More

    ಕೆಆರ್​ಎಸ್ ಡ್ಯಾಂ ಮುಖ್ಯದ್ವಾರದ ಬಳಿ ಚಿರತೆ ಪ್ರತ್ಯಕ್ಷ: ಸಿಸಿಟಿವಿಯಲ್ಲಿ ಓಡಾಟದ ದೃಶ್ಯ ಸೆರೆ

    ಮಂಡ್ಯ: ಕೃಷ್ಣರಾಜಸಾಗರ (ಕೆಆರ್​ಎಸ್​) ಅಣೆಕಟ್ಟಿನ ಮುಖ್ಯದ್ವಾರದ ಬಳಿಯೇ ಚಿರತೆ ಪ್ರತ್ಯಕ್ಷವಾಗಿದೆ. ಮುಖ್ಯದ್ವಾರದ ಬಳಿ ಚಿರತೆ ಓಡಾಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳೀಯರಲ್ಲಿ ಭಾರಿ ಆತಂಕ ಸೃಷ್ಟಿಯಾಗಿದೆ.

    ಕಳೆದ ಹದಿನೆಂಟು ದಿನದಿಂದ KRS ಡ್ಯಾಂ ಹಾಗೂ ಬೃಂದಾವನದ ಸುತ್ತಮುತ್ತ ಚಿರತೆ ಕಾಣಿಕೊಳ್ಳುತ್ತಿದೆ. ಮೊನ್ನೆ ಸಂಜೆ ಬೃಂದಾವನದ ಟಿಕೆಟ್ ಕೌಂಟರ್ ಬಳಿ ಪ್ರತ್ಯಕ್ಷವಾಗಿತ್ತು. ಈ ಸುದ್ದಿ ಕೇಳುತ್ತಿದ್ದಂತೆ ಪ್ರವಾಸಿಗರು ಬೃಂದಾವನದಿಂದ ಓಡಿಹೋಗಿದ್ದರು.

    ನಿನ್ನೆ ರಾತ್ರಿ ಡ್ಯಾಂನ ಮುಖ್ಯದ್ವಾರದ ಬಳಿಯೇ ಚಿರತೆ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ. ಅಲ್ಲದೆ, ಬೀದಿ ನಾಯಿ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಸದ್ಯ ಕೆಆರ್​ಎಸ್​ ಆವರಣದಲ್ಲಿ ಬಿರತೆ ಬೀಡುಬಿಟ್ಟಿದ್ದು, ಚಿರತೆಯ ಹಾವಳಿಯಿಂದ ಭದ್ರತಾ ಸಿಬ್ಬಂದಿ ಮತ್ತು ನೀರಾವರಿ ಇಲಾಖೆ ಸಿಬ್ಬಂದಿ ಭಯದಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಚಿರತೆಯ ಓಡಾಟದಿಂದ ಗ್ರಾಮಸ್ಥರಲ್ಲೂ ಆತಂಕ ಮನೆ ಮಾಡಿದೆ.

    ವಿಶ್ವ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಚಿರತೆ ಆತಂಕ ಸೃಷ್ಟಿಸಿದ್ದರೂ ಗಂಭೀರವಾಗಿ ಪರಿಗಣಿಸದೇ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಮನೋಭಾವ ಹೊಂದಿದ್ದಾರೆ. ಬೋನು ಇಟ್ಟು ನಮಗೂ ಚಿರತೆ ಹಾವಳಿಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

    VIDEO| ಜಗತ್ತಿನ ಅತ್ಯಂತ ಎತ್ತರ ಕಟ್ಟಡ ಬುರ್ಜ್​ ಖಲೀಫಾ ಸಮೀಪದ 35 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ!

    ಆಲ್ಕೋಹಾಲ್​ ನೀಡಿ ಅಪ್ರಾಪ್ತ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ! ಶಿಕ್ಷಕಿಯ ಬಂಧನ

    ಶೋಯೆಬ್​ ಜತೆ ಡಿವೋರ್ಸ್!​ ವದಂತಿಗೆ ಪುಷ್ಟಿ ನೀಡಿದ ಮತ್ತೊಂದು ನೋವಿನ ಪೋಸ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts