುಟ್ಟಿನಿಂದಲೂ ಈ ಮಗುವಿನ ಬಲ ಬದಿಯ ಶಾಸ್ವನಾಳ ಮುಚ್ಚಿತ್ತು. ಬಲಭಾಗದ ಮೂಗಿನ ಹೊಳ್ಳೆಯಿಂದ ಮೊದಲುಗೊಂಡು ಉದ್ದಕ್ಕೂ ಶ್ವಾಸದ್ವಾರ ಮೂಳೆಯಿಂದ ಮುಚ್ಚಲ್ಪಟ್ಟಿತ್ತು. ಆರು ವರ್ಷ ಪ್ರಾಯದ ಮಗು ಬಲಗಣ್ಣಲ್ಲಿ ಉತ್ಪತ್ತಿಯಾದ ಕಣ್ಣೀರು ಹರಿದು ಹೋಗಲು ದ್ವಾರವಿಲ್ಲದೆ ಕಷ್ಟಪಡುತ್ತಿತ್ತು.

    ಸಾಮಾನ್ಯ ವಿಧಾನದಂತೆ ಬಲಮೂಗಿನಿಂದ ಬಣ್ಣಗಣ್ಣಿನ ಅಶ್ರುಕೋಶದ ಪ್ರವೇಶ ಸಾಧ್ಯವೇ ಇರಲಿಲ್ಲ. ಆಗ ನುರಿತ ಶಸ ಚಿಕಿತ್ಸಕರಾದ ಡಾ.ಗೌತಮ್ ಕುಳಮರ್ವ ಎಡಮೂಗಿನ ಮುಖಾಂತರ ಬಲಗಣ್ಣಿನ ಪ್ರವೇಶ ಪಡೆದರೆ ಆಗಬಹುದೇ ಎಂದು ಯೋಚಿಸಿದರು. ಅನುಭವಿ ವೈದ್ಯರ ತಂಡ ಜತೆಗೂಡಿ ಅತ್ಯಾಧುನಿಕ ಅಮೆರಿಕದ ನ್ಯಾವಿಗೇಟರ್ 3ಡಿ ಉಪಕರಣ ಬಳಸಿಕೊಂಡು ವಿನೂತನವಾಗಿ ಎಡಮೂಗಿನ ಮೂಲಕ ಬಲಗಣ್ಣಿನ ಅಶ್ರುಕೋಶ ಪ್ರವೇಶಿಸಿ ಕಣ್ಣೀರಿನ ಹರಿವು ಸರಾಗವಾಗುವಂತೆ ಶಸ್ತ್ರಚಿಕಿತ್ಸೆ ನೆರವೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts