More

    VIDEO| “ಮ್ಯಾನ್​ ವರ್ಸಸ್​ ವೈಲ್ಡ್​” ಕಾರ್ಯಕ್ರಮದ ಪ್ರೋಮೋ ಬಿಡುಗಡೆ; ತಲೈವಾ ರಜನಿಕಾಂತ್​ ಕಾಣಿಸಿಕೊಂಡ ವಿಡಿಯೋ

    ನವದೆಹಲಿ: ವನ್ಯ ಜೀವಿ ಸಾಹಸಿ ನಿರ್ದೇಶಕ ಬೇರ್​ ಗ್ರೀಲ್ಸ್​ನ “ಮ್ಯಾನ್​ ವರ್ಸಸ್​ ವೈಲ್ಡ್​” ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

    ಪ್ರೋಮೋವನ್ನು ಇಂದು ಬೆಳಗ್ಗೆ ಡಿಸ್ಕವರಿ ಚಾನಲ್​ ಟ್ವೀಟ್​ ಮಾಡಿದ್ದು, ಇಲ್ಲಿಯವರೆಗೆ 6.1 ಸಾವಿರ ಮಂದಿ ವೀಕ್ಷಿಸಿದ್ದು 3 ಸಾವಿರಕ್ಕೂ ಹೆಚ್ಚ ಜನ ಇದನ್ನು ರೀಟ್ವೀಟ್​ ಮಾಡಿದ್ದಾರೆ. ಕಾಯಕ್ರಮ ಮಾರ್ಚ್​ 23 ರಂದು ರಾತ್ರಿ 8ಗಂಟೆಗೆ ಡಿಸ್ಕವರಿ ಚಾನಲ್​ನಲ್ಲಿ ಪ್ರಸಾರವಾಗಲಿದೆ.

    ಇನ್ ಟು ದಿ ವೈಲ್ಡ್ ವಿದ್ ಬೇರ್ ಗ್ರಿಲ್ಸ್ ಸರಣಿಯ ಮೊದಲ ಕಾರ್ಯಕ್ರಮ ಇದಾಗಿದ್ದು, 40 ಸೆಕೆಂಡ್​ಗಳ ಪ್ರೋಮೋ ಒಂದನ್ನು ಬಿಡುಗಡೆ ಮಾಡಿದೆ. “ನೀವು ತಯಾರಾಗಿ, ಇದು ನಿಮ್ಮ ಮನಸ್ಸನ್ನು ಉಲ್ಲಾಸಿತಗೊಳಿಸಲಿದೆ” ಎಂದು ಬೇರ್​ ಗ್ರೀಲ್ಸ್ ಪ್ರೋಮೊವಿನಲ್ಲಿ ಹೇಳಿದ್ದಾರೆ.

    ಅಲ್ಲದೆ ಸೂಪರ್​ಸ್ಟಾರ್​ ರಜನೀಕಾಂತ್​ ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳುವ ಪ್ರೋಮೋದಲ್ಲಿ ರಜನಿಕಾಂತ್​ ಅವರು ಬೈಕ್​ ಮೇಲೆ ತಮ್ಮದೇ ಸ್ಟೈಲ್​ನಲ್ಲಿ ಆಗಮಿಸುತ್ತಾರೆ.

    ಬಂಡೀಪುರ ಹಾಗೂ ಸುತ್ತಮುತ್ತಲ ಅರಣ್ಯದಲ್ಲಿ ಚಿತ್ರೀಕರಣಗೊಂಡ “ಮ್ಯಾನ್​ ವರ್ಸಸ್​ ವೈಲ್ಡ್​” ಕಾರ್ಯಕ್ರಮದಲ್ಲಿ ತಲೈವಾ ರಜನಿಕಾಂತ್​ ಅಲ್ಲದೆ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಕೂಡ ನಟಿಸಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts