More

    ಸುಸಂಸ್ಕೃತನಾದರೆ ಅದೇ ಮನನ, ಮಾಸಿಕ ಸರಣಿ ಕಾರ್ಯಕ್ರಮದಲ್ಲಿ ಪ್ರೊ. ಸೊರಟೂರ ಅಭಿಮತ

    ಹುಬ್ಬಳ್ಳಿ: ಶರಣರು ಅಮೃತ ಸಾಹಿತ್ಯ ಉಣಬಡಿಸಿದರು, ಉದ್ಯೋಗದಾತರು ಅನ್ನ ಸಾಹಿತ್ಯ, ವ್ಯಾಮೋಹಿಗಳು ಅಮಲು ಸಾಹಿತ್ಯ, ಸಾಂಸ್ಕೃತಿಕ ಸೃಜನಶೀಲ ಮನಸುಗಳು ಕಲಾ ಸಾಹಿತ್ಯ ಉಣಬಡಿಸುತ್ತಾರೆ. ಇವುಗಳಲ್ಲಿ ಯಾವುದು ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆಯೋ ಅದು ನಮಗೆ ಮನನವಾಗುತ್ತದೆ ಎಂದು ನಗರದ ಗೋಕುಲ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಫ್.ಬಿ. ಸೊರಟೂರ ಹೇಳಿದರು.

    ಇಲ್ಲಿಯ ವಿದ್ಯಾನಗರ ಜೀವಿ ಕಲಾಬಳಗದ ಸಂಸ್ಕೃತಿ ಅಟ್ಟದಲ್ಲಿ ಏರ್ಪಡಿಸಿದ್ದ ಮನನ ಎಂಬ ಮಾಸಿಕ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ದೇಹದೊಳಗೆ ಮನಸ್ಸು ಬಹಳ ಮುಖ್ಯ, ಅದರಿಂದಲೇ ನಾವುಗಳು ಒಳ್ಳೆಯದನ್ನು ಹಿಡಿಯುವುದು ಕೆಟ್ಟದನ್ನು ಬಿಡುವ ಕಾರ್ಯಗಳತ್ತ ಮುನ್ನುಗ್ಗುತ್ತೇವೆ. ಈ ಕ್ರಿಯೆ ಶಿಕ್ಷಣಕ್ಕಿಂತ ಸಂಸ್ಕೃತಿಯ ಹಿನ್ನಲೆಯಲ್ಲಿ ದಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಸಂಸ್ಕೃತಿಯೊಳಗೆ ತನ್ನ ತಾನು ಅರಿತುಕೊಂಡು ಸುಸಂಸ್ಕೃತ ವ್ಯಕ್ತಿಯಾದರೆ ಅದೇ ಮನನ ಎಂದರು.

    ಅತಿಥಿಗಳಾಗಿದ್ದ ಉದ್ಯಮಿ ಆರ್.ಎಂ. ಹಿರೇಮಠ ಅವರು, ಮನನ ಎನ್ನುವುದು ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ಉತ್ತಮನಾಗಿ ಬೆಳೆಯಬೇಕಾದರೆ ಒಳ್ಳೆಯ ಅಂಶಗಳನ್ನು ತನ್ನಲ್ಲಿ ಮನನ ಮಾಡಿಕೊಳ್ಳಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಜೀವಿ ಕಲಾಬಳಗದ ಅಧ್ಯಕ್ಷ ಗದಿಗಯ್ಯ ಹಿರೇಮಠ, ಸಂಬಾಜಿ ಕಲಾಲ ಅವರು ಮಾತನಾಡಿದರು.

    ಗಾಯಕ ಶಿವು ಹಿರೇಮಠ ಪ್ರಾರ್ಥನೆ ಹಾಡಿದರು. ಡಾ. ಎಚ್.ಎಚ್. ನದಾಫ ಸ್ವಾಗತಿಸಿದರು. ಕಿರಣ ಅರಮನೆ ಪ್ರಾಸ್ತಾವಿಕ ಮಾತನಾಡಿದರು. ಡಾ. ರಾಮು ಮೂಲಗಿ ಪರಿಚಯಿಸಿದರು. ನವೀನ ಶೆಟ್ಟರ ಕಾರ್ಯಕ್ರಮ ನಿರೂಪಿಸಿದರು. ಸಿ.ಎಸ್. ಪಾಟೀಲ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts