More

    ಕುಡಿಯಲು ಹಣ ಕೊಡದ ಮಹಿಳೆಯರಿಬ್ಬರನ್ನು ಕೊಲ್ಲಲು ಯತ್ನ; ಪ್ರಕರಣ ಸಂಬಂಧ ಆರೋಪ ಸಾಬೀತು, ಅಪರಾಧಿಗೆ ಶಿಕ್ಷೆ

    ವಿಜಯನಗರ(ಹೊಸಪೇಟೆ): ಕುಡಿಯಲು ಹಣ ಕೊಡಲಿಲ್ಲ ಎಂಬ ಸಿಟ್ಟಿನಿಂದ ಮಹಿಳೆಯರಿಬ್ಬರ ಮನೆಗೆ ಬೆಂಕಿ ಹಚ್ಚಿದ್ದ ವ್ಯಕ್ತಿಯ ಮೇಲಿನ ಆರೋಪ ಸಾಬೀತಾಗಿದ್ದು, ಇದೀಗ ದಂಡವನ್ನು ಕಟ್ಟಿ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಗಿ ಬಂದಿದೆ. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಆರೋಪಿಗೆ 16,500 ರೂ. ದಂಡ ಹಾಗೂ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

    ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನಂದ್ಯಾಲ ಗ್ರಾಮದ ನಾಗರಾಜಪ್ಪ ಅಪರಾಧಿ. ಈತ ಮದ್ಯಪಾನ ಮಾಡುವ ಸಲುವಾಗಿ ಯರಬಾಳು ಗ್ರಾಮದ ಮಹಿಳೆಯರಾದ ಶೀಲಮ್ಮ ಹಾಗೂ ಶಾರದಮ್ಮ ಅವರ ಬಳಿ ಆಗಾಗ ಹಣ ಕೇಳುತ್ತಿದ್ದ. ಸಾಕಷ್ಟು ಸಲ ಹೀಗೆ ಹಣ ಕೊಟ್ಟಿರುವ ಇವರು ಒಂದು ದಿನ ಹಣ ಕೊಡಲು ನಿರಾಕರಿಸಿದ್ದಾರೆ.

    2019ರ ಜೂ. 20ರಂದು ಶಾರದಮ್ಮ ಬಳಿ ಕುಡಿಯಲು ಹಣ ಕೇಳಿದ್ದ ನಾಗರಾಜಪ್ಪ, ಆಕೆ ಹಣ ಕೊಡಲು ನಿರಾಕರಿಸಿದ್ದಕ್ಕೆ ಕಪಾಳಕ್ಕೆ ಹೊಡೆದು ಗಲಾಟೆ ಮಾಡಿದ್ದ. ಶಾರದಮ್ಮನ ರಕ್ಷಣೆಗೆ ಧಾವಿಸಿದ್ದ ಶೀಲಮ್ಮನಿಗೂ ಅವಾಚ್ಯವಾಗಿ ಬೈದು ಅಲ್ಲಿಂದ ತೆರಳಿದ್ದ. ಆದರೆ ಮಾರನೇ ದಿನ ಬೆಳಗಿನ ಜಾವ ಶಾರದಮ್ಮ-ಶೀಲಮ್ಮ ಮಲಗಿದ್ದಾಗ ಅವರ ಮನೆಯ ತೆಂಗಿನ ನೆರಿಕೆಗೆ ಬೆಂಕಿ ಹಚ್ಚಿದ್ದ. ಆಗ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು, ಗೋಡೆ ಹಾನಿಗೊಂಡು ಹಂಚುಗಳು ಬಿದ್ದು, ಸಾಕಷ್ಟು ವಸ್ತುಗಳು ಸುಟ್ಟು ಹೋಗಿದ್ದವು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಶಾರದಮ್ಮ, ಶೀಲಮ್ಮ ಪೊಲೀಸರಿಗೆ ದೂರು ನೀಡಿದ್ದರು.

    ಇದನ್ನೂ ಓದಿ: ಸೆಕ್ಸ್​ ಮಾಡುವಾಗ ಉಸಿರುಗಟ್ಟಿ ಸತ್ತೇ ಹೋದಳು… ಬ್ಯಾಚಲರ್​ ಮನೆಯಲ್ಲಿ ವಿವಾಹಿತೆ ಸಾವು!

    ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯು ಮನೆಗೆ ಬೆಂಕಿ ಹಚ್ಚಿ ಮಹಿಳೆಯರಿಬ್ಬರನ್ನು ಕೊಲೆ ಮಾಡಲು ಯತ್ನಿಸಿದ್ದಾಗ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಇಂದು ಹೊಸಪೇಟೆಯ ಮೂರನೇ ಅಧಿಕ ಜಿಲ್ಲಾ ಮತ್ತು ಸೆಷನ್​ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆದಿದೆ. ವಾದ-ವಿವಾದವನ್ನು ಆಲಿಸಿದ ನ್ಯಾಯಾಧೀಶರಾದ ಕೆ.ಎಂ.ರಾಜಶೇಖರ್, ಆರೋಪಿಯು ಮನೆಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದು ರುಜುವಾತಾಗಿದೆ ಎಂದು ತೀರ್ಪು ನೀಡಿದ್ದು, ಮೂರು ವರ್ಷ ಜೈಲು ಶಿಕ್ಷೆ ಹಾಗೂ 16,500 ರೂ. ದಂಡ ಕಟ್ಟುವಂತೆ ಆದೇಶಿಸಿದ್ದಾರೆ. ಸಂತ್ರಸ್ತರ ಪರವಾಗಿ ಸರ್ಕಾರಿ ಅಭಿಯೋಜಕ ಟಿ. ಅಂಬಣ್ಣ ವಾದ ಮಂಡಿಸಿದ್ದರು.

    ಬೇರೆ ಬೇರೆ ಮದ್ವೆಯಾಗಿದ್ರೂ ಇಬ್ಬರ ನಡುವೆ ಪ್ರೀತಿ: ಪತ್ನಿ ಬಿಟ್ಟು ಬಂದವನಿಂದಲೇ ನಡೆಯಿತು ದುರಂತ!

    ನನ್ನಲ್ಲೂ ಆಸೆಗಳಿವೆ ಆದ್ರೆ ನನ್ನ ಗಂಡನಿಗೆ ಬರೀ ಅವನದ್ದೆ ಚಿಂತೆ: ಡೆತ್​ನೋಟ್​ ಬರೆದಿಟ್ಟು ಮಹಿಳೆ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts