More

    ಸ್ಯಾಂಟ್ರೋ ರವಿಗೆ ಹೆದರಿ ಸರ್ಕಾರಿ ಕೆಲ್ಸ ಬಿಟ್ಟಿರುವ ಅಣ್ಣ! ಬಾಲ್ಯದಿಂದಲೇ ರವಿಗೆ ಇತ್ತು ಕೀಚಕ ಬುದ್ಧಿ

    ಮಂಡ್ಯ: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಬಗೆದಷ್ಟು ಮಾಹಿತಿಗಳು ಬೆಳಕಿಗೆ ಬರುತ್ತಲೇ ಇದೆ. ಮಂಜುನಾಥ್​ ಅಲಿಯಾಸ್​ ಸ್ಯಾಂಟ್ರೋ ರವಿಗೆ ಬಾಲ್ಯದಿಂದಲೇ ಕೀಚಕ ಬುದ್ಧಿ ಇತ್ತು ಎಂಬ ಸಂಗತಿ ಇದೀಗ ಬಯಲಾಗಿದೆ.

    ಶಾಲಾ ದಿನಗಳಲ್ಲೇ ರವಿಗೆ ಕೆಟ್ಟ ಸ್ನೇಹಿತರ ಸಹವಾಸ ಇತ್ತಂತೆ. ರವಿಗೆ ನಿತ್ಯವೂ ಹೆತ್ತವರಿಗೆ ದೂರು ಬರುತ್ತಿತ್ತು. ಎಷ್ಟೇ ಬುದ್ದಿವಾದ ಹೇಳಿದರೂ ಯಾವುದಕ್ಕೂ ಕ್ಯಾರೆ ಎನ್ನದೇ ತಂದೆ-ತಾಯಿಗೆ ರವಿ ಬೇಸರ ತರಿಸುತ್ತಿದ್ದ. ನಾಲ್ಕು ಮಕ್ಕಳ ಪೈಕಿ ಮೂವರು ಒಳ್ಳಯವರಾದರೆ, ರವಿ ಮಾತ್ರ ಕೀಚಕ ಬುದ್ಧಿಯನ್ನು ಹೊಂದಿದ್ದ.

    ಬೆಳವಣಿಗೆಯಾಗುತ್ತಾ ಕ್ರಮೇಣ ಪುಡಿ ರೌಡಿಗಳ ಸಹವಾಸ ಮಾಡಿ ಅಡ್ಡ ಮಾರ್ಗ ಹಿಡಿದಿದ್ದ ರವಿ, ಕಳ್ಳತನ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ. ಅಣ್ಣ, ತಮ್ಮ ಹಾಗೂ ತಂಗಿಗೆ ಮನಬಂದಂತೆ ಹೊಡೆದು ಕಿರುಕುಳ ನೀಡುತ್ತಿದ್ದ. ಹಣಕ್ಕಾಗಿ ತಂದೆಯನ್ನು ಪೀಡಿಸುತ್ತಿದ್ದ. ಖಡಕ್ ಅಧಿಕಾರಿ ಅಂತ ಹೆಸರು ತೆಗೆದುಕೊಂಡಿದ್ದ ತಂದೆಗೆ ರವಿಯದ್ದೇ ಚಿಂತೆಯಾಗಿತ್ತು. ತಂದೆ ಸತ್ತಾಗ ರವಿಗೆ ಪೊಲೀಸರು ಕೋಳ ಹಾಕಿಕೊಂಡು ಅಂತಿಮ ದರ್ಶನಕ್ಕೆ ಕರೆದುಕೊಂಡು ಬಂದಿದ್ದರು.

    ತಂದೆಯ ಮರಣದ ನಂತರ ತಾಯಿ, ತಂಗಿ ಹಾಗೂ ಸಹೋದರರಿಗೆ ಮತ್ತಷ್ಟು ಕಿರುಕುಳ ನೀಡಲು ಆರಂಭಿಸಿದ. ಆತನ ಕಿರುಕುಳಕ್ಕೆ ಹೆದರಿ ಅಣ್ಣ ಸರ್ಕಾರಿ ಕೆಲಸವನ್ನೇ ಬಿಟ್ಟಿದ್ದಾರೆ. ಅಣ್ಣ ಎಂಬುವುದನ್ನೂ ನೋಡದೆ ಹಲ್ಲೆ ನಡೆಸುತಿದ್ದ. ಮೃದು ಸ್ವಭಾವದ ವ್ಯಕ್ತಿಯಾಗಿದ್ದ ಅಣ್ಣ, ರವಿಗೆ ಹೆದರುತ್ತಿದ್ದ. ತಂದೆ ಸಾವಿನ ನಂತರ ಅನುಕಂಪದ ಆಧಾರದ ಸಿಕ್ಕಿದ್ದ ಕೆಲಸಕ್ಕೆ ರವಿ ಅಣ್ಣ ರಾಜೀನಾಮೆ ನೀಡಿದ್ದ. ತನ್ನ ಮುಂದೆ ಯಾರೂ ಚೆನ್ನಾಗಿರಬರಾದು ಅಂತಾ ರವಿ ಕೀಚಕ ಬುದ್ಧಿ ತೋರುತ್ತಿದ್ದ. ಕೆಲಸಕ್ಕೆ ರಾಜೀನಾಮೆ ನೀಡಿ ರವಿಯಿಂದ ಪಾರಾಗಲು ಆತನ ಅಣ್ಣ ಊರು ಬಿಟ್ಟಿದ್ದ.

    ರವಿಯನ್ನ ಮಂಡ್ಯ ಬಿಡಿಸಿದ್ದ ಸರ್ಕಲ್ ಇನ್ಸ್ಪೆಕ್ಟರ್
    ಕುಟುಂಬಸ್ಥರಿಗೆ ರವಿ ನೀಡುತ್ತಿದ್ದ ಕಿರುಕುಳ ತಪ್ಪಿಸಲು ಸಿಪಿಐ ನೆರವು ನೀಡಿದ್ದ. ತನ್ನ ಪಾಲಿನ ಆಸ್ತಿ ನೀಡುವಂತೆ ರವಿ ನಿತ್ಯವು ಜಗಳ ಮಾಡ್ತಿದ್ದ. ಪ್ರಾಮಾಣಿಕ ಅಧಿಕಾರಿಯಾಗಿದ್ದ ರವಿ ತಂದೆ ಲೋನ್ ಮೇಲೆ ಮನೆ ನಿರ್ಮಾಣ ಮಾಡಿದ್ದರು. ಮಂಡ್ಯದಲ್ಲಿ ನಿವೇಶನ ಖರೀದಿಸಿ ಮನೆ ನಿರ್ಮಿಸಿದ್ದರು. ತಂದೆ ಮರಣದ ಬಳಿಕ ಕಿರುಕುಳ ನೀಡಲು ಶುರುಮಾಡಿದ ರವಿಗೆ ಸಿಪಿಐ ಬೆಂಡೆತ್ತಿದ್ದರು. ರವಿ ಹಾಗೂ ಕುಟುಂಬಸ್ಥರ ಜೊತೆಗೆ ಮಾತುಕತೆ ನಡೆಸಿದ್ದ ಸಿಪಿಐ, ಒಂದಿಷ್ಟು ಹಣ ಕೊಡಿಸಿ ಮತ್ತೆ ಆಸ್ತಿ ಕೇಳಲ್ಲ ಅಂತ ಬರೆಸಿ ಕೊಟ್ಟಿದ್ದರು. ಮತ್ತೆ ಮಂಡ್ಯದಲ್ಲಿ ಕಾಣಿಸಿಕೊಳ್ಳದಂತೆ ಖಡಕ್ ವಾರ್ನಿಂಗ್ ಕೊಟ್ಟು ಊರು ಬಿಡಿಸಿದ್ದರು.

    ಮೈಸೂರಿನ ಯುವತಿಯೊಬ್ಬಳು ರವಿ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಂತೆ ಆತ ಪರಾರಿಯಾಗಿದ್ದಾನೆ. ಮೈಸೂರು ಪೊಲೀಸರು ವಿಶೇಷ ತಂಡ ರಚಿಸಿ ಸ್ಯಾಂಟ್ರೋ ರವಿಗಾಗಿ ಬಲೆ ಬೀಸಿದ್ದಾರೆ. ಬಾಂಬೆಗೆ ಹೋಗಿದ್ದ ರಾಜಕಾರಣಿಗಳ ಜೊತೆ 12 ಹುಡುಗಿಯರನ್ನು ಈತ ಕಳುಹಿಸಿದ್ದ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸ್ಯಾಂಟ್ರೋ ರವಿ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. (ದಿಗ್ವಿಜಯ ನ್ಯೂಸ್​)

    ಇಂಥವರು ಇರ್ತಾರೆ ಹುಷಾರ್! ಉದ್ಯಮಿಯನ್ನು ಬೆತ್ತಲೆ ಮಾಡಿ 2.69 ಕೋಟಿ ರೂ. ದೋಚಿದ ಮಹಿಳೆ

    ಗಾಂಜಾ ಕೇಸ್ ದಾಖಲಿಸುವುದಾಗಿ ಬೆದರಿಸಿ ಪೊಲೀಸರಿಂದ ಹಣ ವಸೂಲಿ? ಕಮಿಷನರ್‌ಗೆ ದೂರು ನೀಡಿದ ಯುವಕ

    ಗಂಗಾ ವಿಲಾಸ ಐಷಾರಾಮಿ ನೌಕೆಗೆ ಇಂದು ಪ್ರಧಾನಿ ಚಾಲನೆ; ದೇಶದ ಅತಿ ದೀರ್ಘ ಒಳನಾಡು ಪ್ರಯಾಣ ಶುರು | 3,200 ಕಿ.ಮೀ. ಉದ್ದದ ಮಾರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts