More

    ಕೆಆರ್​ಎಸ್​ ಡ್ಯಾಂ ಬಿರುಕು ಬಿಟ್ಟಿದೆ ಎಂಬ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಸುಮಲತಾ ಅಂಬರೀಷ್!

    ಮಂಡ್ಯ: ಕೆಆರ್​ಎಸ್​ ಡ್ಯಾಂ ಬಿರುಕು ಬಿಟ್ಟಿಲ್ಲ ಎಂದರೇ ಸಂತೋಷ. ಆದರೆ, ಸತ್ಯಾಸತ್ಯತೆ ಅರಿಯಲು ಅವಕಾಶ ಮಾಡಿಕೊಡಬೇಕು ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದರು.​

    ಬಿರುಕು ಬಿಟ್ಟಿದೆ ಎಂದು ಸ್ಪಷ್ಟವಾಗಿ ಹೇಳಿದ್ದ ಸುಮಲತಾ ಅಂಬರೀಷ್​, ಇದೀಗ ಬಿರುಕಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ತಿಂಗಳ ಬಳಿಕ ಡ್ಯಾಂ ಬಿರುಕು ಹೇಳಿಕೆಗೆ ಸ್ಪಷ್ಟನೆ ನೀಡಿದ್ದು, ಡ್ಯಾಂ‌ನಲ್ಲಿ ಬಿರುಕು ಇದೆಯೋ? ಇಲ್ವೋ? ಎಂಬುದೇ ಪ್ರಶ್ನೆಯಾಗಿದೆ. ಆದರೆ ಹಿಂದೆ ಏನೆಲ್ಲಾ ಆಗಿದೆ ಎಂಬ ದಾಖಲೆ ಇದೆ ಎಂದರು.

    ನೂರು ವರ್ಷದ ಹಿಂದಿನ ಡ್ಯಾಂ ಬಲಪಡಿಸಲು ನೋಡಬೇಕು. ಡ್ಯಾಂ ಹತ್ತಿರ ಬಂದು ಅಕ್ರಮ ಗಣಿಗಾರಿಕೆ ಮಾಡಿದ್ರೆ ಹೇಗೆ? ಡ್ಯಾಂ ಬಗ್ಗೆ ಪ್ರತಿದಿನ ಮಾಹಿತಿ ಪಡೆಯುತ್ತಿದ್ದೇನೆ. ನಾನು ಹಲವು ಅಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ತೆಗೆದುಕೊಳ್ಳುತ್ತಿದ್ದೇನೆ. ರಾಜಕಾರಣದ ಮಾತುಗಳಿಗೆ ಉತ್ತರ ಹೇಳಿ ಕೂತರೆ ಅದು ರಾಜಕಾರಣ ಆಗುತ್ತೆ. ನಾನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದರೆ ಕೆಲಸ ನಡೀತಿಲ್ಲ ಎಂದಲ್ಲ ಎನ್ನುವ ಮೂಲಕ ವಿರೋಧಿಗಳಿಗೆ ಟಾಂಗ್​ ನೀಡಿದರು.

    ಡ್ಯಾಂ ಬಿರುಕು ಬಿಟ್ಟಿದೆ ಎಂಬ ನನ್ನ ಹೇಳಿಕೆ ಬಳಿಕ ಹಲವರು ಅವರವರ ಲಾಭ ನಷ್ಟಕ್ಕೆ ತಕ್ಕಂತೆ ಮಾತನಾಡಿದ್ದಾರೆ. ಆದರೆ, ಕೆಆರ್​ಎಸ್​ ಉಳಿಸುವುದು ನನ್ನ ಉದ್ದೇಶ. ಇನ್ನು ಮುಂದೆ ಸೇವ್ ಕೆಆರ್​ಎಸ್​ ಡ್ಯಾಂ ಎಂಬ ಹ್ಯಾಶ್‌ಟ್ಯಾಗ್ ಬಳಸುತ್ತೇನೆಂದು ತಿಳಿಸಿದರು.

    ಕೆಲ‌ ತಿಂಗಳಲ್ಲಿ ಕರೊನಾ ಸಂಪೂರ್ಣ ಕಂಟ್ರೋಲ್‌ಗೆ ಬರುವ ನಂಬಿಕೆ ಇದೆ. ಆದರೆ ಕೆಆರ್​ಎಸ್​ ಡ್ಯಾಂ ಶಾಶ್ವತವಾಗಿ ಉಳಿಸಿಕೊಳ್ಳಬೇಕು. ಡ್ಯಾಂಗೆ ಹೆಚ್ಚು ಕಡಿಮೆ ಆದರೆ ಏನೆಲ್ಲಾ ಅನಾಹುತ ಆಗಲಿದೆ‌ ಎಂಬ ಅರಿವು ನಮಗಿರಬೇಕು. ಎಲ್ಲರೂ ಒಟ್ಟಾಗಿ ಈ ಬಗ್ಗೆ ಹೋರಾಟ ಮಾಡಬೇಕಾಗಿದೆ ಎಂದರು. (ದಿಗ್ವಿಜಯ ನ್ಯೂಸ್​)

    ಕರೊನಾ ಹೆಚ್ಚಿರುವ ಆರು ರಾಜ್ಯಗಳಿಗೆ ಕೇಂದ್ರದ ತಂಡಗಳು

    ರಸ್ತೆಯಲ್ಲೇ ಮಹಿಳೆಯ ಮೇಲೆರಗಿದ ಯುವಕ: ಸಿಸಿಟಿವಿಯಲ್ಲಿ ಕಾಮಾಂಧನ ಅಸಹ್ಯ ವರ್ತನೆ ಸೆರೆ!

    ವರ್ಲ್ಡ್‌ ಕಪ್‌ ಆಟಕ್ಕೂ ಮುನ್ನ ಸೆಕ್ಸ್‌ನಲ್ಲಿ ತೊಡಗಿಸಿಕೊಳ್ಳಿ ಎಂದಿದ್ದೆ: ಸ್ಫೋಟಕ ರಹಸ್ಯ ಬಿಚ್ಚಿಟ್ಟ ತರಬೇತುದಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts