More

    ಹೇರ್​ ಕಲರಿಂಗ್​ಗೆ ಉತ್ತಮ ಸ್ಪಂದನೆ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಪ್ರತಿಷ್ಠಿತ ಗಾನಿರ್ಯರ್​ ಹೇರ್​ ಕಲರಿಂಗ್​ ಕಂಪನಿ ನಗರದಲ್ಲಿ ಆರಂಭಿಸಿರುವ ಉಚಿತ ಹೇರ್​ ಕಲರಿಂಗ್​ ಅಭಿಯಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
    ನಗರದಲ್ಲಿ ಮೇ 6ರಿಂದ ವಿವಿಧ ಬಡಾವಣೆಗಳಲ್ಲಿ ಈಗಾಗಲೇ ಅಭಿಯಾನ ನಡೆದಿದ್ದು, ನಿತ್ಯವೂ ನೂರಾರು ಜನರು ಆಗಮಿಸಿ ಕಲರಿಂಗ್​ ಮಾಡಿಸಿಕೊಂಡಿದ್ದಾರೆ. ನಗರದ ಚರಂತಿಮಠ ಗಾರ್ಡನ್​, ಮಾಳಮಡ್ಡಿ ಹಾಗೂ ಮದಿಹಾಳದಲ್ಲಿ ನಡೆದ ಅಭಿಯಾನಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಕಂಪನಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
    ಸದ್ಯ ಮದಿಹಾಳದಲ್ಲಿ ನಡೆಯುತ್ತಿರುವ ಅಭಿಯಾನ ಸೋಮವಾರ ಸಂಪನ್ನಗೊಳ್ಳಲಿದ್ದು, ಮಂಗಳವಾರದಿಂದ ಕೆಲಗೇರಿ ರಸ್ತೆಯ ಸಿಲ್ವರ್​ ಆರ್ಚ್​ಡ್​ನಲ್ಲಿ ಆರಂಭವಾಗಲಿದೆ. ಅಭಿಯಾನದಲ್ಲಿ ಕಂಪನಿಯ ಪರಿಣಿತರು ಪುರುಷರು ಹಾಗೂ ಮಹಿಳೆಯರಿಗೆ ಉಚಿತ ಹೇರ್​ ಕಲರಿಂಗ್​ ಮಾಡಲಿದ್ದಾರೆ. ಅಭಿಯಾನವು ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ನಡೆಯಲಿದೆ. ಅಭಿಯಾನದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಸುಪಯೋಗ ಪಡೆಯಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts