More

    ಡಾ.ಆನಂದ್ ತೇಲ್‌ತುಂಬ್ಡೆ ಬಂಧನಕ್ಕೆ ಪ್ರಗತಿಪರರ ಆಕ್ರೋಶ

    ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗುರುವಾರ ನಗರದಲ್ಲಿ ಎರಡು ಪ್ರತ್ಯೇಕ ಪ್ರತಿಭಟನೆ ನಡೆಯಿತು.
    ಜನಪರ ಚಿಂತಕ ಡಾ.ಆನಂದ್ ತೇಲ್‌ತುಂಬ್ಡೆ ಬಂಧನ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಕಪ್ಪುಪಟ್ಟಿ ಧರಿಸಿ ಮೌನ ಧರಣಿ ನಡೆಸಿದರು.

    ಬಿಜೆಪಿ ಸರ್ಕಾರ ಡಾ.ಆನಂದ್‌ತೇಲ್ ತುಂಬ್ಡೆ ಅವರನ್ನು ಉದ್ದೇಶಪೂರ್ವಕವಾಗಿ ಬಂಧಿಸಿದೆ. ದೇಶದ ಪ್ರತಿಷ್ಠಿತ ಸಂಸ್ಥೆ ಗೋವಾ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ವಿಭಾಗವೊಂದರ ಮುಖ್ಯಸ್ಥರಾಗಿದ್ದ ಡಾ.ಆನಂದ್ ಅವರನ್ನು ಜನಪರ ಚಿಂತನೆಗಳ ಕಾರಣಕ್ಕಾಗಿಯೇ ಬಂಧಿಸಲಾಗಿದೆ. ಆದ್ದರಿಂದ, ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

    ದಸಂಸ ರಾಜ್ಯ ಸಂಚಾಲಕ ಎಂ.ಬಿ.ಶ್ರೀನಿವಾಸ್, ಗುರುಪ್ರಸಾದ್ ಕೆರಗೋಡು, ಕೆಂಪಣ್ಣ ಸಾಗ್ಯ, ಅಂದಾನಿ ಸೋನಹಳ್ಳಿ, ರಾಜಣ್ಣ, ಕುಬೇರಪ್ಪ, ಪ್ರಸನ್ನ, ರಮಾನಂದ, ವಿಜಯಲಕ್ಷ್ಮೀ ಇತರರಿದ್ದರು.

    ವಿಮಾ ವ್ಯಾಪ್ತಿಗೆ ಸೇರಿಸಿ: ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುವ ಪತ್ರಕರ್ತರನ್ನು ವಿಮಾ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದಿಂದ ಮೌನ ಪ್ರತಿಭಟನೆ ನಡೆಸಲಾಯಿತು.

    ನಗರದ ವಾರ್ತಾ ಇಲಾಖೆ ಎದುರು ಜಮಾವಣೆಗೊಂಡ ಸಂಘದ ಪದಾಧಿಕಾರಿಗಳು ಪತ್ರಕರ್ತರನ್ನು ಕರೊನಾ ಸೇನಾನಿಗಳೆಂದು ಹೆಸರಿಗಷ್ಟೇ ಹೇಳಲಾಗುತ್ತಿದೆ. ಆದರೆ, ಅವರ ಸಂಕಷ್ಟಕ್ಕೆ ನೆರವಾಗದಿರುವುದು ಬೇಸರದ ಸಂಗತಿ ಎಂದರು. ಅಂತೆಯೇ, ಲಾಕ್‌ಡೌನ್‌ನಿಂದಾಗಿ ಪತ್ರಕರ್ತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ, ಈವರೆಗೆ ಮಾಧ್ಯಮ ಪಟ್ಟಿಯಲ್ಲಿರುವ ರಾಜ್ಯ, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆ, ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ನೀಡಬೇಕಿರುವ ಜಾಹೀರಾತಿನ 40 ಕೋಟಿ ರೂ ಹಣವನ್ನು ಬಿಡುಗಡೆ ಮಾಡಬೇಕು. ಹಾಗೂ ಪ್ಯಾಕೇಜ್ ರೂಪದಲ್ಲಿ ಜಾಹೀರಾತು ನೀಡಬೇಕು ಎಂದು ಆಗ್ರಹಿಸಿದರು.

    ಸಿಐಟಿಯು ಮನವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ಕಂಟೈನ್‌ಮೆಂಟ್ ಮತ್ತು ಕೆಂಪು ವಲಯದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಸುರಕ್ಷತೆಗಾಗಿ ಪಿಪಿಇ ಕಿಟ್ ವಿತರಿಸಬೇಕು. ಎಲ್ಲ ಸಿಬ್ಬಂದಿಗೂ ಆಗಿಂದಾಗ್ಗೆ ಕೋವಿಡ್-19 ಪರೀಕ್ಷೆ ಮಾಡಿಸುವುದು. ಕರ್ತವ್ಯದಲ್ಲಿರುವ ಎನ್‌ಎಚ್‌ಎಂ ಗುತ್ತಿಗೆ, ಸ್ಕೀಂ ನೌಕರರಿಗೆ ಹೆಚ್ಚುವರಿಯಾಗಿ ಪ್ರತಿ ತಿಂಗಳು 25 ಸಾವಿರ ರೂ ಪ್ರೋತ್ಸಾಹ ಧನ ಹಾಗೂ ಉಚಿತವಾಗಿ ಪಡಿತರ ಆಹಾರ ಕೊಡಬೇಕು. ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲ ಕುಟುಂಬಕ್ಕೆ 7,500 ರೂ. ನೀಡಬೇಕು ಎಂದು ಒತ್ತಾಯಿಸಿದರು.

    ಮುಖಂಡರಾದ ಸಿ.ಕುಮಾರಿ, ಎಂ.ಎಂ.ಶಿವಕುಮಾರ, ಮಂಜುಳಾ, ನಾಗರಾಜು, ಜಯಲಕ್ಷ್ಮಮ್ಮ, ಪುಟ್ಟಮ್ಮ, ಚಂದ್ರಶೇಖರ್, ಕೆ. ನಾರಗತ್ನಮ್ಮ ಇತರರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts