More

    ಕೊಳದಿಂದ ನೀರನ್ನು ತೆಗೆಯಲು ಬೈಕ್ ಬಳಕೆ; ಅಯ್ಯೋ.. ಬೈಕ್​ನಾ ಹೀಗೂ ಉಪಯೋಗಿಸಬಹುದಾ? ಎಂದ್ರು ನೆಟ್ಟಿಗರು…

    ನವದೆಹಲಿ:ಹಗ್ಗದ ಸಹಾಯದಿಂದ ಬಿಂದಿಗೆಯನ್ನು ಬಾವಿಗೆ ಬಿಟ್ಟು ನೀರನ್ನು ಮೇಲಕ್ಕೆ ಎತ್ತುತ್ತಿದ್ದರು. ಆದರೆ ನಂತರ ಮೆಷಿನ್​ಗಳು ಬಂದವು. ವಿದ್ಯುತ್​ ಹಾಗೂ ಡಿಸೇಲ್​, ಪೆಟ್ರೋಲ್​ ಸಹಾಯದಿಂದ ಯಂತ್ರವನ್ನು ಚಲಾಯಿಸಿ ನೀರನ್ನು ಪೈಪ್​ ಮೂಲಕವಾಗಿ ನೀರನ್ನು ಬಾವಿ, ಕೊಳವೆ ಬಾವಿಯಿಂದ ಮೇಲಕ್ಕೆ ಎತತ್ತಿ ಬಳಕೆ ಮಾಡುತ್ತಿದ್ದರು. ಆದರೆ ಇಂದು ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಬೈಕ್ ಸಹಾಯದಿಂದ ಕೆರೆಯಿಂದ ನೀರು ಪಂಪ್ ಮಾಡಲಾಗುತ್ತಿದೆ. ಇದು ವಿಚಿತ್ರವೆನಿಸುತ್ತದೆ ಆದರೆ ಇದು 100% ನಿಜ.

    ಕೊಳದಿಂದ ನೀರು ತರಲು ಮೋಟಾರ್ ಸೈಕಲ್ ಬಳಸುವುದನ್ನು ನೀವು ನೋಡುತ್ತೀರ. ವೈರಲ್ ಕ್ಲಿಪ್‌ನಲ್ಲಿ, ಬೈಕ್ ಎಂಜಿನ್‌ಗೆ ಮೋಟಾರ್​ ಅವಳವಡಿಕೆ ಮಾಡಲಾಗಿದೆ. ಪೈಪ್​ ಸಂಪರ್ಕಿಸುವ ಮೂಲಕ ಕೊಳದಿಂದ ನೀರನ್ನು ಪಂಪ್ ಮಾಡಲಾಗುತ್ತದೆ. ಒಮ್ಮೆ ವಿಡಿಯೋ ನೋಡಿ… ಈ ವೀಡಿಯೊವನ್ನು Instagram ಪುಟ @makhankhokhar_vlog ಪೋಸ್ಟ್ ಮಾಡಿದ್ದಾರೆ. ಇದು ಇಲ್ಲಿಯವರೆಗೆ 21 ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು 8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಲ್ಲದೆ, ಅನೇಕ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಈ ಜಗ್ತಿನಲ್ಲಿ ಏನೆಲ್ಲಾ ಆಗುತ್ತಿದೆ.. ನಾವು ಹೀಗೂ ಮಾಡಬಹುದು ಎನ್ನುವ ಯೋಚನೆ ಇರಲಿಲ್ಲ ಎಂದು ಕಾಮೆಂಟ್​​ ಮಾಡಿದ್ದಾರೆ.

    ವಿಡಿಯೋ ನೋಡಿದ ಬಳಕೆದಾರರು ಹೀಗೆ ಬರೆದಿದ್ದಾರೆ. ಮತ್ತೊಬ್ಬ ಭಾರತೀಯನಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ. ಇನ್ನು ಕೆಲವರು ಬೈಕ್ ದುರ್ಬಳಕೆ ಮಾಡುತ್ತಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಟರ್ಬೊವನ್ನು ಈ ರೀತಿ ಬಳಸುತ್ತಾರೆ ಎಂದು ಭಾವಿಸಿರಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಅಷ್ಟಕ್ಕೂ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ಸೆರೆಯಾಗಿದ್ದು, ಎಲ್ಲಿ ಎನ್ನುವ ಮಾಹಿತಿ ಇಲ್ಲ.

    ಲಕ್ಷ..ಲಕ್ಷ ಬೆಲೆ ಬಾಳುತ್ತದೆ ಕೃತಿ ಸನೋನ್ ಕೈಲಿರುವ ಬ್ಯಾಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts