More

    ಚನ್ನಪಟ್ಟಣದ ಮಹಿಳೆ ಹೊಟ್ಟೆಯಲ್ಲಿತ್ತು 18 ಕೆಜಿ ಗೆಡ್ಡೆ! ಮಿಮ್ಸ್​ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

    ಮಂಡ್ಯ: ಮಹಿಳೆಯ ಹೊಟ್ಟೆಯಲ್ಲಿದ್ದ 18 ಕೆಜಿ ತೂಕದ ಗೆಡ್ಡೆ (ಜಿಸ್ಟ್​)ಯನ್ನು ಮಂಡ್ಯ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ(ಮಿಮ್ಸ್​) ಶಸ್ತ್ರವಿಭಾಗದ ತಜ್ಞ ವೈದ್ಯರು ಗುರುವಾರ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಚನ್ನಪಟ್ಟಣದ 42 ವರ್ಷದ ಅಮಿದಾಬಾನು ಎಂಬುವರ ಹೊಟ್ಟೆಯಲ್ಲಿದ್ದ ಗೆಡ್ಡೆಯನ್ನು ಹೊರ ತೆಗೆಯಲಾಗಿದೆ. ಹೊಟ್ಟೆಯಲ್ಲಿ ಗೆಡ್ಡೆ ಇರುವುದು ಅವರಿಗೆ ತಿಳಿದಿರಲಿಲ್ಲ. ಇತ್ತೀಚೆಗೆ ಮಿಮ್ಸ್​ನಲ್ಲಿ ತಪಾಸಣೆಗೆ ಒಳಗಾದಾಗ ಶಸ್ತ್ರಚಿಕಿತ್ಸಾ ವಿಭಾಗದ ತಜ್ಞ ವೈದ್ಯ ಡಾ.ಲಿಂಗರಾಜು ಮತ್ತು ತಂಡದವರು ಮಹಿಳೆಯ ಹೊಟ್ಟೆಯಲ್ಲಿ ಗೆಡ್ಡೆ ಇರುವುದನ್ನು ಪತ್ತೆ ಹಚ್ಚಿದ್ದರು. ನಂತರ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ.

    ಮಿಮ್ಸ್​ ನಿರ್ದೇಶಕ ಡಾ.ಎಂ.ಆರ್​.ಹರೀಶ್​ ಮಾತನಾಡಿ, ವೈದ್ಯರು ಮಹಿಳೆಯ ಹೊಟ್ಟೆಯಲ್ಲಿದ್ದ ಗೆಡ್ಡೆಯನ್ನು ಹೊರತೆಗೆದಿದ್ದಾರೆ. ಮಿಮ್ಸ್​ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಯುತ್ತಿದೆ ಎಂಬುದಕ್ಕೆ ಇದು ಸಾಕ್ಷಿ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts