More

    ಸಿಂಗಾಪುರ್​ ವಿಮಾನ ನಿಲ್ದಾಣದಲ್ಲಿ ಕರೊನಾ ಎಂದು ಕೂಗಾಡಿದ ಭಾರತೀಯನ ಬಂಧನ

    ಪೆನಾಂಗ್​: ಸಿಂಗಾಪೂರ್​ನಲ್ಲಿ ವಾಸವಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬ ಅಲ್ಲಿನ ಛಾಂಗಿ ವಿಮಾನ ನಿಲ್ದಾಣದಲ್ಲಿರುವ ಹೋಟೆಲ್​ ನೆಲಹಾಸಿನ ಮೇಲೆ ಉಗಿದಿದ್ದಲ್ಲದೆ, ಕರೊನಾ…ಕರೊನಾ ಎಂದು ಕೂಗಾಡಿದ್ದಕ್ಕೆ 2 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

    ಜಾಸ್ವಿಂದ್​ ಸಿಂಗ್​ ಮೆಹರ್​ ಸಿಂಗ್​(52) ಬಂಧಿತ ಆರೋಪಿ. ಸಾರ್ವಜನಿಕ ಸ್ಥಳದಲ್ಲಿ ಕಿರಿಕಿರಿ ಉಂಟುಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ.

    ಮಾರ್ಚ್​ 3ರ ಬೆಳಗ್ಗೆ 10:30ಕ್ಕೆ ರೆಸ್ಟೋರೆಂಟ್​ಗೆ ತೆರಳಿದ ಸಿಂಗ್​, ಹೋಟೆಲ್​ ಸಿಬ್ಬಂದಿಗೂ ಮಾಹಿತಿ ನೀಡದೆ ಪ್ಲೇಟ್​ ತೆಗೆದುಕೊಂಡು ತಿಂಡಿಯನ್ನು ಹಾಕಕೊಳ್ಳಲು ಮುಂದಾದರು. ಈ ವೇಳೆ ಹೋಟೆಲ್​ ಮ್ಯಾನೇಜರ್​ ವಿಕ್ರಮ್​ ಓಂ ಪ್ರಕಾಶ್​ ರಾವ್​ ಕಕ್ರೋ ಸಿಂಗ್​ಗೆ ಮಾರ್ಗದರ್ಶನ ಮಾಡಿ, ಸೀಟ್​ನಲ್ಲಿ ಕೂರುವಂತೆ ಹೇಳಿ ಸೆಕ್ಯುರಿಟಿ ಮ್ಯಾನೇಜರ್​ರೊಟ್ಟಿಗೆ ಫೋನ್​ನಲ್ಲಿ ಬಿಜಿಯಾಗಿದ್ದರು.

    ಇದೇ ಸಂದರ್ಭದಲ್ಲಿ ಸಿಂಗ್​ ಮತ್ತೆ ಎದ್ದು ಬಂದು ಪ್ಲೇಟ್ಸ್​ಗಳನ್ನು ಮುರಿದು ಹಾಕಿದ್ದಾರೆ. ಅದನ್ನು ವಿಕ್ರಮ್ ತಡೆದು ಸಿಂಗ್​ರನ್ನು ಸೋಫಾ ಮೇಲೆ ಮತ್ತೆ ಕೂರಿಸಿದ್ದಾರೆ.​ ಆದರೆ, ಟೇಬಲ್​ ಮೇಲೆ ಎರಡು ಕಾಲುಗಳನ್ನಿಟ್ಟಿದಲ್ಲದೆ, ಟೇಬಲ್​ ಒದಿಯುವ ಮೂಲಕ ದರ್ಪ ಮೆರೆದಿದ್ದಾರೆ. ಎರಡು ಬಾರಿ ನೆಲಹಾಸಿನ ಮೇಲೆ ಉಗಿದಿದ್ದಲ್ಲದೆ, ಕರೊನಾ… ಕರೊನಾ ಎಂದು ಕೂಗಾಡಿದ್ದಾರೆ.

    ಊಟ ಮುಗಿದಿದೆ ಎಂದು ವೇಟರ್ ಹೇಳಿದ್ದಕ್ಕೆ ಕೋಪಗೊಂಡ ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದ್ದು, ಸದ್ಯ ಬಂಧನಕ್ಕೆ ಒಳಗಾಗಿರುವ ಸಿಂಗ್​ 2 ತಿಂಗಳ ಜೈಲು ಶಿಕ್ಷೆಯೊಂದಿಗೆ ಭಾರಿ ದಂಡವನ್ನು ಕಟ್ಟಬೇಕಾಗಿದೆ. (ಏಜೆನ್ಸೀಸ್​)

    ವಿಡಿಯೋ ಸಂದೇಶ ಪ್ರಕಟಿಸಿದ್ರು ಪ್ರಧಾನಿ ನರೇಂದ್ರ ಮೋದಿ!: ಏಪ್ರಿಲ್ 5ರ ರಾತ್ರಿ 9ಕ್ಕೆ 9 ನಿಮಿಷ ನೀಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts