More

  ಖೋ ಖೋ ಪಂದ್ಯಾವಳಿಯಲ್ಲಿ ಮಂಡ್ಯ, ಮೈಸೂರು ತಂಡ ಪ್ರಥಮ

  ಚಿಕ್ಕಮಗಳೂರು:ಲಿಂಗದಹಳ್ಳಿಯಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಹೊನಲು ಬೆಳಕಿನ ಖೋ ಖೋ ಪಂದ್ಯಾವಳಿಯಲ್ಲಿ 17 ವರ್ಷದ ಬಾಲಕರ ವಿಭಾಗದಲ್ಲಿ ಮಂಡ್ಯ ಜಿಲ್ಲೆ ಪ್ರಥಮ, ಮೈಸೂರು ಜಿಲ್ಲೆ ದ್ವೀತಿಯ ಸ್ಥಾನ ಪಡೆದಿದರೆ, ಬಾಲಕಿಯರ ವಿಭಾಗದಲ್ಲಿ ಮೈಸೂರು ತಂಡ ಪ್ರಥಮ ಸ್ಥಾನ ಹಾಗೂ ಉಡುಪಿ ದ್ವೀತೀಯ ಸ್ಥಾನ ಪಡೆದುಕೊಂಡಿತು.
  14 ವರ್ಷದ ಬಾಲಕರ ವಿಭಾಗದಲ್ಲಿ ಹಾಸನ ತಂಡ ಪ್ರಥಮ, ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಪಡೆದುಕೊಂಡರೆ, ಬಾಲಕಿಯರ ವಿಭಾಗದಲ್ಲಿ ಚಿಕ್ಕಮಗಳೂರು ಪ್ರಥಮ, ಮೈಸೂರು ತಂಡ ದ್ವಿತೀಯ ಸ್ಥಾನ ಪಡೆದು ತುಮಕೂರಿನಲ್ಲಿ ನಡೆಯಲ್ಲಿರುವ ರಾಜ್ಯಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿವೆ.
  17 ವರ್ಷದ ಬಾಲಕರ ವಿಭಾಗದಲ್ಲಿ ಚಿಕ್ಕಮಗಳೂರಿನ ಪುನೀತ್ ಉತ್ತಮ ಓಟಗಾರ, ಮಂಡ್ಯದ ಕೆ.ಪಿ.ಚೇತನ್ ಉತ್ತಮ ದಾಳಿಗಾರ ಪ್ರಶಸ್ತಿ ಪಡೆದುಕೊಂಡರು. ಬಾಲಕಿಯರ ವಿಭಾಗದಲ್ಲಿ ಚಿಕ್ಕಮಗಳೂರಿನ ಶೋಭಾ, ಉತ್ತಮ ಓಟಗಾರ್ತಿ, ಮೈಸೂರಿನ ಎನ್.ಮಾನಸ ಉತ್ತಮ ದಾಳಿಗಾರ್ತಿ ಪ್ರಶಸ್ತಿಗೆ ಭಾಜನರಾದರು.
  14 ವರ್ಷದ ಬಾಲಕರ ವಿಭಾಗದಲ್ಲಿ ಹಾಸನದ ಸೃಜನ್ ಗೌಡ ಉತ್ತಮ ಓಟಗಾರ, ದಕ್ಷಿಣ ಕನ್ನಡದ ಅಬ್ದುಲ್ ಹಸನ್ ಉತ್ತಮ ದಾಳಿಗಾರ ಪ್ರಶಸ್ತಿಗೆ ಪಾತ್ರರಾದರು. ಬಾಲಕಿಯರ ವಿಭಾಗದಲ್ಲಿ ಚಿಕ್ಕಮಗಳೂರಿನ ಪಂಚಮಿ ಉತ್ತಮ ದಾಳಿಗಾರ್ತಿ, ಮೈಸೂರಿನ ಇಂಚರ ಉತ್ತಮ ಓಟಗಾರ್ತಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts