More

    ಜೋಡೆತ್ತುಗಳಿಂದ 14 ಟನ್ ಕಬ್ಬು ತುಂಬಿದ್ದ ಗಾಡಿ ಎಳೆಸಿ ಸಂಕಷ್ಟಕ್ಕೆ ಸಿಲುಕಿದ ಯುವಕರು..!

    ಮಂಡ್ಯ: 14 ಟನ್ ಕಬ್ಬು ತುಂಬಿದ್ದ ಗಾಡಿಯನ್ನು ಜೋಡೆತ್ತುಗಳಿಂದ ಎಳೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್​ಐಆರ್​ ದಾಖಲಾಗಿದೆ. ಸಾಮರ್ಥ್ಯಕ್ಕಿಂತ ಅಧಿಕ ಕಬ್ಬು ತುಂಬಿ ದಾಖಲೆ ಸೃಷ್ಟಿಸುವ ಆಸೆಗೆ ಬಿದ್ದ ಯುವಕರು ಇದೀಗ ಕಾನೂನು ಸಂಕಷ್ಟ ಎದುರಿಸುವಂತಾಗಿದೆ.

    ಎರಡು ದಿನಗಳ ಹಿಂದೆ ಮಂಡ್ಯ ತಾಲೂಕಿನ ಎಚ್.ಮಲ್ಲಿಗೆರೆ ಗ್ರಾಮದಲ್ಲಿ 14 ಟನ್ ಕಬ್ಬು ತುಂಬಿದ್ದ ಗಾಡಿಯನ್ನು ಜೋಡೆತ್ತುಗಳಿಂದ ಎಳೆಸಿದ್ದರು. ಎಚ್.ಮಲ್ಲಿಗೆರೆ ಗ್ರಾಮದಿಂದ 3 ಕಿ.ಮೀ. ಅಂತರದಲ್ಲಿರುವ ಜಿ.ಗುಂಡಿಪಟ್ಟಣ್ಣದ ಆಲೆಮನೆಗೆ 14 ಟನ್ ಕಬ್ಬು ಸಾಗಿಸಿ ಯುವಕರು ಸಾಹಸ ಮೆರೆದಿದ್ದರು.

    ಗಾಡಿಯೊಂದಕ್ಕೆ ಸಾಮಾನ್ಯವಾಗಿ 4-5 ಟನ್ ಕಬ್ಬು ತುಂಬಲಾಗುತ್ತದೆ. ಈ ಹಿಂದೆ ಕೆ.ಎಂ.ದೊಡ್ಡಿಯಲ್ಲಿ 12 ಟನ್ ಕಬ್ಬನ್ನು ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಸಾಗಿಸಲಾಗಿತ್ತು ಎನ್ನಲಾಗಿದೆ. ಆ ದಾಖಲೆ ಮುರಿಯುವ ಸಲುವಾಗಿ ರಾಸುಗಳಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಿ 14 ಕಬ್ಬನ್ನು ಆಲೆಮನೆಗೆ ಯುವಕರು ಸಾಗಿಸಿದ್ದರು.

    ಇದನ್ನೂ ಓದಿ: ‘ಸೆರೆಮನೆ’ಯಿಂದಲೇ ರಾಜಕೀಯ- ಎನ್​ಡಿಎ ಶಾಸಕರಿಗೆ ಲಾಲು ‘ಬಲೆ’ !

    2.90 ಲಕ್ಷ ರೂ. ಮೌಲ್ಯದ ರಾಸುಗಳು ಹುರುಗಲವಾಡಿ ಗ್ರಾಮದ ಶರತ್ ಅವರಿಗೆ ಸೇರಿದ್ದಾಗಿವೆ. ಕಬ್ಬು ತುಂಬಿದ ಗಾಡಿಯನ್ನು ನೋಡಲು ನೆರೆದಿದ್ದ ನಾಗರಿಕರು ಶಿಳ್ಳೆ ಹಾಕಿ, ಜೈಕಾರ ಕೂಗುತ್ತ ರಾಸುಗಳಿಗೆ ಬೆಂಬಲ ಸೂಚಿಸಿದ್ದರು.

    ಪ್ರಾಣಿಪ್ರಿಯರ ಬೇಸರ: ಪ್ರಾಣಿಗಳನ್ನು ಹಿಂಸಿಸುವುದು ಸರಿಯಲ್ಲ. ಯುವಕರ ಮೋಜಿಗೆ ಪ್ರಾಣಿಗಳ ಮೇಲೆ ಬಲಪ್ರಯೋಗ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಸರ್ಕಾರ ಇಂಥ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪರ -ವಿರೋಧ ಚರ್ಚೆಯಾಗಿತ್ತು.

    ಕೆರಗೋಡು ಪೊಲೀಸರಿಂದ ಪ್ರಕರಣ ದಾಖಲು
    ಮೂಕಪ್ರಾಣಿಗಳ ಮೇಲಿನ ಹಿಂಸೆ ತಡೆಗಟ್ಟುವ ಕಾಯ್ದೆಯಡಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಎಚ್.ಮಲ್ಲಿಗೆರೆ ಗ್ರಾಮದ ರಂಜು ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಕಬ್ಬು ಎಳೆಸುವಾಗ ಎತ್ತುಗಳಿಗೆ ಹಿಂಸೆ ನೀಡಿದ್ದಾರೆ ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

    14 ಟನ್ ಕಬ್ಬು ತುಂಬಿದ ಗಾಡಿ ಎಳೆದ ಜೋಡೆತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts