More

    ಪಶ್ಚಿಮ ಬಂಗಾಳ: ಡೆಂಗ್ಯೂ ಹರಡುವ ಭಯದಲ್ಲಿ ಸೊಳ್ಳೆ ತುಂಬಿದ ಚೀಲವನ್ನೇ ಆಸ್ಪತ್ರೆಗೆ ತಂದ ವ್ಯಕ್ತಿ..!

    ಪಶ್ಚಿಮ ಬಂಗಾಳದಲ್ಲಿ ವ್ಯಕ್ತಿಯೋರ್ವ ಸೊಳ್ಳೆ ತುಂಬಿದ ಚೀಲವನ್ನೇ ಆಸ್ಪತ್ರೆಗೆ ಕೊಂಡೊಯ್ದಿದ್ದಾನೆ. ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಮಂಗಲಕೋಟೆಯ ಖುರ್ತುಬಾ ಗ್ರಾಮದ ನಿವಾಸಿ ಮನ್ಸೂರ್ ಅಲಿ ಶೇಖ್ ಎಂಬುವರು ಸುಮಾರು 25 ರಿಂದ 30 ಸೊಳ್ಳೆಗಳನ್ನು ಸಂಗ್ರಹಿಸಿ ಪಾಲಿಥಿನ್ ಚೀಲದಲ್ಲಿ ಆಸ್ಪತ್ರೆಗೆ ತಂದು ಕೊಟ್ಟಿದ್ದಾರೆ. ಈ ವ್ಯಕ್ತಿ ಇಷ್ಟೊಂದು ಸೊಳ್ಳೆ ಒಂದೇ ಕಡೆ ಸಿಕ್ಕಿದೆ ಉಇದರಿಂದಾಗಿ ಜಿಗಲೆಯಲ್ಲಿ ಡೆಂಗ್ಯೂ ಹರಡುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾನೆ.


    ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ಡಾ ಜುಲ್ಫಿಕರ್ ಅಲಿ ಈ ವ್ಯಕ್ತಿ ಚಿಕಿತ್ಸೆಗಾಗಿ ಬಂದಿದ್ದಾನೆಂದು ಭಾವಿಸಿದ್ದರು. ಆದರೆ ಚೀಲದಲ್ಲಿ ಸೊಳ್ಳೆ ನೋಡಿದ ಆಸ್ಪತ್ರೆಯ ವೈದ್ರು ಹಾಗು ಸಿಬ್ಬಂದಿ ವರ್ಗದವರು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.

    ಇನ್ನು ಈ ಬಗ್ಗೆ ಮಾತನಾಡಿದ ಮನ್ಸೂರ್ ಅಲಿ ಶೇಖ್, ನನ್ನನ್ನು ರಕ್ಷಿಸಿಕೊಳ್ಳಲು ಮತ್ತು ಸೊಳ್ಳೆ ಸಮಸ್ಯೆಯನ್ನು ನಿಭಾಯಿಸಲು, ನಾನು ಕೆಲವು ಸೊಳ್ಳೆಗಳನ್ನು ಪಾಲಿಥಿನ್ ಚೀಲದಲ್ಲಿ ಹಿಡಿದು ಆಸ್ಪತ್ರೆಗೆ ತಂದಿದ್ದೇನೆ. ಈ ಮೂಲಕ ವೈದ್ಯರೂ ಸೊಳ್ಳೆಗಳನ್ನೂ ಪರೀಕ್ಷಿಸಿ ನನಗೆ ಸೂಕ್ತ ಚಿಕಿತ್ಸೆ ನೀಡ ಬಹುದು ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.


    ಘಟನೆ ಕುರಿತು ಪ್ರತಿಕ್ರಿಯಿಸಿದ ಮಂಗಲಕೋಟೆ ಪಂಚಾಯತ್ ಸಮಿತಿಯ ಮೀನುಗಾರಿಕಾ ಅಧಿಕಾರಿ ಸೈಯದ್ ಬಸೀರ್, ಈ ವಿಷಯವನ್ನು ಬ್ಲಾಕ್ ಆರೋಗ್ಯಾಧಿಕಾರಿ (ಬಿಎಂಒಹೆಚ್) ಮತ್ತು ಬ್ಲಾಕ್ ಅಭಿವೃದ್ಧಿ ಅಧಿಕಾರಿ (ಬಿಡಿಒ) ಗಮನಕ್ಕೆ ತರುವುದಾಗಿ ಹೇಳಿದ್ದಾರೆ.


    ಇನ್ನು ಸೊಳ್ಳೆ ಹಿಡಿದ ಪ್ರದೇಶದಲ್ಲಿ ಅವುಗಳ ನಿಯಂತ್ರಣಕ್ಕೆ ಸೊಳ್ಳೆ ನಿವಾರಕ ಮತ್ತು ಬ್ಲೀಚಿಂಗ್ ಪೌಡರ್ ವಿತರಣೆ ಸೇರಿದಂತೆ ಸೊಳ್ಳೆ ಸಮಸ್ಯೆ ನಿಯಂತ್ರಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪಂಚಾಯತ್ ಸಮಿತಿಯ ಮೀನುಗಾರಿಕಾ ಅಧಿಕಾರಿ ಸೈಯದ್ ಮೇಲಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts