More

    ಕ್ರಿಕೆಟ್ ಪಂದ್ಯದ ವೇಳೆ ಆಸೀಸ್ ಯುವತಿಯ ಪ್ರೀತಿ ಗೆದ್ದವ ಬೆಂಗಳೂರಿಗ!

    ಸಿಡ್ನಿ: ಭಾರತ-ಆಸೀಸ್ ನಡುವಿನ 2ನೇ ಏಕದಿನ ಪಂದ್ಯದ ವೇಳೆ ಪ್ರೇಮ ಪ್ರಸಂಗವೊಂದು ಎಲ್ಲರ ಗಮನಸೆಳೆದಿತ್ತು. ಭಾರತ ತಂಡದ ಸೋಲಿನ ನಡುವೆ ಈ ಲವ್‌ಸ್ಟೋರಿ ಎಲ್ಲರ ಹೃದಯ ಗೆದ್ದಿತ್ತು. ಪ್ರೇಕ್ಷಕರ ಗ್ಯಾಲರಿಯಲ್ಲಿ ಆಸೀಸ್ ಯುವತಿಗೆ ಭಾರತೀಯನೊಬ್ಬ ಪ್ರೇಮ ನಿವೇದನೆ ಸಲ್ಲಿಸಿ ಆಕೆಯನ್ನು ಒಲಿಸಿಕೊಂಡ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ದೀಪೆನ್ ಮಂಡಲಿಯಾ ಈ ಯುವಕ ಬೆಂಗಳೂರಿನವನು ಎಂಬುದು ವಿಶೇಷ.

    ದೀಪೆನ್ ಬೆಂಗಳೂರಿನ ಸೇಂಟ್ ಜೋಸೆಫ್ಸ್​​ ವಾಣಿಜ್ಯ ಕಾಲೇಜಿನಲ್ಲಿ ಮ್ಯಾನೇಜ್‌ಮೆಂಟ್ ಪದವಿ ಪಡೆದಿದ್ದು, ಬಳಿಕ ಸಿಡ್ನಿ ವಿಶ್ವವಿದ್ಯಾಲಯದಲ್ಲಿ ವೈಮಾನಿಕ ಮತ್ತು ಸಮುದ್ರ ಸಾರಿಗೆ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿದ್ದರು. ಸದ್ಯ ಮೆಲ್ಬೋರ್ನ್‌ನಲ್ಲಿ ಜೆಟ್‌ಸ್ಟಾರ್ ಆಸ್ಟ್ರೇಲಿಯಾ ಕಂಪನಿಯ ಪ್ರಾಜೆಕ್ಟ್ ಮತ್ತು ರಿಪೋಟಿಂಗ್ ವಿಶ್ಲೇಷಕರಾಗಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಪರಿಚಿತಳಾಗಿದ್ದ ಆಸೀಸ್ ಯುವತಿ ರೋಸ್ ವಿಂಬುಷ್‌ಗೆ ದೀಪೆನ್ ಸುಮಾರು 25 ಸಾವಿರ ಪ್ರೇಕ್ಷಕರು ಮತ್ತು ಉಭಯ ತಂಡಗಳ ಆಟಗಾರರ ಸಮ್ಮುಖದಲ್ಲಿ ಪ್ರೇಮ ನಿವೇದನೆ ಮಾಡಿದ್ದರು.

    ಕಳೆದ ಕೆಲಕಾಲದಿಂದ ಈ ಬಗ್ಗೆ ಚಿಂತಿಸುತ್ತಿದ್ದ ದೀಪೆನ್, ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದರಂತೆ. ಇಬ್ಬರಿಗೂ ಕ್ರಿಕೆಟ್ ಇಷ್ಟವಾಗಿದ್ದರಿಂದ ಪಂದ್ಯದ ಸಮಯವೇ ಸರಿಯಾದುದು ಎಂದು ದೀಪೆನ್ ಭಾವಿಸಿದ್ದರಂತೆ. ‘ನಾವು ಮೊದಲ ಬಾರಿ ಭೇಟಿ ಆದಾಗಿನಿಂದಲೂ ಕ್ರಿಕೆಟ್ ಬಗ್ಗೆ ಮಾತನಾಡುತ್ತ ಬಂದಿದ್ದೇವೆ. ಹೀಗಾಗಿ ಪ್ರೇಮ ನಿವೇದನೆಗೆ ಇದುವೇ ಸರಿಯಾದ ವೇದಿಕೆ ಎಂದು ಭಾವಿಸಿದ್ದೆ ಎಂದು ದೀಪೆನ್ ಹೇಳಿದ್ದಾರೆ.

    ರೋಸ್ ಮುಂದೆಯೂ ಆಸೀಸ್ ತಂಡದ ಅಭಿಮಾನಿಯಾಗಿ ಮುಂದುವರಿದರೂ, ನಮ್ಮ ಮಕ್ಕಳಿಗೆ ಮಾತ್ರ ಭಾರತ ತಂಡವನ್ನೇ ಬೆಂಬಲಿಸುವಂತೆ ಒಪ್ಪಿಸುವೆ ಎಂದು ದೀಪೆನ್ ಹೇಳಿದ್ದಾರೆ. ಭಾರತ ಕಪ್ ಗೆಲ್ಲದಿದ್ದರೇನಂತೆ? ಆಸ್ಟ್ರೇಲಿಯಾದಿಂದ ಭಾರತಕ್ಕೆ ಸೊಸೆಯೊಬ್ಬಳು ಬರುತ್ತಿದ್ದಾಳೆ ಎಂದು ಕ್ರಿಕೆಟ್ ಪ್ರೇಮಿಗಳೂ ಸಾಮಾಜಿಕ ಜಾಲತಾಣದಲ್ಲಿ ಈ ಲವ್ ಸ್ಟೋರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    VIDEO| ಪಂದ್ಯದ ವೇಳೆ ಆಸೀಸ್ ಯುವತಿಗೆ ಪ್ರೇಮ ನಿವೇದನೆ ಮಾಡಿದ ಭಾರತೀಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts