More

    ಕಮಿಷನ್ ಕೊಡಿಸುವುದಾಗಿ ಹೇಳಿ 65 ಸಾವಿರ ರೂ. ವಂಚನೆ

    ಹಾಸನ: ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಕಮಿಷನ್ ಕೊಡಿಸುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿ 65 ಸಾವಿರ ಹಣ ವರ್ಗಾಯಿಸಿಕೊಂಡು ವಂಚನೆ ಎಸಗಿದ್ದಾನೆ.
    ಆ.26ರಂದು ಅಪರಿಚಿತ ವ್ಯಕ್ತಿಯೊಬ್ಬ ಇನ್ಸ್‌ಟಾಗ್ರಾಮ್‌ನಲ್ಲಿ ಸಂತ್ರಸ್ತ ವ್ಯಕ್ತಿಗೆ ಮೆಸೆಜ್ ಮಾಡಿದ್ದಾನೆ. 200 ರೂ. ಹೂಡಿದರೆ ಶೇ.20 ಕಮಿಷನ್ ಸೇರಿಸಿ ನಿಮ್ಮ ಹೂಡಿಕೆ ಹಣವನ್ನು ಖಾತೆಗೆ ಜಮೆ ಮಾಡುವುದಾಗಿ ತಿಳಿಸಿದ್ದಾನೆ. ಕಮಿಷನ್ ಆಸೆಯಿಂದ ಸಂತ್ರಸ್ತ ವ್ಯಕ್ತಿ ಲಿಂಕ್ ಮೇಲೆೆ ಕ್ಲಿಕ್ ಮಾಡಿ, ಅಪ್ಲಿಕೇಷನ್ ಡೌನ್‌ಲೌಡ್ ಮಾಡಿಕೊಂಡು ವಂಚಕ ಕೇಳಿದ ಮಾಹಿತಿಯನ್ನು ತುಂಬಿದ್ದಾರೆ.

    ಹಣ ವರ್ಗಾವಣೆ

    ಬಳಿಕ ವಂಚಕ ನೀಡಿದ ಯು.ಪಿ.ಐ. ಐಡಿಗಳಿಗೆ ಕರ್ಣಾಟಕ ಬ್ಯಾಂಕ್ ಖಾತೆಯಿಂದ ಆ.26ರಿಂದ ಸೆ. 02ರವರೆಗೆ ಒಟ್ಟು 65,000 ಹಣವನ್ನು ಗೂಗಲ್‌ಪೇ ಮೂಲಕ ವರ್ಗಾವಣೆ ಮಾಡಲಾಗಿದೆ. ಆನಂತರ ಅಪರಿಚಿತ ವ್ಯಕ್ತಿಯು ಕಮಿಷನ್ ಹಣ ಹಾಗು ಹೂಡಿಕೆ ಮಾಡಿದ ಹಣವನ್ನೂ ವಾಪಸ್ ಕೊಡದೇ ಇದ್ದಾಗ ತಾವು ಮೋಸ ಹೋಗಿರುವುದು ತಿಳಿದುಬಂದಿದೆ. ಮೋಸ ಮಾಡಿದ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಬೇಕೆಂದು ಹಣ ಕಳೆದುಕೊಂಡ ವ್ಯಕ್ತಿ ಸೋಮವಾರ ಹಾಸನ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts