More

    VIDEO: ಕುಕ್ಕರ್​ನಿಂದ ಹೊರಬರುವ ಹಬೆಯೇ ಸಾಕು ತರಕಾರಿ ಸ್ವಚ್ಛಗೊಳಿಸಲು; ನೀವು ಟ್ರೈ ಮಾಡೋ ಮುನ್ನ ಯೋಚಿಸಿ

    ಕರೊನಾ ವೈರಸ್​ ದಾಂಗುಡಿ ಇಟ್ಟ ಮೇಲೆ ತರಕಾರಿ..ಹಣ್ಣುಗಳನ್ನೆಲ್ಲ ತೊಳೆದಷ್ಟೂ ಸಾಲುತ್ತಿಲ್ಲ. ಅದರ ಶುಚಿತ್ವ ಹೇಗೆ ಮಾಡುವುದು ಎಂಬುದೇ ದೊಡ್ಡ ತಲೆನೋವಾಗಿದೆ.

    ಮಾರ್ಕೆಟ್​ನಿಂದ ತಂದ ಹಣ್ಣು, ತರಕಾರಿಗಳನ್ನು ಸ್ವಲ್ಪ ಹೊತ್ತು ಉಪ್ಪು, ಅರಿಶಿಣ ಹಾಕಿದ ನೀರಿನಲ್ಲಿ ನೆನೆಸಿಟ್ಟು, ನಂತರ ಅದನ್ನು ತೊಳೆದು, ಒರೆಸಿ ಇಡುತ್ತಿದ್ದಾರೆ. ಆದರೆ ಐಎಎಸ್​ ಅಧಿಕಾರಿ ಸುಪ್ರಿಯಾ ಸಾಹು , ವ್ಯಕ್ತಿಯೋರ್ವ ತರಕಾರಿ ಶುದ್ಧೀಕರಣ ಮಾಡುತ್ತಿರುವ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದು, ನೆಟ್ಟಿಗರ ಗಮನ ಸೆಳೆದಿದೆ.

    ಈ ವ್ಯಕ್ತಿ ಗ್ಯಾಸ್​ ಮೇಲೆ ಪ್ರೆಶರ್​ ಕುಕ್ಕರ್​ ಇಟ್ಟಿದ್ದಾನೆ. ಆದರೆ ಅದರ ಮುಚ್ಚಳದ ಮೇಲೆ ವಿಶಲ್​ ಅಳವಡಿಸುವ ಬದಲು ಒಂದು ಪೈಪ್​ (ಗ್ಯಾಸ್​ ಪೈಪ್​ನಂಥದ್ದು) ಹಾಕಿದ್ದಾರೆ. ಆ ಪೈಪ್​ನ ಇನ್ನೊಂದು ತುದಿಯಲ್ಲಿ ಫುಲ್​ ಹಬೆ ಹೋಗುತ್ತಿರುತ್ತದೆ. ಹಾಗೇ, ವಿವಿಧ ತರಕಾರಿಗಳನ್ನು ಅಲ್ಲಿಯೇ ಕಟ್ಟೆಯ ಮೇಲಿಟ್ಟುಕೊಂಡು, ಪೈಪ್​ನ್ನು ಅವುಗಳತ್ತ ಹಿಡಿಯುತ್ತಿದ್ದಾನೆ. ಹಾಗೇ, ಕೈಯಲ್ಲಿ ತರಕಾರಿಗಳನ್ನು ತಿರುವುತ್ತ, ಅವಕ್ಕೆ ಸ್ಟೀಮ್​ ಕೊಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇದನ್ನೂ ಓದಿ: ಕಾಲುಜಾರಿ ಸತ್ತಳೆಂದು ಕಥೆ ಕಟ್ಟಿದ ಅಪ್ಪ! ಪೋಸ್ಟ್‌ಮಾರ್ಟಮ್‌ನಿಂದ ರಹಸ್ಯ ಬಯಲು

    ವಿಡಿಯೋ ಪೋಸ್ಟ್ ಮಾಡಿರುವ ಸುಪ್ರಿಯಾ ಸಾಹು, ಈ ವ್ಯಕ್ತಿ ತರಕಾರಿಗಳನ್ನು ಶುದ್ಧಿಕರಿಸುತ್ತಿರುವುದನ್ನು ನೋಡಿ. ಈ ವಿಧಾನ ಎಷ್ಟು ಪರಿಣಾಮಕಾರಿ ಎಂಬುದನ್ನು ನಾನು ಪ್ರಮಾಣೀಕರಿಸಲಾರೆ. ಆದರೆ ವಿಸ್ಮಯ ಹೌದು ಎಂದು ಕ್ಯಾಪ್ಷನ್​ ಬರೆದಿದ್ದಾರೆ.

    ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಆದರೆ ಅನೇಕರು ಇದು ತುಂಬ ಅಪಾಯಕಾರಿ ವಿಧಾನ. ಹೀಗೆ ಕುಕ್ಕರ್​ಗೆ ಪೈಪ್​ ಹಾಕಿ ತರಕಾರಿಗಳನ್ನು ಸ್ವಚ್ಛ ಮಾಡುವುದು ಸರಿಯಲ್ಲ. ಕುಕ್ಕರ್​​ನಲ್ಲಿ ನೀರೆಲ್ಲ ಆರಿ ಹೋಗಿ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಮೆಚ್ಚಿಕೊಂಡಿದ್ದಾರೆ.

    ಹಾಗಾಗಿ ವಿಡಿಯೋ ನೋಡಿ ಖುಷಿಪಡಿ..ನೀವು ಟ್ರೈ ಮಾಡೋ ಮುನ್ನ ಯೋಚಿಸಿ…(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts