More

    VIDEO| ಬಿಜೆಪಿ ಮುಖಂಡರಿಗೆ, ಅಧಿಕಾರಿಗಳಿಗೆ ಸರ್ವೆಂಟ್​ ಆದ ಸಬ್ ಇನ್ಸ್​ಪೆಕ್ಟರ್​..!

    ಮಂಡ್ಯ: ಪೊಲೀಸ್​ ಆದವರು ಎಂದಿಗೂ ಪಕ್ಷಪಾತದ ನಿಲುವು ಹೊಂದಿರಬಾರದು ಮತ್ತು ಯಾರನ್ನೂ ಓಲೈಸಬಾರದು. ಹಾಗೆಯೇ ಪೊಲೀಸರು ಸಾಮಾನ್ಯ ಜನರ ಸೇವಕನಾಗಿರಬೇಕೋ ಹೊರತು ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ಗುಲಾಮನಾಗಿರಬಾರದು. ಆದರೆ, ಜನರು ನಾಚಿಕೆ ಪಡುವಂತಹ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

    ಹೌದು, ಸಬ್​ಇನ್ಸ್​ಪೆಕ್ಟರ್​ ಒಬ್ಬರು ಸರ್ವೆಂಟ್ ಆಗಿ ಕೆಲಸ ಮಾಡಿದ ಘಟನೆ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಮಯೂರ ಹೋಟೆಲ್​ನಲ್ಲಿ ನಡೆದಿದೆ. ಬಿಜೆಪಿ ಮುಖಂಡರಿಗೆ ಹಾಗೂ ಅಧಿಕಾರಿಗಳಿಗೆ ಎಸ್​ಐ ಊಟ ಬಡಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: ಬೇರೆ ಹೆಣ್ಣಿನತ್ತ ಕಣ್ಣೆತ್ತಿಯೂ ನೋಡಲ್ಲ, ಆದರೂ ಪತ್ನಿ ಒದೀತಾಳೆ, ಹೊಡೀತಾಳೆ… ಏನು ಮಾಡಲಿ?

    ಘಟನೆಯ ವಿವರಣೆಗೆ ಬರುವುದಾದರೆ, ಶನಿವಾರ ಗಣಿ ಸಚಿವರಾದ ಸಿ.ಸಿ.ಪಾಟೀಲ್ ಹಾಗೂ ರೇಷ್ಮೆ ಖಾತೆ ಸಚಿವ ನಾರಾಯಣಗೌಡ ಪ್ರವಾಸ ಕೈಗೊಂಡಿದ್ದ ವೇಳೆ ಈ ಪ್ರಸಂಗ ಜರುಗಿದೆ. ಬಿಜೆಪಿ ಮುಖಂಡರು ಮತ್ತು ಅಧಿಕಾರಿಗಳು ಸಚಿವರ ಜತೆಗೆ ಊಟಕ್ಕೆ ಕುಳಿತಿದ್ದರು. ಈ ವೇಳೆ ಸಮವಸ್ತ್ರ ಧರಿಸಿಕೊಂಡೇ ಕೆಆರ್​ಎಸ್​ ಪೊಲೀಸ್​ ಠಾಣೆಯ ಸಬ್ ಇನ್ಸ್​ಪೆಕ್ಟರ್​ ನವೀನ್​ ಗೌಡ ಉಣಬಡಿಸಿದ್ದಾರೆ.

    ಓರ್ವ ಪಿಎಸ್ಐ ಆಗಿ ಪೊಲೀಸ್ ಸಮವಸ್ತ್ರ ಧರಿಸಿ ಈ ರೀತಿ ಮಾಡೋದು ಎಷ್ಟರ ಮಟ್ಟಿಗೆ ಸರಿ ಎಂದು ಇದೀಗ ಸಾರ್ವಜನಿಕರ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದ್ದು, ಪಿಎಸ್‌ಐ ನಡೆಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಈ ರೀತಿ ಮಾಡಿದ್ರೆ ಜನ ಸಾಮಾನ್ಯರು ಪೊಲೀಸರ ಮೇಲೆ ನಂಬಿಕೆ ಇಡೋದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಎನ್​ಡಿಎಗೆ ಜೆಡಿಎಸ್?; ವಿಲೀನಕ್ಕಿಂತ ಮೈತ್ರಿಕೂಟ ಸೇರಲು ಎಚ್​ಡಿಕೆ ಆಸಕ್ತಿ

    ನಿರ್ಗತಿಕ ವೃದ್ಧೆಗೆ ಹೊಸ ಮನೆ ನಿರ್ಮಿಸಿಕೊಟ್ಟ ಎಸ್​ಐ: ಇವರ ಕತೆ ಕೇಳಿದ್ರೆ ನಿಜಕ್ಕೂ ಹೆಮ್ಮೆ ಪಡ್ತೀರಾ!

    ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳಾ ಪಿಎಸ್​ಐ ಮೃತದೇಹ ಪತ್ತೆ: ಅನುಮಾನ ಮೂಡಿಸಿದ ಡೆತ್​ನೋಟ್​!

    ಪೊಲೀಸರ ಋಣ ತೀರಿಸಿದ ಗ್ರಾಮ ಪಂಚಾಯಿತಿಯ ನೂತನ ಸದಸ್ಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts