More

    24 ದಿನಗಳ ಕಾಲ ಸಮುದ್ರದಲ್ಲಿ ದಾರಿ ತಪ್ಪಿದ್ದ ವ್ಯಕ್ತಿ, ಟೊಮ್ಯಾಟೊ ಸಾಸ್​ ಹಾಗೂ ಬೆಳ್ಳುಳ್ಳಿ ಪುಡಿ ತಿಂದು ಬದುಕುಳಿದ!

    ನವದೆಹಲಿ: ಕೆರಿಬಿಯನ್ ಸಮುದ್ರದಲ್ಲಿ 24 ದಿನಗಳ ಕಾಲ ದಾರಿ ತಪ್ಪಿದ್ದ ವ್ಯಕ್ತಿಯೊಬ್ಬರು ಕೇವಲ ಟೊಮ್ಯಾಟೊ ಸಾಸ್​ ಹಾಗೂ ಬೆಳ್ಳುಳ್ಳಿ ಪುಡಿ ತಿನ್ನುವ ಮೂಲಕ ಬದುಕುಳಿದಿದ್ದಾರೆ.

    ಎಲ್ವಿಸ್ ಫ್ರಾಂಕೋಯಿಸ್(47) ಎನ್ನುವ ವ್ಯಕ್ತಿ ಕೊಲಂಬಿಯಾದ ಪೋರ್ಟೊ ಬೊಲಿವರ್‌ನಿಂದ ವಾಯುವ್ಯ ದಿಕ್ಕಿಗೆ 120 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಪತ್ತೆಯಾಗಿದ್ದಾರೆ. ವಿಮಾನವೊಂದು ಹಾಯಿದೋಣಿ ಒಂದರಲ್ಲಿ HELP ಎಂಬ ಪದವನ್ನು ಕೆತ್ತಲಾಗಿದೆ ಎಂದು ಕೊಲಂಬಿಯಾದ ನೌಕಾಪಡೆ ಗುರುವಾರ ತಿಳಿಸಿದೆ. ಈ ಮಾಹಿತಿ ಆಧರಿಸಿ ಫ್ರಾಂಕೋಯಿಸ್​ ಅವರನ್ನು ರಕ್ಷಿಸಲಾಗಿದೆ.

    ‘ನನ್ನಲ್ಲಿ ಆಹಾರ ಇರಲಿಲ್ಲ. ದೋಣಿಯಲ್ಲಿದ್ದ ಕೆಚಪ್ ಬಾಟಲಿ, ಬೆಳ್ಳುಳ್ಳಿ ಪುಡಿಯನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ತಿನ್ನುತ್ತಿದ್ದೆ’ ಎಂದು ಕೊಲಂಬಿಯಾ ಸೇನೆ ಸಾರ್ವಜನಿಕರಿಗೆ ಒದಗಿಸಿದ ವೀಡಿಯೊದಲ್ಲಿ ಫ್ರಾಂಕೋಯಿಸ್ ಹೇಳಿದ್ದಾರೆ.

    ದ್ವೀಪ ರಾಷ್ಟ್ರವಾದ ಡೊಮಿನಿಕಾದಿಂದ ಫ್ರಾಂಕೋಯಿಸ್ ಅವರು ಡಿಸೆಂಬರ್‌ನಲ್ಲಿ ಸೇಂಟ್ ಮಾರ್ಟಿನ್ ದ್ವೀಪದ ಡಚ್ ಭಾಗದ ಬಳಿ ತಮ್ಮ ದೋಣಿಯನ್ನು ರಿಪೇರಿ ಮಾಡುತ್ತಿದ್ದಾಗ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ದೋಣಿಯನ್ನು ಸಮುದ್ರಕ್ಕೆ ಎಳೆದವು ಎಂದು ಅವರು ತಿಳಿಸಿದ್ದಾರೆ.

    ಅವರಿಗೆ ದೋಣೀ ನಡೆಸುವುದು ಗೊತ್ತಿರದ ಕಾರಣ ದೋಣಿಯನ್ನು ಮರಳಿ ದಡಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು 24 ದಿನಗಳ ಕಾಲ ಸಮುದ್ರದಲ್ಲಿ ಕಳೆದುಹೋಗಿದ್ದಾರೆ.

    “ಇಪ್ಪತ್ನಾಲ್ಕು ದಿನಗಳ ಕಾಲ ನೆಲದ ನಂಟು ಇಲ್ಲ, ಮಾತನಾಡಲು ಯಾರೂ ಇಲ್ಲ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ನಾನು ಎಲ್ಲಿದ್ದೆ ಎಂದು ಗೊತ್ತಾಗಿಲ್ಲ. ಈ ಅನುಭವ ಒರಟಾಗಿತ್ತು” ಎಂದು ಫ್ರಾಂಕೋಯಿಸ್​ ಹೇಳಿದರು.

    ರಕ್ಷಿಸಿದ ನಂತರ , ಅವರನ್ನು ಕಾರ್ಟಜೆನಾ ಎಂಬ ಬಂದರು ನಗರಕ್ಕೆ ವರ್ಗಾಯಿಸಲಾಯಿತು, ಅಲ್ಲಿ ಅವರು ವೈದ್ಯಕೀಯ ಚಿಕಿತ್ಸೆಯನ್ನು ಪಡೆದರು. ನಂತರ ಅವರನ್ನು ಮನೆಗೆ ಹಿಂದಿರುಗಿಸಲು ವಲಸೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು ಎಂದು ಕೊಲಂಬಿಯಾದ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts