More

    ಏ.19ರಿಂದ ಮೂರು ದಿನ ಅಂಚೆ ಮತದಾನಕ್ಕೆ ಅವಕಾಶ: ಮಂಡ್ಯ ಕ್ಷೇತ್ರದಲ್ಲಿರುವ ಮತದಾರರ ಸಂಖ್ಯೆ ಎಷ್ಟು ಗೊತ್ತಾ?

    ಮಂಡ್ಯ: ಅಗತ್ಯ ಸೇವಾ ವಲಯದಡಿ ಬರುವ 1022 ಮತದಾರರಿಗೆ ಏ.19, 20 ಹಾಗೂ 21ರಂದು ಮತದಾನ ಮಾಡಲು ಜಿಲ್ಲಾಡಳಿತ ಅವಕಾಶ ನೀಡಿದೆ. ಅದರಂತೆ ನಗರದ ಮಂಡ್ಯ ವಿಶ್ವವಿದ್ಯಾನಿಲಯದ ಕಲಾವಿಭಾಗದಲ್ಲಿ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
    ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರು 502 ಮತದಾರರು ಹಾಗೂ ಬೇರೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ಮಂಡ್ಯದ 521 ಮತದಾರರಿದ್ದಾರೆ. ಇವರಿಗೆ ಈಗಾಗಲೇ ಮತದಾನದ ದಿನಾಂಕ, ಸಮಯ ಹಾಗೂ ಸ್ಥಳದ ವಿವರವನ್ನು ಎಸ್‌ಎಂಎಸ್ ಮೂಲಕ ಕಳುಹಿಸಿಕೊಡಲಾಗಿದೆ. ನಿಗದಿತ ದಿನದಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಮತ ಚಲಾಯಿಸಬಹುದು.
    ಇನ್ನು ಇಲಾಖಾವಾರು ಗಮನಿಸಿದರೆ ಅಗ್ನಿಶಾಮಕ ಇಲಾಖೆಯಿಂದ-30, ಸಾರಿಗೆ-573, ಆರೋಗ್ಯ-31, ಪೊಲೀಸ್- 68, ಸಂಚಾರ ಪೊಲೀಸ್- 218, ರೈಲ್ವೆ-9, ಕಾರಾಗೃಹ- 19, ವಿದ್ಯುತ್- 26, ಬಿ.ಎಂ.ಆರ್.ಸಿ.ಎಲ್-5, ಗ್ರಾಮೀಣ ಹಾಗೂ ನಗರ ಕುಡಿಯುವ ನೀರು ಸರಬರಾಜು- 33 ಹಾಗೂ ಮಾಧ್ಯಮ-10 ಮತದಾರರಿಗೆ ಮತ ಚಲಾಯಿಸಲು ವ್ಯವಸ್ಥೆ ಮಾಡಲಾಗಿದೆ.
    ಈ ಕುರಿತು ಬುಧವಾರ ಸಂಜೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕುಮಾರ, ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಮತದಾರರಿಗೆ ಪತ್ರ ಮುಖೇನ ಮತದಾನದ ದಿನಾಂಕ, ಸಮಯ ಹಾಗೂ ಸ್ಥಳದ ವಿವರ ತಿಳಿಸಬೇಕು. ಮಾಹಿತಿ ಕೊರತೆಯಿಂದ ಯಾರೂ ಮತದಾನದಿಂದ ವಂಚಿತರಾಗಬಾರದು ಎಂದು ಸೂಚನೆ ನೀಡಿದರು.
    ಅಗತ್ಯ ಸೇವಾ ವಲಯದ ವ್ಯಾಪ್ತಿಗೆ ಬರುವ ಇಲಾಖೆಯ ಮುಖ್ಯಸ್ಥರು ಮತದಾರರಿಗೆ ಮತದಾನ ಮಾಡಲು ಅನುಮತಿ ನೀಡಿ ವ್ಯವಸ್ಥೆ ಮಾಡಿಕೊಡಬೇಕು. ಗುರುತಿಸಲಾಗಿರುವ 1022 ಮತದಾರರಿಗೆ ಏ.26ರಂದು ಇ.ವಿ.ಎಂ. ಮೂಲಕ ಮತದಾನ ಮಾಡಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
    ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಶಿವರಾಜು, ನಗರಾಭಿವೃದ್ಧಿ ಕೋಶದ ಪುರಸಭೆ ತಹಸೀಲ್ದಾರ್ ರವಿಶಂಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts