More

    ಖಾಸಗಿ ಶಾಲೆಗಳ ಶಿಕ್ಷಕರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಲಿ ; ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಎಚ್.ಶರ್ಫುದ್ದೀನ್ ಪೋತ್ನಾಳ್ ಒತ್ತಾಯ

    ಮಾನ್ವಿ: ಕರೊನಾ ಸೋಂಕಿನಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರ ಖಾಸಗಿ ಶಾಲೆಗಳ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಎಚ್.ಶರ್ಫುದ್ದೀನ್ ಪೋತ್ನಾಳ್ ಹೇಳಿದರು.

    ಪಟ್ಟಣದ ಬಸವ ವೃತ್ತದಲ್ಲಿ ಶನಿವಾರ ಶಿಕ್ಷಕರ ದಿನ ಅಂಗವಾಗಿ ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಡಾ.ಎಸ್.ರಾಧಕೃಷ್ಣನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

    ಶಿಕ್ಷಣ ಪ್ರಗತಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರು ಹಗಲಿರುಳು ದುಡಿಯುತ್ತಿದ್ದಾರೆ. ಸರ್ಕಾರ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು. ಕರೊನಾದಿಂದ ಶಾಲೆಗಳು ಬಂದ್ ಆಗಿವೆ. ಇದರಿಂದ ಪಾಲಕರು ಮಕ್ಕಳ ಶಾಲಾ ಶುಲ್ಕ ನೀಡುತ್ತಿಲ್ಲ. ಸರ್ಕಾರ ವೂ ಆರ್‌ಟಿಇ ಬಾಕಿ ಹಣ ಬಿಡುಗಡೆ ಮಾಡುತ್ತಿಲ್ಲ ಎಂದರು.

    ನಂತರ ಒಕ್ಕೂಟದ ಸದಸ್ಯರು ಕೈಗೆ ಪಟ್ಟಿ ಧರಿಸಿ ತಹಸಿಲ್ ಕಚೇರಿವರೆಗೆ ಮೌನ ಪ್ರತಿಭಟನೆ ಮೂಲಕ ತೆರಳಿ ತಹಸೀಲ್ದಾರ್ ಅಮರೇಶ ಬಿರಾದಾರ್‌ಗೆ ಮನವಿ ಸಲ್ಲಿಸಿದರು. ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಾಜು ತಾಳಿಕೋಟೆ, ಬಿ.ವಿರೆಡ್ಡಿ, ರಾಜಾ ಸುಭಾಶ್ಚಂದ್ರ ನಾಯಕ, ಕೆ.ಈ.ನರಸಿಂಹ, ಶೇಖ್ ಫರೀದ್ ಉಮ್ರಿ, ಎಂ.ಎ.ಎಚ್.ಮುಕೀಂ, ನಾಗೇಶ್ವರರಾವ್, ಪ್ರಕಾಶ, ಡಾ.ರಾಜಶೇಖರ, ಶಶಿಕಲಾ ಪಾಟೀಲ್, ಮನೋಜ್ ಮಿಶ್ರಾ, ಆರೂನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts