More

    25ಕ್ಕೆ ಮಂಡೇನಕೊಪ್ಪದ ಸುರಭಿ ಗೋಶಾಲೆಗೆ ಶೃಂಗೇರಿ ಶ್ರೀ ಭೇಟಿ

    ಶಿವಮೊಗ್ಗ: ಮಂಡೇನಕೊಪ್ಪದ ಸುರಭಿ ಗೋಶಾಲೆಗೆ ನ.25ರ ಸಂಜೆ 4.30ಕ್ಕೆ ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ ನೀಡಿ ಭಕ್ತರನ್ನು ಅನುಗ್ರಹಿಸುವರು ಎಂದು ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ನಟರಾಜ ಭಾಗವತ್ ತಿಳಿಸಿದರು.
    ಗೋ ಶಾಲೆ ಮತ್ತು ಗೋ ಸಂಪತ್ತು ಸಮಾಜಕ್ಕೆ ಹೊರೆಯಲ್ಲ ಎಂಬುದನ್ನು ಬಿಂಬಿಸುವ ಉದ್ದೇಶದಿಂದ ಬ್ರಾಹ್ಮಣ ಮಹಾಸಭಾ ಸುರಭಿ ಗೋಶಾಲೆ ನಡೆಸುತ್ತಿದ್ದು, ಪ್ರಸ್ತುತ 189 ಗೋವುಗಳಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಏಳು ಎಕರೆ ವ್ಯಾಪ್ತಿಯಲ್ಲಿ ಸಮಾಜದ ಎಲ್ಲರ ಸಹಕಾರ ಹಾಗೂ ದಾನಿಗಳ ನೆರವಿನಿಂದ ಗೋಶಾಲೆ ನಿರ್ಮಿಸಲಾಗಿದೆ. ಕಾಚಿನಕಟ್ಟೆ, ಮಂಡೇನಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಏಳೆಂಟು ಗ್ರಾಮಗಳ ಜನ ಸಹಕಾರ ನೀಡುತ್ತಿದ್ದಾರೆ. ಗೋಗ್ರಾಸ, ಗೋದಾನ ಹಾಗೂ ಗೋಪೂಜೆಗೆ ಅವಕಾಶ ಇದೆ. ಆಸಕ್ತರು ಮೇವು, ತರಕಾರಿ, ಹಿಂಡಿ, ಬಾಳೆಹಣ್ಣು ಕೊಡಬಹುದು ಹಾಗೂ ಆರ್ಥಿಕ ಸಹಕಾರ ನೀಡಲು ಅವಕಾಶವಿದೆ ಎಂದರು.
    ವರ್ಷಕ್ಕೆ 36 ಲಕ್ಷ ರೂ. ವೆಚ್ಚ: ಮೇವು, ಇಂಡಿ ಸೇರಿದಂತೆ ವಾರ್ಷಿಕ 36 ಲಕ್ಷ ರೂ. ವೆಚ್ಚವಾಗುತ್ತಿದೆ. ಕಲ್ಯಾಣದಿಂದ ಮಂದಿರದಲ್ಲಿ ನಡೆಯುವ ಪ್ರತಿ ಮದುವೆಯಲ್ಲೂ ಇದೇ ಉದ್ದೇಶಕ್ಕೆ 5 ಸಾವಿರ ರೂ. ಮೀಸಲಿಡಲಾಗುತ್ತಿದೆ. ದಾನಿಗಳು ನೀಡುವುದು ಸೇರಿದಂತೆ ಒಟ್ಟಾರೆ 22ರಿಂದ 23 ಲಕ್ಷ ರೂ. ಸಂಗ್ರಹವಾಗುತ್ತಿದೆ. ರಾಜ್ಯ ಸರ್ಕಾರ ಕಳೆದ ವರ್ಷ 3 ಲಕ್ಷ ರೂ. ಕೊಟ್ಟಿತ್ತು. ಇದೀಗ ಪ್ರತಿ ಜಿಲ್ಲೆಯಲ್ಲೊಂದು ಗೋ ಶಾಲೆ ತೆರೆದಿದ್ದು ಶಿವಮೊಗ್ಗ ಗೋ ಶಾಲೆಗೆ ನೀಡುವ ಅನುದಾನ ಸುರಭಿ ಗೋಶಾಲೆ ಖಾತೆಗೆ ಬರಲಿದೆ ಎಂದು ನಟರಾಜ್ ಭಾಗವತ್ ಹೇಳಿದರು.
    ಮಹಾಸಭಾ ಕಾರ್ಯದರ್ಶಿ ಬಿ.ಕೆ.ವೆಂಕಟೇಶಮೂರ್ತಿ, ವಿಶೇಷ ಆಹ್ವಾನಿತರಾದ ಸೂರ್ಯನಾರಾಯಣ್, ಶಿವಶಂಕರ್, ಮುಖಂಡರಾದ ರಾಜು ಚಂದ್ರಶೇಖರ್, ಶಂಕರನಾರಾಯಣ, ಸರಳಾ ಹೆಗ್ಡೆ, ಕೇಶವಮೂರ್ತಿ, ಡಾ. ನಾಗಮಣಿ, ಕುಲಕರ್ಣಿ, ಲಕ್ಷ್ಮೀಕಾಂತ್, ಕುಮಾರಶಾಸ್ತ್ರಿ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts