ಗಂಗಾ ವಿಲಾಸ ಐಷಾರಾಮಿ ನೌಕೆಗೆ ಇಂದು ಪ್ರಧಾನಿ ಚಾಲನೆ; ದೇಶದ ಅತಿ ದೀರ್ಘ ಒಳನಾಡು ಪ್ರಯಾಣ ಶುರು | 3,200 ಕಿ.ಮೀ. ಉದ್ದದ ಮಾರ್ಗ

ನವದೆಹಲಿ: ವಾರಾಣಸಿಯಿಂದ ಅಸ್ಸಾಂನ ದಿಬ್ರೂಗಢದ ವರೆಗೆ ಬಾಂಗ್ಲಾದೇಶದ ಮೂಲಕ ಸಾಗುವ ದೇಶದ ಅತ್ಯಂತ ದೊಡ್ಡ ಐಷಾರಾಮಿ ನೌಕೆ ‘ಎಂವಿ ಗಂಗಾ ವಿಲಾಸ’ಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ವಾರಾಣಸಿಯ ಗಂಗಾ ನದಿಯ ಸಂತ ರವಿದಾಸ್ ಘಾಟ್​ನಲ್ಲಿ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ‘ಟೆಂಟ್ ಸಿಟಿ’ಯನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಅಲ್ಲದೆ, 1,000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಹಲವು ಒಳನಾಡು ಸಾರಿಗೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ಪ್ರವಾಸೋದ್ಯಮ ಅವಕಾಶಕ್ಕೆ ಉತ್ತೇಜನ … Continue reading ಗಂಗಾ ವಿಲಾಸ ಐಷಾರಾಮಿ ನೌಕೆಗೆ ಇಂದು ಪ್ರಧಾನಿ ಚಾಲನೆ; ದೇಶದ ಅತಿ ದೀರ್ಘ ಒಳನಾಡು ಪ್ರಯಾಣ ಶುರು | 3,200 ಕಿ.ಮೀ. ಉದ್ದದ ಮಾರ್ಗ