More

    ರಾಷ್ಟ್ರೀಯ ತಂತ್ರಜ್ಞಾನ ದಿನದ ಅಂಗವಾಗಿ ಸಿಎಂಆರ್ ಐಟಿಯಲ್ಲಿ ಟೆಕ್ಕೋಮೀಟ್ ಫಾರ್ ಸೊಸೈಟಿ

    ಬೆಂಗಳೂರು:
    ರಾಷ್ಟ್ರೀಯ ತಂತ್ರಜ್ಞಾನ ದಿನದ ಅಂಗವಾಗಿ ನಗರದ ಪ್ರತಿಷ್ಠಿತ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಟೆಕ್ನಿಮೀಟ್ ಫಾರ್ ಸೊಸೈಟಿ -2024 ತಂತ್ರಜ್ಞಾನ ಆವಿಷ್ಕಾರ ಮತ್ತು ಪ್ರಾತ್ಯಕ್ಷಿಕೆ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
    ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಸಂಜಯ್ ಜೈನ್ ಹಾಗೂ ಉಪಪ್ರಾಂಶುಪಾಲರಾದ ಡಾ.ಬಿ.ನರಸಿಂಹ ಮೂರ್ತಿ ಅವರು ಟೆಕ್ನಮೀಟ್ ಫಾರ್ ಸೊಸೈಟಿ-2024 ತಂತ್ರಜ್ಞಾನ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿದರು.
    ಮಾಜಿ ರಾಜ್ಯಸಭಾ ಸದಸ್ಯ ಡಾ.ಕೆ.ಸಿ ರಾಮಮೂರ್ತಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ದೇಶದ ಪ್ರಗತಿ ಹೆಚ್ಚು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅವಲಂಬಿಸಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ತಂತ್ರಜ್ಞಾನ ಆವಿಷ್ಕಾರಗಳು ಭವಿಷ್ಯದ ವಿಜ್ಞಾನಿಗಳನ್ನಾಗಿ ರೂಪಿಸುವ ಧಿಕ್ಕೂಚಿಯಾಗಿವೆ. ಇಂತಹ ಹೊಸ ಪ್ರಯೋಗಗಳಿಗೆ ಬೇಕಾಗುವ ಸುಸಜ್ಜಿತ ಕಲಿಕಾ ಸೌಲಭ್ಯಗಳನ್ನು ಸಿಎಂಆರ್‌ಐಟಿ ಕಲ್ಪಿಸಿಕೊಟ್ಟಿದ್ದು, ವಿದ್ಯಾರ್ಥಿಗಳು ನಾವಿನ್ಯತೆಯ ತಂತ್ರಜ್ಞಾನ ಪ್ರಯೋಗಗಳನ್ನು ಮಾಡುವ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಹೆಚ್ಚು ಸಾಧನೆ ಮಾಡಬೇಕು ಎಂದರು.
    ನುರಿತ ಪ್ರಾಧ್ಯಾಪಕರುಗಳು, ಸಂಶೋಧಕರ ನೆರವಿನೊಂದಿಗೆ ವಿದ್ಯಾರ್ಥಿಗಳು ಸಂಶೋಧಿಸಿ ಆವಿಷ್ಕರಿಸಿದ್ದ ಯಂತ್ರಾಂಶ ಮತ್ತು ತಂತ್ರಾಂಶಗಳ ತಂತ್ರಜ್ಞಾನ ಆವಿಷ್ಕಾರ ಮತ್ತು ಪ್ರಾತ್ಯಕ್ಷಿಕೆ ಎಲ್ಲರನ್ನು ಆಕರ್ಷಿಸಿತು.
    ಪ್ರಮುಖಕವಾಗಿ ಸೌರಶಕ್ತಿ ಚಾಲಿತ ರೋಬೋಟ್ ಸಾಧನ, ಬ್ಲೂಟೂತ್ ನಿಯಂತ್ರಿತ ರೋಬೋಟ್, ಸುಧಾರಿತ ನೀರಿನ ಶುದ್ಧಿಕರಣ ಸಾಧನ, ರೇಷ್ಮೆ ಉಪಕರಣ ಸಾಧನ, ಭ್ರೂಣದ ಚಲನೆಯನ್ನು ಪತ್ತೆಹಚ್ಚುವ ತಂತ್ರಾಂಶ ಸಾಧನ. ಮೊಬೈಲ್ ಆಟಗಳಲ್ಲಿ ದೈಹಿಕ ಚಟುವಟಿಕೆಗಳನ್ನು ಸಕ್ರಿಯಗೊಳಿಸುವ ತಂತ್ರಾಂಶ, ಧ್ವನಿ ಆಪರೇಟರ್ ಸ್ಮಾರ್ಟ ಕನ್ನಡಿ, ಧೂಳಿನ ಕಣಗಳನ್ನು ಪರಿಣಾಮಕಾರಿಯಾಗಿ ಗಾಳಿಯಲ್ಲಿ ಶುದ್ಧಿಕರಿಸುವ ಸಾಧನ, ವಾಹನ ಚಾಲನ ಸಮಯದಲ್ಲಿ ಆರೆನಿದ್ರಾವಸ್ಥೆ ಪತ್ತೆಕಾರಕ ಸಾಧನ ಹೀಗೆ ಹಲವಾರು ಆವಿಷ್ಕಾರ ತಂತ್ರಜ್ಞಾನ ಸಾಧನಗಳು ವಿದ್ಯಾರ್ಥಿಗಳಲ್ಲಿನ ನಾವಿನ್ಯತೆ ಹಾಗೂ ಸಾಮರ್ಥ್ಯವನ್ನು ಸಾಕ್ಷೀಕರಿಸಿದವು.
    ಎಐಎಂಎಲ್ ವಿದ್ಯಾರ್ಥಿಗಳಾದ ಕೀರ್ತಿ ಮತ್ತು ತಂಡ ಆವಿಷ್ಕರಿಸಿದ್ದ ಅರೆನಿದ್ರಾವಸ್ಥೆ ಪತ್ತೆಕಾರಕ ಸಾಧನ ಅತ್ಯಂತ ಉಪಯುಕ್ತ ಸಾಧನವಾಗಿದ್ದು ಮೆಚ್ಚುಗೆಗೆ ಪಾತ್ರವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts