More

    VIDEO| ರಜಿನಿಕಾಂತ್​, ಅಕ್ಷಯ್​ ಕೈಜೋಡಿಸಿರೋ​ ಬಂಡೀಪುರ ವನ್ಯಜೀವಿ ಸಾಕ್ಷ್ಯಚಿತ್ರದ ಶೂಟಿಂಗ್​ಗೆ ವಿರೋಧ

    ಚಾಮರಾಜನಗರ: ಬಂಡೀಪುರದಲ್ಲಿ ನಡೆಯುತ್ತಿರುವ ವನ್ಯಜೀವಿ ಸಾಕ್ಷ್ಯಚಿತ್ರದ ಚಿತ್ರೀಕರಣಕ್ಕೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಬೆನಿಜಾಯ್ ಏಷ್ಯಾ ಗ್ರೂಪ್​ನ ಸೆವೆನ್ ಟಾರಸ್ ಸ್ಟುಡಿಯೋ ಚಮನಹಳ್ಳಿಯಲ್ಲಿ ಈ ಸಾಕ್ಷ್ಯ ತಯಾರಿಸುತ್ತಿದೆ. ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಚಿತ್ರೀಕರಣಕ್ಕೆ ಅರಣ್ಯ ಇಲಾಖೆ ಜತೆ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿದೆ. ಚಿತ್ರೀಕರಣಕ್ಕೆ ಮ್ಯಾನ್​ ವರ್ಸಸ್​ ವೈಲ್ಡ್​ ಕಾರ್ಯಕ್ರಮ ನಡೆಸಿಕೊಡುವ ವನ್ಯ ಜೀವಿ ಸಾಹಸಿ ನಿರ್ದೇಶಕ ಬೇರ್​ ಗ್ರೀಲ್ಸ್​ ಆಗಮಿಸಿದ್ದಾರೆ. ಇವರೊಂದಿಗೆ ಸೂಪರ್ ಸ್ಡಾರ್ ರಜನಿಕಾಂತ್ ಮತ್ತು ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಸಹ ಕೈಜೋಡಿಸಿದ್ದು, ಸಾಕ್ಷ್ಯಚಿತ್ರದಲ್ಲಿ ನಟಿಸುತ್ತಿದ್ದಾರೆ.

    ಆದರೆ, ಇದಕ್ಕೆ ವನ್ಯಜೀವಿ ತಜ್ಞ ಜೋಸೆಫ್ ಹೂವರ್ ವಿರೋಧ ವ್ಯಕ್ತಪಡಿಸಿದ್ದು, ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಸಿಗೆ ಆರಂಭವಾಗಿದೆ. ಕಾಡಿನಲ್ಲಿ ಸಿಬ್ಬಂದಿಗಳು ಬೆಂಕಿ ಬೀಳದ ಹಾಗೇ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಇಂತಹ ಸಂಧರ್ಭದಲ್ಲಿ ಬಂಡೀಪುರ ಅರಣ್ಯದಲ್ಲಿ ಚಿತ್ರೀಕರಣ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

    ಕಾಡಿನ ಎಲ್ಲ ಸಿಬ್ಬಂದಿಗಳನ್ನು ಹೊರಗಿಟ್ಟು ಚಿತ್ರೀಕರಣ ಮಾಡುತ್ತಿದ್ದಾರೆ. ಕಳೆದ ವರ್ಷ ಇದೇ ತಿಂಗಳಲ್ಲಿ ಬಂಡೀಪುರಕ್ಕೆ ಬೆಂಕಿ‌ಬಿದ್ದಿತ್ತು. ಸಾಕಷ್ಟು ಅರಣ್ಯ ಪ್ರದೇಶ ನಾಶವಾಗಿತ್ತು. ಸುಮಾರು ನಾಲ್ಕುವರೆ ಸಾವಿರ ಹೆಕ್ಟೇರ್ ಅರಣ್ಯ ನಾಶವಾಗಿದೆ ಎಂದು ವನ್ಯಜೀವಿ ತಜ್ಞ ಜೋಸೆಫ್ ಹೂವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts