More

    ಕೆಲಸದಾಕೆಯ ಕೆಲಸಕ್ಕೆ ಫಿದಾ ಆಗಿ 75 ರೂಪಾಯಿಗೆ ಸಲೂನ್ ಮಾರಿದ ಓನರ್!

    ವಾಷಿಂಗ್ಟನ್: ಕೆಲಸಗಾರರನ್ನು ಹೀನಾಯವಾಗಿ ನೋಡಿಕೊಳ್ಳುವ ಕೆಲ ಕಂಪನಿ ಮತ್ತು ಶಾಪ್​ಗಳನ್ನು ನೋಡಿರುತ್ತೀರಿ. ಆದರೆ ಈ ಸ್ಟೋರಿ ಸ್ವಲ್ಪ ಡಿಫರೆಂಟ್. 15 ವರ್ಷದಿಂದ ಕೆಲಸ ಮಾಡುತ್ತಿದ್ದ ಮಹಿಳೆಯ ಕೆಲಸಕ್ಕೆ ಫಿದಾ ಆದ ಶಾಪ್ ಓನರ್ ಆಕೆಗೆ ಪೂರ್ತಿ ಶಾಪ್​ ಅನ್ನು ಕೇವಲ ಒಂದು ಡಾಲರ್ ಅಂದರೆ ಸರಿ ಸುಮಾರು 75 ರೂಪಾಯಿಗೆ ಮಾರಾಟ ಮಾಡಿದ್ದಾನೆ.

    ಹೌದು! ಇಂತದ್ದೊಂದು ಘಟನೆ ದೂರದ ಅಮೆರಿಕದಲ್ಲಿ ನಡೆದಿದೆ. ಅಲ್ಲಿ ಪಿಯೊ ಇಂಪೆರತಿ (79) ಹೆಸರಿನ ವ್ಯಕ್ತಿ ಸಲೂನ್ ಒಂದನ್ನು ನಡೆಸುತ್ತಿದ್ದಾನೆ. 1965ರಲ್ಲಿ ಆ ಸೆಲೂನ್ ಆರಂಭಿಸಿದ್ದಾಗಿ ಹೇಳಲಾಗಿದೆ. 15 ವರ್ಷಗಳ ಹಿಂದೆ ತನ್ನ ವಿದ್ಯಾಭ್ಯಾಸ ಮುಗಿಸಿದ ಕ್ಯಾಥಿ ಮೌರಾ ಕೆಲಸಕ್ಕಾಗಿ ಸಾಕಷ್ಟು ಹುಡುಕಾಟ ನಡೆಸಿದ್ದಳಂತೆ. ಆದರೆ ಅನುಭವವಿಲ್ಲದ ಆಕೆಯನ್ನು ಕೆಲಸಕ್ಕೆ ತೆಗೆದುಕೊಳ್ಳಲು ಯಾರೊಬ್ಬರೂ ಒಪ್ಪಿರಲಿಲ್ಲವಂತೆ. ಆಗ ಆಕೆ ಇಂಪೆರತಿಯನ್ನು ಸಂಪರ್ಕಿಸಿ ಅವರ ಸಲೂನ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಳು.

    15 ವರ್ಷಗಳಿಂದ ಕ್ಯಾಥಿ ಮೌರಾ ಅತ್ಯಂತ ಪ್ರಾಮಣಿಕವಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾಳಂತೆ. ಆಕೆ ಒಬ್ಬ ಉತ್ತಮ ಹೇರ್​ ಡ್ರೆಸ್ಸರ್ ಆಗಿ ಗ್ರಾಹಕರ ಮನಸ್ಸನ್ನು ಗೆದ್ದಿದ್ದಾಳಂತೆ. ಅದೇ ಖುಷಿಯಲ್ಲಿ ಇಂಪೆರತಿ ಆಕೆಗೆ ತನ್ನ ಸಲೂನ್​ ಅನ್ನು ಮಾರಾಟ ಮಾಡಿದ್ದಾನೆ. ಕೇವಲ ಒಂದು ಡಾಲರ್ ಅಂದರೆ ಭಾರತೀಯ ಕರೆನ್ಸಿಯಲ್ಲಿ ಕೇವಲ 75 ರೂಪಾಯಿಗೆ ಮಾರಾಟ ಮಾಡಲಾಗಿದೆ. ಅದರ ಹೊರೆತಾಗಿ ಪ್ರತಿ ತಿಂಗಳು ಸಣ್ಣ ಪ್ರಮಾಣದಲ್ಲಿ ಬಾಡಿಗೆಯನ್ನು ಕ್ಯಾಥಿ ಕಟ್ಟಲಿದ್ದಾಳಂತೆ.

    ಚಿಕ್ಕ ವಯಸ್ಸಿನಿಂದಲೂ ನನ್ನದೇ ಆದ ಬಿಜಿನೆಸ್ ಮಾಡಬೇಕೆಂಬ ಕನಸಿತ್ತು. ಆದರೆ ಅದು ಈ ರೀತಿಯಲ್ಲಿ ನನಸಾಗುತ್ತದೆ ಎಂದು ಎಂದುಕೊಂಡಿರಲಿಲ್ಲ. ಇಂಪೆರತಿಗೆ ಅದೆಷ್ಟು ಧನ್ಯವಾದ ಹೇಳಿದರೂ ಸಾಲದು ಎನ್ನುತ್ತಾಳೆ 32 ವರ್ಷದ ಕ್ಯಾಥಿ. (ಏಜೆನ್ಸೀಸ್)

    ರಾಜ್ಯದಲ್ಲಿ ಪತ್ತೆಯಾಯ್ತು ಮತ್ತೊಂದು ಡೆಲ್ಟಾ ಪ್ಲಸ್ ಪ್ರಕರಣ! ಎರಡು ತಿಂಗಳ ಹಿಂದಿನ ಸ್ಯಾಂಪಲ್​ನಲ್ಲಿ ಸೋಂಕು ದೃಢ

    ರಾಜ್ಯದಲ್ಲಿ ಇಂದು ಪತ್ತೆಯಾದ ಕರೊನಾ ಪ್ರಕರಣಗಳ ಸಂಖ್ಯೆ ಎಷ್ಟು? ಮತ್ತೆ ಏರಿಕೆಯಾಯ್ತಾ ಮರಣ ಪ್ರಮಾಣ?

    ಬಿಗ್​ಬಾಸ್ ಮನೆಯಿಂದ ಹೊರಬಂದ ರಘು ಮೊದಲು ಭೇಟಿ ಆಗೋದು ಯಾರನ್ನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts