More

    ‘ಕರ್ನಾಟಕ ಕೇಂದ್ರದ ಪಾಲಿಗೆ ಎರಡನೇ ದರ್ಜೆಯ ರಾಜ್ಯವೇ?’ ಎಂದು ಪ್ರಶ್ನಿಸಿದ ಗುಂಡೂರಾವ್​

    ಬೆಂಗಳೂರು: ‘ಬೆಂಗಳೂರಿನಲ್ಲಿದ್ದ UGC ಕಚೇರಿಯನ್ನು ಸದ್ದಿಲ್ಲದಂತೆ ದೆಹಲಿಗೆ ಸ್ಥಳಾಂತರಿಸಲಾಗಿದೆ. ಇದು ಕೇಂದ್ರದ BJP ಸರ್ಕಾರ ಕರ್ನಾಟಕಕ್ಕೆ ಬಗೆಯುತ್ತಿರುವ ದ್ರೋಹ. UGC ಕಚೇರಿ ಸ್ಥಳಾಂತರವಾದರೂ ಬೊಮ್ಮಾಯಿಯವರಾಗಲಿ ಉನ್ನತ ಶಿಕ್ಷಣ ಸಚಿವರಾಗಲಿ ಯಾಕೆ ಎಂದು ಕೇಳಿಲ್ಲ?’ ಎಂದು ಟ್ವಿಟರ್​ನಲ್ಲಿ ಪ್ರಶ್ನಿಸಿದ್ದಾರೆ.

    ಈ ಬಗ್ಗೆ ಸರ್ಕಾರಕ್ಕೆ ಟ್ವಿಟರ್​ನಲ್ಲಿ ಟೀಕೆಗೆ ಮಾಡಿರುವ ದಿನೇಶ್​ ಗುಂಡೂರಾವ್​, ‘ಕೊನೆಯ ಪಕ್ಷ UGC ಕಚೇರಿ ಇಲ್ಲೇ ಉಳಿಯುವಂತೆ ಸಣ್ಣ ಪ್ರಯತ್ನವನ್ನೂ ಮಾಡಿಲ್ಲ. UGC ದೆಹಲಿಗೆ ಸ್ಥಳಾಂತರವಾಗಿರುವುದರಿಂದ ರಾಜ್ಯದ ವಿದ್ಯಾರ್ಥಿಗಳು,ವಿವಿ ಆಡಳಿತ ಮಂಡಳಿಗಳು ತೊಂದರೆಗೆ ಸಿಲುಕಲಿದ್ದಾರೆ‌. ಸಣ್ಣ ಸಮಸ್ಯೆಗಳಿಗೂ ದೆಹಲಿಗೆ ಹೋಗಲು ವಿದ್ಯಾರ್ಥಿಗಳಿಗೆ ಸಾಧ್ಯವೇ.? ಕೇಂದ್ರ ಸರ್ಕಾರ ರಾಜ್ಯಕ್ಕೆ ಸಿಕ್ಕಿರುವ ಸವಲತ್ತುಗಳನ್ನೆಲ್ಲಾ ಹಿಂದಕ್ಕೆ ಪಡೆಯುತ್ತಿದೆ ಕರ್ನಾಟಕ ಕೇಂದ್ರದ ಪಾಲಿಗೆ ಎರಡನೇ ದರ್ಜೆಯ ರಾಜ್ಯವೇ?’ ಎಂದು ಪ್ರಶ್ನಿಸಿದ್ದಾರೆ.

    'ಕರ್ನಾಟಕ ಕೇಂದ್ರದ ಪಾಲಿಗೆ ಎರಡನೇ ದರ್ಜೆಯ ರಾಜ್ಯವೇ?' ಎಂದು ಪ್ರಶ್ನಿಸಿದ ಗುಂಡೂರಾವ್​

    ತಮ್ಮ ಇನ್ನೊಂದು ಟ್ವೀಟ್​ನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಮೇಲೆ ವಾಗ್ದಾಳಿ ಮಾಡಿದ್ದು ‘ಸಿಎಂ ಬಾಯಿ ಬಿಟ್ಟರೆ ‘ಧಮ್-ತಾಕತ್’ನ ಮಾತಾಡುತ್ತಾರೆ. ಈಗ ಬೊಮ್ಮಾಯಿಯವರು ತಮ್ಮ ಧಮ್ ತಾಕತ್ತನ್ನು ಮೂಟೆ ಕಟ್ಟಿ ಇಟ್ಟಿದ್ದರಾ? ಬೊಮ್ಮಾಯಿಯವರಿಗೆ ಮೈಕ್ ಮುಂದೆ ಮಾತ್ರ ಧಮ್-ತಾಕತ್ತಿನ ಪ್ರದರ್ಶನವೇ? ಬೊಮ್ಮಾಯಿಯವರಿಗೆ ನಿಜವಾದ ಧಮ್-ತಾಕತ್ತು ಇದ್ದರೆ UGCಯನ್ನು ಮರಳಿ ಬೆಂಗಳೂರಿಗೆ ತರಲಿ’ ಎಂದು ಬಿಜಪಿಗೆ ಟ್ವೀಟ್ ಮೂಲಕ ದಿನೇಶ್ ಗುಂಡೂರಾವ್ ಸವಾಲು ಹಾಕಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts