More

    ಚಲಿಸುತ್ತಿರುವ ರೈಲು ಹತ್ತಬಾರದು ಅನ್ನುವುದು ಇದಕ್ಕೇ; ಬಲಗಾಲು ಕಳೆದುಕೊಂಡ 26ರ ಯುವಕ…

    ಮುಂಬೈ: ಸಿನಿಮಾ ದೃಶ್ಯಗಳಲ್ಲಿ ಚಲಿಸುತ್ತಿರುವ ರೈಲಿಗೆ ಹತ್ತುವುದು, ಇಳಿಯುವುದು ಮುಂತಾದ ಸ್ಟಂಟ್ ಗಳನ್ನು ತೋರಿಸಲಾಗುತ್ತದೆ. ಆದರೆ ಅದು ಯಾವುದೂ ಸುರಕ್ಷಿತವಲ್ಲ. ಪ್ಲಾಟ್ ಫಾರ್ಮ್ ಮೇಲೆ ನಿಂತಿರುವ ಸಿಬ್ಬಂದಿ ಅದೆಷ್ಟೇ ಬಾರಿ ಹೇಳಿದರೂ ಕೆಲವೊಮ್ಮೆ ಜನರು ಮಾತ್ರ ಯಾರ ಮಾತನ್ನೂ ಕೇಳವುದಿಲ್ಲ. ಇಂತಹದೇ ಸನ್ನಿವೇಶ ಒಂದರಲ್ಲಿ ವ್ಯಕ್ತಿಯೊಬ್ಬರು ಚಲಿಸುತ್ತಿರುವ ರೈಲಿಗೆ ಹತ್ತಲು ಪ್ರಯತ್ನಿಸಿದಾದ ತಮ್ಮ ಬಲಗಾಲನ್ನು ಕಳೆದುಕೊಂಡಿದ್ದಾರೆ

    ಈ ಘಟನೆ ಕುರಿತಾಗಿ ಕಮಲ್ ಮಿಶ್ರಾ ಎನ್ನುವವರು ಟ್ವೀಟ್ ಮಾಡಿದ್ದು”ದಯವಿಟ್ಟು ಚಲಿಸುವ ರೈಲುಗಳನ್ನು ಹತ್ತುವುದು/ಇಳಿಯುವುದು ಮಾಡಬೇಡಿ. ಬುಧವಾರ ರಾತ್ರಿ ಪ್ಲಾಟ್‌ಫಾರ್ಮ್ ಒಂದರ ಮೇಲೆ ನಡೆದುಕೊಂಡು ಹೋಗುತ್ತಿದ್ದ 26 ವರ್ಷದ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಲೋಕಲ್ ರೈಲನ್ನು ಹತ್ತಲು ಪ್ರಯತ್ನಿಸುತ್ತಿದ್ದಾಗ ತನ್ನ ಬಲಗಾಲನ್ನು ಕಳೆದುಕೊಂಡನು” ಎಂದು ಬರೆದುಕೊಂಡಿದ್ದಾರೆ.

    ಕಾಂದಿವಲಿ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ 11.54ರ ಸುಮಾರಿಗೆ ಚಲಿಸುವ ರೈಲನ್ನು ಹತ್ತಲು ಪ್ರಯತ್ನಿಸುತ್ತಿದ್ದಾಗ ವ್ಯಕ್ತಿಯೊಬ್ಬರು ತಮ್ಮ ಬಲಗಾಲನ್ನು ಕಳೆದುಕೊಂಡಿದ್ದಾರೆ.

    ಈ ಘಟನೆಗೆ ಸಾಕ್ಷಿಯಾದ ಸ್ಟೇಷನ್ ಮಾಸ್ಟರ್ ಮತ್ತು ಸಿಬ್ಬಂದಿ ತೆಗೆದುಕೊಂಡ ತ್ವರಿತ ನಿರ್ಧಾರಗಳು 26 ವರ್ಷದ ಯುವಕನ ಜೀವವನ್ನು ಉಳಿಸಲು ಸಹಾಯ ಮಾಡಿದವು. ಈ ಭಯಾನಕ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಆ ವ್ಯಕ್ತಿಯು ಚಲಿಸುತ್ತಿದ್ದ ರೈಲನ್ನು ಹತ್ತಲು ಪ್ರಯರ್ನಿಸಿದಾಗ ತನ್ನ ಸಮತೋಲನವನ್ನು ಕಳೆದುಕೊಂಡು ಫುಟ್ ಬೋರ್ಡ್ ಮತ್ತು ಪ್ಲಾಟ್ ಫಾರ್ಮ್ ನಡುವಿನ ಜಾಗದಲ್ಲಿ ಹಳಿಗೆ ಜಾರಿದ್ದಾರೆ. ಈ ಸಂದರ್ಭ ಅವರು ತಮ್ಮ ಬಲಗಾಲನ್ನು ಕಳೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts