More

    ಮದುವೆಯಾಗುತ್ತೇನೆಂದು ನಂಬಿಸಿ ಅಶ್ಲೀಲ ವೈಬ್‌ಸೈಟ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ ಭೂಪ!

    ಬೆಳಗಾವಿ: ಮದುವೆಗೆ ಸಂಬಂಧಿತ ವೈಬ್‌ಸೈಟ್‌ನಲ್ಲಿ ಪರಿಚಯವಾಗಿ ಮದುವೆ ಆಗುವುದಾಗಿ ನಂಬಿಸಿದ ಯುವಕ, ಯುವತಿಯ ಫೋಟೋ ಪಡೆದು ಅಶ್ಲೀಲ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.

    ಪುಣೆಯ ಲುಲ್ಲಾ ನಗರದ ನಿವಾಸಿ ಮೊಹ್ಮದ್‌ಮುಬೀನ್ ಅಬ್ದುಲ್‌ಅಲೀಂ ಸಯ್ಯದ್ (31) ಯುವತಿಗೆ ಮೋಸ ಮಾಡಿದ ವಂಚಕ. ಈ ಬಗ್ಗೆ ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಯುವತಿ ಮಂಗಳವಾರ ದೂರು ಸಲ್ಲಿಸಿದ್ದಾಳೆ.

    ಘಟನೆ ವಿವರ: ಬೆಳಗಾವಿ ನಗರದ ಯುವತಿಯು ಮದುವೆಗೆ ಸಂಬಂಧಿತ ವೈಬ್‌ಸೈಟೊಂದರಲ್ಲಿ 2019ರ ಡಿಸೆಂಬರ್ ತಿಂಗಳಲ್ಲಿ ಪ್ರೊಫೈಲ್ ಅಪ್ಲೋಡ್ ಮಾಡಿದ್ದರು. ಕೆಲವೇ ದಿನಗಳಲ್ಲಿ ಫೋಟೋ ಲೈಕ್ ಮಾಡಿ, ವಾಟ್ಸ್​ಆ್ಯಪ್ ನಂಬರ್ ಹಂಚಿಕೊಂಡಿದ್ದರು. ಮದುವೆ ಆಗುವುದಾಗಿ ನಂಬಿಸಿ, ಯುವತಿಯೊಂದಿಗೆ ಸಲುಗೆಯಿಂದ ವಿಡಿಯೋ ಕಾಲ್ ಮಾಡಿ, ಮಾತನಾಡಿದ್ದಾನೆ. ಬಳಿಕ ತಮ್ಮ ಮನೆಯಲ್ಲಿ ಮದುವೆಗೆ ಒಪ್ಪುತ್ತಿಲ್ಲ ಎಂದು ತಿಳಿಸಿ, ಯುವತಿಗೆ ತಿಳಿಯದ ಹಾಗೆ ಆಕೆಯ ಫೋಟೋ ಪಡೆದು, ಅಶ್ಲೀಲ ವಿಡಿಯೋ ಸಿದ್ಧಪಡಿಸಿ, ಯುವತಿಯ ಮೊಬೈಲ್ ಸಂಖ್ಯೆಯ ಸಮೇತ ಅಶ್ಲೀಲ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿದ್ದಾನೆ.

    ಯುವತಿಯ ಮೊಬೈಲ್‌ಗೆ ಅಪರಿಚತ ಕರೆಗಳು ಬರತೊಡಗಿದವು. ಅಲ್ಲದೆ, ಅಸಭ್ಯವಾಗಿ ವರ್ತಿಸಿದ ಯುವಕರಿಗೆ ಯುವತಿ ಗದರಿಸಿದ್ದು, ಬಳಿಕ ವೆಬ್‌ಸೈಟ್‌ನಲ್ಲಿ ವಿಡಿಯೋ ಹಾಗೂ ಮೊಬೈಲ್ ಸಂಖ್ಯೆ ಅಪ್ಲೋಡ್ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts