More

    ಟ್ರೇಲರ್ ಮೂಲಕ ‘ಮಂಡಲ’ ಅನಾವರಣ; ಮಾ.10ಕ್ಕೆ ಬಿಡುಗಡೆಯಾಗಲಿದೆ ಸೈಂಟಿಫಿಕ್​ ಥ್ರಿಲ್ಲರ್​

    ಬೆಂಗಳೂರು: ಕನ್ನಡದಲ್ಲಿ ಸೈನ್ಸ್​ ಫಿಕ್ಷನ್​ ಚಿತ್ರಗಳೇಕೆ ಬರುವುದಿಲ್ಲ? ಇಂಥದ್ದೊಂದು ಪ್ರಶ್ನೆ ಹಲವರನ್ನು ಕಾಡಿದೆ. ನವನಿರ್ದೇಶಕ ಅಜಯ್​ ಸರ್ಪೇಷ್ಕರ್​ಗೂ ಇಂಥದ್ದೊಂದು ಪ್ರಶ್ನೆ ಕಾಡಿದೆ. ಬೇರೆಯವರು ಮಾಡದಿದ್ದರೆ ಏನಂತೆ? ತಾವೇ ಏಕೆ ಒಂದು ಸಿನಿಮಾ ಮಾಡಬಾರದು ಎಂದು ಹೊರಟು ಅವರು ‘ಮಂಡಲ’ ಎಂಬ ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಈ ಚಿತ್ರ ಮಾರ್ಚ್​ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ‘ಮಂಡಲ’ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ

    ಇದನ್ನೂ ಓದಿ: VIDEO| ನಡುರಾತ್ರಿ ರಸ್ತೆ ಗುಂಡಿ ಮುಚ್ಚವ ಕೆಲಸಕ್ಕೆ ಕೈ ಹಾಕಿದ ನಟಿ ಕಾರುಣ್ಯ ರಾಮ್

    ‘ಮಂಡಲ’ ಚಿತ್ರದಲ್ಲಿ ಪ್ರತಿಭಾವಂತ ಕಲಾವಿದರ ದಂಡೇ ಇದೆ. ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಕಿರಣ್ ಶ್ರೀನಿವಾಸ್, ಶರ್ಮಿಳಾ ಮಾಂಡ್ರೆ, ಸಂಯುಕ್ತ ಹೊರನಾಡು, ಸುಧಾ ಬೆಳವಾಡಿ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

    ಬರೀ ಅಜಯ್​ ಅಷ್ಟೇ ಅಲ್ಲ, ಕಲಾವಿದರು ಸಹ ಇದೊಂದು ಸೈನ್ಸ್​ ಫಿಕ್ಷನ್​ ಚಿತ್ರ ಎಂಬ ಕಾರಣಕ್ಕೇ ನಟಿಸುವುದಕ್ಕೆ ಒಪ್ಪಿಕೊಂಡರಂತೆ. ಈ ಕುರಿತು ಮಾತನಾಡುವ ಕಿರಣ್​ ಶ್ರೀನಿವಾಸ್​, ‘ನಾನು ಚಿಕ್ಕ ವಯಸ್ಸಿನಿಂದಲೂ ಸೈನ್ಸ್ ಫಿಕ್ಷನ್ ಸಿನಿಮಾಗಳನ್ನು ನೋಡಿ ಬೆಳೆದಿದ್ದೆ, ಕನ್ನಡದಲ್ಲಿ ಇಂತಹ ಸಿನಿಮಾ ಬರುತ್ತಿದೆ ಎಂದಾಗ ಎರಡು ಕೈಯಿಂದ ಅವಕಾಶ ಬಾಚಿಕೊಂಡೆ. ಚಿತ್ರದ ತಾರಾಬಳಗ ಕೂಡ ಸಿನಿಮಾ ಒಪ್ಪಿಕೊಳ್ಳಲು ಮತ್ತೊಂದು ಕಾರಣ. ಎಲ್ಲಾ ರೀತಿಯ ಸಿನಿಮಾ ಮಾಡಿದ್ದೇವೆ ಇದೀಗ ‘ಮಂಡಲ’ ಮೂಲಕ ಸೈನ್ಸ್ ಫಿಕ್ಷನ್ ಸಿನಿಮಾದಲ್ಲಿ ನಟಿಸಿದ್ದೇನೆ’ ಎಂದು ಹೇಳಿದರು.

    ಶರ್ಮಿಳಾ ಮಾಂಡ್ರೆ ಈ ಚಿತ್ರದಲ್ಲಿ ಏರೋಸ್ಪೇಸ್ ಇಂಜಿನಿಯರ್ ಪಾತ್ರ ಮಾಡಿದ್ದಾರಂತೆ. ‘ಮಾಯಾ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ನನ್ನ ಪಾತ್ರ ಬಹಳ ಇಷ್ಟವಾಯಿತು. ಗಂಭೀರವಾದ ಪಾತ್ರ ಅದು. ಬೇರೆ ಚಿತ್ರಗಳಿಗೆ ಹೋಲಿಸಿದರೆ ಇದು ವಿಭಿನ್ನ’ ಎಂದು ಹೇಳಿಕೊಳ್ಳುತ್ತಾರೆ ಶರ್ಮಿಳಾ.

    ಇನ್ನು, ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಯುಕ್ತಾ ಹೊರನಾಡು, ‘ವಿಜ್ಞಾನದ ಬಗ್ಗೆ ಯಾವಾಗಲೂ ಎ್ಲಲರಿಗೂ ಒಂದು ಕುತೂಹಲವಿರುತ್ತದೆ. ಈ ಸಿನಿಮಾ ಕೂಡ ಅಷ್ಟೇ ಕುತೂಹಲ ಮೂಡಿಸುತ್ತದೆ. ಚಿತ್ರದಲ್ಲಿ ಖಡಕ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದೇನೆ’ ಎಂದು ತಿಳಿಸಿದರು.

    ಇದನ್ನೂ ಓದಿ:  ಒಂದು ಕಾರಣಕ್ಕೆ ನಟ ಶಾರುಖ್​ ಖಾನ್​ ಮಹಿಳಾ ಬಾಡಿಗಾರ್ಡ್ಸ್​ ಹೊಂದಿದ್ದಾರಂತೆ!

    ‘ಮಂಡಲ’ ಚಿತ್ರಕ್ಕೆ ಜೆಸ್ಸಿ ಕ್ಲಿಂಟನ್​ ಸಂಗೀತ, ಮನೋಹರ್​ ಜೋಷಿ ಛಾಯಾಗ್ರಹಣವಿದೆ. ಪ್ರಕಾಶ್​ ಬೆಳವಾಡಿ ಈ ಚಿತ್ರದಲ್ಲಿ ನಟಿಸಿರುವುದಷ್ಟೇ ಅಲ್ಲ, ಚಿತ್ರಕಥೆ ರಚನೆಯಲ್ಲೂ ತೊಡಗಿಸಿಕೊಂಡಿದ್ದಾರೆ.

    ತಪ್ಪು ಮಾಡೋ ವಯಸ್ಸು ಇದು … ಸಾರಾ ಅಲಿ ಖಾನ್​ ಹೀಗೆ ಹೇಳಿದ್ದು ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts