More

    ಡಿಸಿ ಕಚೇರಿ ಎದುರೇ ಆಜಾನ್​ ಕೂಗಿದ್ದ ಯುವಕ ವಿಧಾನಸೌಧದಲ್ಲೂ ಕೂಗುತ್ತೇವೆ ಎಂದ!

    ಶಿವಮೊಗ್ಗ: ಜಿಲ್ಲೆಯಲ್ಲಿ ಫ್ಲೆಕ್ಸ್ ತೆರವು, ಹಿಜಾಬ್ ವಿವಾದದ ಬೆನ್ನಲ್ಲೇ ಇದೀಗ ಆಜಾನ್ ವಿವಾದ ಸೃಷ್ಟಿಯಾಗಿದೆ. ಶಾಸಕ ಕೆ.ಎಸ್.ಈಶ್ವರಪ್ಪ ಅವರು ಆಜಾನ್ ವಿಚಾರದಲ್ಲಿ ಲಘುವಾಗಿ ಮಾತನಾಡಿದ್ದಾರೆಂದು ಆರೋಪಿಸಿ ಮುಸ್ಲಿಂ ಸಂಘಟನೆಗಳು ಡಿಸಿ ಕಚೇರಿ ಎದುರು ನಡೆಸಿದ ಧರಣಿ ವೇಳೆ ಪ್ರತಿಭಟನಾಕಾರನೊಬ್ಬ ಆಜಾನ್ ಕೂಗಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಆಜಾನ್ ಕೂಗಿದ ವ್ಯಕ್ತಿಗೆ ಎಚ್ಚರಿಕೆ ನೀಡಿ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿಕೊಂಡಿದೆ.

    ಆ ಯುವಕ ಡಿಸಿ ಕಚೇರಿ ಎದುರು ಆಜಾನ್ ಕೂಗಿದ ಕ್ಷಣ ಹೀಗಿತ್ತು: 

    ಕಳೆದ ಶುಕ್ರವಾರ ಮುಸ್ಲಿಂ ಸಂಘಟನೆಗಳು ಈಶ್ವರಪ್ಪ ಹೇಳಿಕೆ ವಿರುದ್ಧವಾಗಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಆಕ್ರೋಶಭರಿತನಾದ ವ್ಯಕ್ತಿ ಮುಖಂಡರ ವಿರೋಧದ ನಡುವೆಯೂ ಡಿಸಿ ಕಚೇರಿ ಎದುರೇ ಆಜಾನ್ ಕೂಗಿದ್ದಾನೆ. ಆತ ಆಜಾನ್ ಕೂಗಿರುವುದು ಕೆಲವರು ಮೊಬೈಲ್​ಗಳಲ್ಲಿ ರೇಕಾರ್ಡ್ ಮಾಡಿಕೊಂಡಿದ್ದು ಫೇಸ್‌ಬುಜ್‌ವೊಂದರಲ್ಲಿ ಪ್ರಕಟಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಡಿಸಿ ಕಚೇರಿ ಎದುರು ಆಜಾನ್​ ಕೂಗಿದ್ದಕ್ಕೆ ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ?

    ಆಜಾನ್ ಕೂಗಿದ್ದಕ್ಕೆ ಸ್ಥಳದಲ್ಲಿದ್ದ ಪೊಲೀಸರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಡಿಸಿ ಕಚೇರಿ ಮುಂದೆ ಆಜಾನ್ ಕೂಗದಂತೆ ಪೊಲೀಸರ ತಾಕೀತು ಮಾಡಿ ಕಳುಹಿಸಿದ್ದಾರೆ.

    ಡಿಸಿ ಕಚೇರಿ ಮೇಲೆ ಹತ್ತಿ ಆಜಾನ್ ಕೂಗಿದ್ದರ ಬಗ್ಗೆ ಸಿ.ಟಿ. ರವಿ ಪ್ರತಿಕ್ರಿಯೆ ಹೀಗಿತ್ತು: 

    ವಿಧಾನಸೌಧದಲ್ಲೂ ಆಜಾನ್ ಕೂಗುತ್ತೇವೆ..!

    ಆಜಾನ್ ಬಗ್ಗೆ ಮಾತನಾಡುವುದಕ್ಕೆ ಈಶ್ವರಪ್ಪ ಯಾರೆಂದು ಪ್ರಶ್ನಿಸಿದ ಯುವಕ, ಇವತ್ತು ಇಲ್ಲಿ ಕೂಗಿದ್ದೇವೆ, ನಾಳೆ ವಿಧಾನಸೌಧದಲ್ಲಿ ಕೂಗುತ್ತೇವೆ ಎಂದು ಸವಾಲು ಹಾಕಿದ್ದಾನೆ. ಈ ವೇಳೆ ಆಜಾನ್ ಕೂಗಿದ ಯುವಕನಿಗೆ ಪ್ರತಿಭಟನೆಯಲ್ಲಿದ್ದ ಮುಸ್ಲಿಂ ಮುಖಂಡರೇ ಆಜಾನ್ ಕೂಗಿದ್ದೇಕೆ ಎಂದು ಪ್ರಶ್ನೆ ಕೂಡ ಮಾಡಿದ್ದಾರೆ. ಮುಖಂಡರು ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಆತನಿಗೆ ಬುದ್ಧಿ ಹೇಳಿ ವಾಪಸ್ ಕಳುಹಿಸಿದ್ದಾರೆ.

    ಶುಕ್ರವಾರ (ಮಾ.17) ಡಿಸಿ ಕಚೇರಿ ಮುಂದೆ ಆಜಾನ್ ಕೂಗಿದ ವ್ಯಕ್ತಿಯನ್ನು ಕರೆಸಿ ಎಚ್ಚರಿಕೆ ನೀಡಿ ಮುಂಜಾಗ್ರತಾ ಪ್ರಕರಣ ದಾಖಲಿಸಲಾಗಿದೆ. ಘಟನೆ ಸಮಯದಲ್ಲಿ ಹಾಜರಿದ್ದ ವ್ಯಕ್ತಿಗಳ ಪೂರ್ವಾಪರದ ಮಾಹಿತಿ ಕಲೆಹಾಕಲಾಗುತ್ತಿದೆ. ಈ ಮಾಹಿತಿ ಆಧಾರದ ಮೇಲೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts